12 ರಿಂದ 15 ದರೋಡೆಕೋರರು
ವಾಷಿಂಗ್ಟನ (ಅಮೇರಿಕಾ) – ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ನೆವಾರ್ಕನಲ್ಲಿ ಭಾರತೀಯ ಮೂಲದ ಅಮೇರಿಕನ ನಾಗರಿಕರ ಆಭರಣ ಅಂಗಡಿಯ ಮೇಲೆ ದರೋಡೆ ನಡೆದಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಪೊಲೀಸರು ದರೋಡೆಕೋರರನ್ನು ಹುಡುಕುತ್ತಿದ್ದಾರೆ. ಪೊಲೀಸರು, ನಿರ್ದಿಷ್ಟವಾಗಿ ಎಷ್ಟು ರೂಪಾಯಿಗಳ ದರೋಡೆ ಮಾಡಲಾಗಿದೆ ? ಎನ್ನುವುದು ಇದುವರೆಗೂ ಸ್ಪಷ್ಟವಾಗಿಲ್ಲವಾದರೂ ಈ ಮೊತ್ತ ಬಹಳ ದೊಡ್ಡದಿದೆ ಎಂದು ಹೇಳಿದ್ದಾರೆ.
‘ಭಿಂಡಿ ಜ್ಯುವೆಲರ್ಸ’ ಅಂಗಡಿಯ ಹೆಸರಾಗಿದೆ. ಮೇ 29 ರಂದು ಮಧ್ಯರಾತ್ರಿ ಈ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳು ಮಾತನಾಡಿ, 12 ರಿಂದ 15 ಪುರುಷರು ಮತ್ತು ಮಹಿಳೆಯರು ಮಾಸ್ಕ ಮತ್ತು ಕೈಗವಸು ಧರಿಸಿ ಅಂಗಡಿಯ ಗಾಜನ್ನು ಒಡೆದು ಒಳಗೆ ನುಗ್ಗಿದರು. ಅವರು ಬಂಗಾರದ ಉಂಗುರಗಳು, ಬೆಲೆಬಾಳುವ ಗಡಿಯಾರಗಳು ಮತ್ತು ವಜ್ರದ ಹಾರಗಳನ್ನು ಕದ್ದಿದ್ದಾರೆ. ಅಂಗಡಿಯಲ್ಲಿ ಇಷ್ಟು ಆಭರಣಗಳಿದ್ದವೆಂದರೆ ಅವರಿಗೆ ಅವುಗಳನ್ನು ಸರಿಯಾಗಿ ಕದ್ದೊಯ್ಯಲೂ ಸಾಧ್ಯವಾಗಲಿಲ್ಲ. ಪಲಾಯನ ಮಾಡುವಾಗ ಅವರ ಕೈಯಲ್ಲಿರುವ ಆಭರಣಗಳು ನೆಲದ ಮೇಲೆ ಬೀಳುತ್ತಿದ್ದವು. ಬಳಿಕ ಅವರು ಕಾರಿನಿಂದ ಪಲಾಯನ ಮಾಡಿದರು ಎಂದು ಹೇಳಿದರು.