ರಾಂಚಿ (ಝಾರಖಂಡ) – ಇಲ್ಲಿ ಭಾರತೀಯ ಸೈನ್ಯದಲ್ಲಿನ ಓರ್ವ ಯೋಧನ ಪತ್ನಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಲಾಗಿದೆ. ಈ ಸೈನಿಕನು ಸಧ್ಯಕ್ಕೆ ಲಡಾಖ್ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಈ ಬಲಾತ್ಕಾರದ ಘಟನೆಯು ರಾಂಚಿಯ ಪೋಖರಟೋಲಿ ಪ್ರದೇಶದಲ್ಲಿ ನಡೆದಿದೆ. ಪೋಖರಟೋಲಿಯಲ್ಲಿ ಈ ಮಹಿಳೆಯ ಭೂಮಿಯಿದ್ದು ಅವಳು ಅಲ್ಲಿ ಮನೆಯನ್ನು ಕಟ್ಟಿಸುತ್ತಿದ್ದಳು. ಅವಳು ಅದೇ ಪರಿಸರದಲ್ಲಿದ್ದ ಒಂದು ಮನೆಯಲ್ಲಿ ಅವಳು ತನ್ನ 7 ವರ್ಷದ ಮತ್ತು 4 ತಿಂಗಳ ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಮೇ 27ರ ರಾತ್ರಿ 12 ರಿಂದ 1ಗಂಟೆಯ ಸಮಯದಲ್ಲಿ 4 ಯುವಕರು ಮಹಿಳೆಯ ಮನೆಗೆ ನುಗ್ಗಿ ಅವಳ ಮೇಲೆ ಸಾಮೂಹಿಕ ಬಲಾತ್ಕಾರ ಎಸಗಿದ್ದರು.
ಮನೆಯನ್ನು ಕಟ್ಟಲಾಗುತ್ತಿರುವ ಜಾಗದಲ್ಲಿ ಮಹಿಳೆ, ಆಕೆಯ ಪತಿ ಹಾಗೂ ಕೆಲವು ಸ್ಥಳೀಯ ಯುವಕರೊಂದಿಗೆವದ ನಡೆದಿತ್ತು. ಈ ಯುವಕರು ತಮಗೆ ಮನೆ ಕಟ್ಟುವ ಗುತ್ತಿಗೆ ನೀಡುವಂತೆ ಕೇಳಿದ್ದರು. ತದನಂತರ ಗುತ್ತಿಗೆಯನ್ನು ಅವರಿಗೆ ಕೊಡಲಾಗಿತ್ತು; ಆದರೆ ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳದೇ ಇದ್ದ ಕಾರಣ ಗುತ್ತಿಗೆಯನ್ನು ಅವರಿಂದ ಹಿಂಪಡೆಯಲಾಗಿತ್ತು. ಇದರಿಂದ ಆಕ್ರೋಷಗೊಂಡ ಯುವಕರು ಬಲಾತ್ಕಾರವನ್ನು ಮಾಡಿರಬೇಕು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ಸಂಪಾದಕೀಯ ನಿಲುವು‘ದೇಶದಲ್ಲಿ ನಿರಂತರವಾಗಿ ಬಲಾತ್ಕಾರದ ಘಟನೆಗಳು ನಡೆಯುತ್ತಿರುವುದು ಸ್ವಾತಂತ್ರ್ಯಾನಂತರದ ಎಲ್ಲಾ ಪಕ್ಷದ ಆಡಳಿತಗಾರರಿಗೆ ನಾಚಿಕೆಗೇಡಿನ ಸಂಗತಿಯಾಗಿದೆ ! ಜನತೆಗೆ ಧರ್ಮಶಿಕ್ಷಣವನ್ನು ನೀಡದಿರುವ ಇಲ್ಲಿಯವರೆಗಿನ ಎಲ್ಲ ಪಕ್ಷಗಳ ಆಡಳಿತಗಾರರು ಈ ಸ್ಥಿತಿಗೆ ಜವಾಬ್ದಾರರಾಗಿದ್ದಾರೆ! |