‘ಕಾಶ್ಮೀರ ಸಮಸ್ಯೆಯ ಕುರಿತು ವಿಶ್ವಸಂಸ್ಥೆಯ ಠರಾವಿನ ಪ್ರಕಾರ ಪರಿಹಾರಗಳನ್ನು ಕಂಡು ಕೊಳ್ಳಬೇಕಂತೆ !’ – ಅಝರ್‌ಬೈಜಾನ್‌ನ ವಿದೇಶಾಂಗ ಸಚಿವ ಜೆಹುನ್ ಬಾಯರಾಮೊವ

ಪಾಕಿಸ್ತಾನದ ಪ್ರವಾಸದಲ್ಲಿರುವ ಅಝರ್‌ಬೈಜಾನ್‌ನ ವಿದೇಶಾಂಗ ಸಚಿವ ಜೆಹುನ್ ಬಾಯರಾಮೊವ ಇವರ ಹೇಳಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಅಝರ್ಬೈಜಾನ್ ಕಾಶ್ಮೀರ ಸಮಸ್ಯೆಯ ಶಾಂತಿಯುತ ಪರಿಹಾರವನ್ನು ಬೆಂಬಲಿಸುತ್ತದೆ. ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಅನುಗುಣವಾಗಿ ಪರಿಹರಿಸಲಾಗುತ್ತದೆಯೆಂದು ನಮಗೆ ವಿಶ್ವಾಸವಿದೆಯೆಂದು ಅಝರ್‌ಬೈಜಾನ್‌ನ ವಿದೇಶಾಂಗ ಸಚಿವ ಜೆಹುನ್ ಬಾಯರಾಮೊವ ಇವರು ಮಂಡಿಸಿದರು. ಅವರು 2 ದಿನಗಳ ಕಾಲ ಪಾಕಿಸ್ತಾನದ ಪ್ರವಾಸದಲ್ಲಿದ್ದಾರೆ. ಅವರು ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ ದಾರ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದರು. ಈ ಸಮಯದಲ್ಲಿ ಅವರು ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿದರು.

ಭಾರತವು ಅರ್ಮೇನಿಯಾವನ್ನು ಬೆಂಬಲಿಸಿದಕ್ಕೆ ಅಝರಬೈಜಾನ್ ಅಸಮಾಧಾನ !

ಅಝರ್‌ಬೈಜಾನ್‌ ಭಾರತದ ಮೇಲೆ ಅಸಮಾಧಾನ ಹೊಂದುವ ಕಾರಣ ಅಝರ್‌ಬೈಜಾನ್‌ನ ಶತ್ರುವಾಗಿರುವ ಅರ್ಮೇನಿಯಾಗೆ ಭಾರತ ಬೆಂಬಲ ನೀಡಿದೆ. ಅಝರರ್ಬೈಜಾನ ಮತ್ತು ಅರ್ಮೇನಿಯಾ ಈ ಎರಡೂ ದೇಶಗಳ ನಡುವೆ ನಾಗೋರ್ನೋ-ಕಾರಾಬಾಖ ಹೆಸರಿನ ಪ್ರದೇಶದ ಬಗ್ಗೆ ವಿವಾದ ನಡೆಯುತ್ತಿದೆ. ಅವರ ನಡುವೆ ಹಲವು ಬಾರಿ ಯುದ್ಧಗಳು ನಡೆದಿವೆ. ಅರ್ಮೇನಿಯಾ ಭಾರತದಿಂದ ಅನೇಕ ಶಸ್ತ್ರಾಸ್ತ್ರಗಳನ್ನು ಖರೀದಿಸಿದೆ. ಈ ಸಂದರ್ಭದಲ್ಲಿ ಭಾರತ ಮತ್ತು ಅರ್ಮೇನಿಯಾ ನಡುವೆ ಅಂದಾಜು 6 ಸಾವಿರ ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ರಕ್ಷಣಾ ಒಪ್ಪಂದದ ಬಗ್ಗೆ ಅಝರರ್ಬೈಜಾನ್ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತ್ತು.

ಸಂಪಾದಕೀಯ ನಿಲುವು

ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ, ಆದ್ದರಿಂದ ಇದರ ಬಗ್ಗೆ ಬೇರೆ ಯಾರೂ ಏನೂ ಹೇಳುವ ಅಗತ್ಯವಿಲ್ಲ, ಎಂದು ಭಾರತವು ಅಜೆರ್ಬೈಜಾನ್ ವಿದೇಶಾಂಗ ಸಚಿವರಿಗೆ ದೃಢವಾಗಿ ಹೇಳಬೇಕು !