IND-US Defense Relations: ಭಾರತ-ಅಮೇರಿಕಾ ಸಂಬಂಧವು ಸಮಾನ ವಿಚಾರಗಳ ಮೇಲೆ ಆಧಾರಿಸಿದೆ ! – ಅಮೇರಿಕಾದ ರಕ್ಷಣಾ ಸಚಿವ

ಅಮೇರಿಕಾದ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್

ಸಿಂಗಾಪುರ – ಭಾರತ-ಅಮೇರಿಕಾ ಸಂಬಂಧವು ಸಮಾನ ದೃಷ್ಟಿ ಮತ್ತು ವಿಚಾರಗಳ ಮೇಲೆ ಆಧಾರಿಸಿದೆ, ಎಂದು ಅಮೇರಿಕಾದ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ. ಅವರು ಇಲ್ಲಿ ಆಯೋಜಿಸಿದ್ದ ‘ಶಾಂಗ್ರಿಲಾ ಡೈಲಾಗ್ಸ್’ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಇದು ಏಷ್ಯಾದಲ್ಲಿನ ಪ್ರಧಾನ ರಕ್ಷಣಾ ಶೃಂಗಸಭೆಯಾಗಿದೆ.

1. ಭಾರತ-ಅಮೇರಿಕಾ ಸಂಬಂಧದ ಬಗ್ಗೆ ಪ್ರತಿನಿಧಿಯೊಬ್ಬರು ಆಸ್ಟಿನ್ ಅವರನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅವರು, ಪ್ರಸ್ತುತ ನಾವು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ. ನಾವು ಭಾರತದೊಂದಿಗೆ ಶಸ್ತ್ರಸಜ್ಜಿತ ವಾಹನಗಳ ಸಹ-ಉತ್ಪಾದಕರೆಂದು ಕೆಲಸ ಮಾಡುತ್ತಿದ್ದೇವೆ. ಈ ಯೋಜನೆಯಲ್ಲಿ ಪ್ರಗತಿಯಾಗಿದೆ ಎಂದರು.

2. ಆಸ್ಟಿನ್ ತಮ್ಮ ಮಾತನ್ನು ಮುಂದುವರೆಸುತ್ತಾ, “ರಕ್ಷಣಾ ಉದ್ಯಮಕ್ಕೆ ವೇಗ ತರಲು ಬರುತ್ತಿರುವ ಅಡೆತಡೆಗಳನ್ನು ದೂರಮಾಡಲು ಇಂಡೋ-ಪೆಸಿಫಿಕ್’ ಪ್ರದೇಶದಲ್ಲಿ ನಮ್ಮ ಸ್ನೇಹಿತರೊಂದಿಗೆ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದರು.

3. ‘ಇಂಡೋ-ಪೆಸಿಫಿಕ್’ ಪ್ರದೇಶದಲ್ಲಿ ತೈವಾನ್, ಫಿಲಿಪೈನ್ಸ್, ಬ್ರೂನಿ, ಮಲೇಷ್ಯಾ ಮತ್ತು ವಿಯೆಟ್ನಾಂ ದೇಶಗಳ ಸಮಾವೇಶ ಇದೆ, ಜೊತೆಗೆ ಹಿಂದೂ ಮಹಾಸಾಗರ ಮತ್ತು ದಕ್ಷಿಣ ಚೀನಾ ಸಮುದ್ರ ಇವುಗಳನ್ನೂ ಒಳಗೊಂಡಿದೆ ಎಂದು ಹೇಳಿದರು.