Pakistan Fawad Chaudhary : ‘ನರೇಂದ್ರ ಮೋದಿ ಸೋಲುವುದು ಆವಶ್ಯಕ!’ – ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ

ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿಯವರ ಮೋದಿದ್ವೇಷಿ ಹೇಳಿಕೆ!

ಇಸ್ಲಾಮಾಬಾದ್ (ಪಾಕಿಸ್ತಾನ) – ನರೇಂದ್ರ ಮೋದಿಯವರ ಸಿದ್ಧಾಂತವು ಮೂಲಭೂತವಾದವಾಗಿದೆ ಅವರು ಸೋಲುವುದು ಬಹಳ ಆವಶ್ಯಕವಾಗಿದೆ. ಪಾಕಿಸ್ತಾನದಲ್ಲಿರುವ ಪ್ರತಿಯೊಬ್ಬರೂ ನರೇಂದ್ರ ಮೋದಿಯನ್ನು ಸೋಲಿಸಲು ಬಯಸುತ್ತಾರೆ. ಅವರನ್ನು ಸೋಲಿಸುವವರು, ರಾಹುಲ್ ಗಾಂಧಿಯಾಗಿರಲಿ, ಕೇಜ್ರಿವಾಲ್ ಅಥವಾ ಮಮತಾ ಬ್ಯಾನರ್ಜಿ ಆಗಿರಲಿ, ನಮ್ಮ ಶುಭಾಶಯಗಳು ಅವರೊಂದಿಗಿದೆ ಎಂದು ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಹೇಳಿದ್ದಾರೆ.
ಫವಾದ್ ಚೌಧರಿ ತಮ್ಮ ಮಾತು ಮುಂದುವರೆಸಿ, ಎರಡೂ ದೇಶಗಳಲ್ಲಿ ಭಯೋತ್ಪಾದಕತೆ ಕಡಿಮೆಯಾದಾಗ ಮಾತ್ರ ಭಾರತ-ಪಾಕಿಸ್ತಾನ ಸಂಬಂಧಗಳು ಸುಧಾರಿಸುತ್ತದೆ ಎಂದರು. ಪಾಕಿಸ್ತಾನದ ಸಾಮಾನ್ಯ ಜನರಲ್ಲಿ ಭಾರತದ ಬಗ್ಗೆ ದ್ವೇಷವಿಲ್ಲ; ಆದರೆ ಭಾರತದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾಜಪ ನಿರಂತರವಾಗಿ ಜನರ ಮನಸ್ಸಿನಲ್ಲಿ ಪಾಕಿಸ್ತಾನದ ಬಗ್ಗೆ ದ್ವೇಷವನ್ನು ಹುಟ್ಟುಹಾಕುತ್ತಿವೆ. ಇದು ಎರಡೂ ದೇಶಗಳ ಸಾಮಾನ್ಯ ಜನರಿಗೆ ಒಳ್ಳೆಯದಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹೀಗೆ ಹೇಳುವುದರಿಂದ ಮೋದಿಯವರು ಸೋಲುತ್ತಾರೆ, ಈ ಭ್ರಮೆಯಲ್ಲಿರುವ ಪಾಕಿಸ್ತಾನದ ನಾಯಕರು. ವ್ಯತಿರಿಕ್ತವಾಗಿ ` ಪಾಕಿಸ್ತಾನ ತುಂಡಾಗಲಿ’ ಎಂದು ಭಾರತೀಯರು ಹೇಳುತ್ತಿದ್ದಾರೆ ಮತ್ತು ಶೀಘ್ರದಲ್ಲಿಯೇ ಆ ಸತ್ಯವೂ ಹೊರಬರಲಿದೆ, ಇದರ ಕಡೆಗೆ ಪಾಕಿಸ್ತಾನಿ ನಾಯಕರು ಗಮನ ಹರಿಸಬೇಕು.