ಗಾಜಿಯಾಬಾದ (ಉತ್ತರ ಪ್ರದೇಶ)ನಲ್ಲಿ ಮುಸಲ್ಮಾನರ ಕಸಾಯಿ ಖಾನೆಯಲ್ಲಿ ದಾಳಿ ನಡೆಸಿ ಕೆಲಸ ಮಾಡುವ ೫೭ ಅಪ್ರಾಪ್ತ ಹುಡುಗರ ಬಿಡುಗಡೆ

ಗಾಜಿಯಾಬಾದ (ಉತ್ತರಪ್ರದೇಶ) – ಇಲ್ಲಿಯ ಮಸೂರಿ ಪ್ರದೇಶದಲ್ಲಿನ ಯಶೀನ್ ಕುರೇಶಿ ಇವರ ಇಂಟರ್ನ್ಯಾಷನಲ್ ಗ್ರೋ ಫುಡ್’ ಈ ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಿದ್ದ ೫೭ ಅಪ್ರಾಪ್ತ ಹುಡುಗರನ್ನು ಬಿಡುಗಡೆಗೊಳಿಸಲಾಗಿದೆ. ಪೊಲೀಸರು, ಸ್ವಯಂಸೇವೆ ಸಂಸ್ಥೆ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇವರ ಸಹಾಯದಿಂದ ಈ ಹುಡುಗರನ್ನು ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ೩೧ ಅಪ್ರಾಪ್ತ ಹುಡುಗಿಯರು ಮತ್ತು ೨೬ ಅಪ್ರಾಪ್ತ ಹುಡುಗರ ಸಮಾವೇಶವಿದೆ. ಈ ಹುಡುಗರು ಬಿಹಾರ ಮತ್ತು ಬಂಗಾಳದಿಂದ ಕರೆದುಕೊಂಡು ಬಂದಿದ್ದೂ ಅವರಿಂದ ಕೆಲಸ ಮಾಡಿಸಿ ಕೊಳ್ಳಲಾಗುತ್ತಿತ್ತು.

ಈ ಹುಡುಗರ ಕೌಟುಂಬಿಕ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಅವರನ್ನು ‘ಗಾಜಿಯಾಬಾದದಲ್ಲಿ ನೌಕರಿ ನೀಡುವುದಾಗಿ’ ಹೇಳಿ ಕರೆದುಕೊಂಡು ಬರಲಾಗಿತ್ತು. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ ಕಾನೂನುಗೊ ಇವರು ಈ ಕಾರ್ಯಾಚರಣೆಯ ಮಾಹಿತಿ ‘ಎಕ್ಸ್’ ನಲ್ಲಿ ನೀಡಿದ್ದಾರೆ.

ಸಂಪಾದಕೀಯ ನಿಲುವು

ಅಪ್ರಾಪ್ತ ಹುಡುಗರಿಂದ ಕೆಲಸ ಮಾಡಿಸುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು !