ಮತದಾನದ ಕಾರ್ಯದಲ್ಲಿ ಇರುವ ೨೫ ಸಿಬ್ಬಂದಿಗಳ ಸಾವು
ನವ ದೆಹಲಿ – ಕಳೆದ ೪ ದಿನದಲ್ಲಿ ಉಷ್ಣತೆ ಮತ್ತು ಉಷ್ಣಘಾತದಿಂದ ೭ ರಾಜ್ಯಗಳಲ್ಲಿನ ೩೨೦ ಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಕಾರ್ಯನಿರತ ೨೫ ಸಿಬ್ಬಂದಿಗಳು ಒಂದೇ ದಿನದಲ್ಲಿ ಶಾಖದಿಂದ ಸಾವನ್ನಪ್ಪಿದ್ದಾರೆ.
೧. ಉತ್ತರಪ್ರದೇಶದಲ್ಲಿ ಕಳೆದ ೩ ದಿನದಲ್ಲಿ ೧೦೦ ಜನರು ಉಷ್ಣತೆಯಿಂದ ಸಾವನ್ನಪ್ಪಿದ್ದಾರೆ. ಬಿಹಾರದಲ್ಲಿ ಕಳೆದ ೨ ದಿನದಲ್ಲಿ ೬೩ ಜನರು ಸಾವನ್ನಪ್ಪಿದ್ದಾರೆ. ರಾಜಸ್ಥಾನದಲ್ಲಿ ೬೦, ಜಾರ್ಖಂಡದಲ್ಲಿ ೩೭, ಒಡಿಸ್ಸಾದಲ್ಲಿ ೧೮, ಮಧ್ಯಪ್ರದೇಶದಲ್ಲಿ ೨ ಮತ್ತು ದೆಹಲಿಯಲ್ಲಿ ಕಳೆದ ೪ ದಿನದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
೨. ಜಾರ್ಖಂಡದಲ್ಲಿ ೧ ಸಾವಿರದ ೩೨೬ ಜನರು ಉಷ್ಣತೆಯ ಪರಿಣಾಮದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ಸ್ಥಳಗಳಲ್ಲಿ ಉಷ್ಣತೆಯಿಂದಾಗಿ ವಾರ್ಡಿನಲ್ಲಿ ಜಾಗಗಳು ಖಾಲಿ ಇಲ್ಲ.
೩. ವಾರಣಾಸಿಯ ಮಣಿಕರ್ಣಿಕ ಘಾಟದಲ್ಲಿ ಪ್ರತಿದಿನ ಅಂತ್ಯ ಸಂಸ್ಕಾರಕ್ಕಾಗಿ ೫ ಪಟ್ಟು ಹೆಚ್ಚಿನ ಶವಗಳು ಬರುತ್ತವೆ. ಮಹಾಸ್ಮಶಾನ ಸೇವಾ ಸಮಿತಿಯ ಕಾರ್ಯದರ್ಶಿ ಬಿಹಾರಿಲಾಲ ಗುಪ್ತ ಇವರು, ”ಕಳೆದ ೨ ದಿನದಿಂದ ಹೆಚ್ಚಿರುವ ಉಷ್ಣತೆಯಿಂದ ಒತ್ತಡ ಹೆಚ್ಚಾಗಿದೆ.” ಎಂದು ಹೇಳಿದರು. ಡೋಮ ರಾಜ ಓಂ ಚೌದರಿ ಇವರು, ಕೊರೊನಾ ಮಹಾಮಾರಿಯ ನಂತರ ಮೊದಲ ಬಾರಿ ಅಂತ ಸಂಸ್ಕಾರಕ್ಕಾಗಿ ಇಷ್ಟೊಂದು ಜಂಗುಳಿ ಹೆಚ್ಚಾಗಿದೆ ಎಂದು ಹೇಳಿದರು.
೪. ಅಯೋಧ್ಯೆಯಲ್ಲಿ ಕಳೆದ ೫ ದಿನಗಳಲ್ಲಿ ೨೧ ಅಪರಿಚಿತ ಶವಗಳು ದೊರೆತಿವೆ. ಉಷ್ಣತೆಯಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದಿದೆ.