|
ಬೀದರ (ಕರ್ನಾಟಕ) – ಗುರುನಾನಕ ದೇವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇ ೨೯ ರಂದು ನಾಟಕದ ಅಭ್ಯಾಸ ನಡೆಯುತ್ತಿರುವಾಗ ‘ಜೈ ಶ್ರೀ ರಾಮ’ ಎಂದು ಘೋಷಣೆ ನೀಡಿದ್ದಕ್ಕೆ ಮುಸಲ್ಮಾನ ವಿದ್ಯಾರ್ಥಿಗಳ ಗುಂಪಿನಿಂದ ಹಿಂದೂ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಲಾಯಿತು. ಈ ದಾಳಿಯಲ್ಲಿ ನಟರಾಜ ಮತ್ತು ವೀರೇಂದ್ರ ಎಂಬ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡರು. ಮೇ ೩೧ ರಂದು ಕಾಲೇಜಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಟಕವನ್ನು ಪ್ರಸ್ತುತಪಡಿಸಲು ಅದರ ಅಭ್ಯಾಸ ನಡೆಯುತ್ತಿತ್ತು. ಈ ಹೊಡೆದಾಟದಿಂದಾಗಿ ಕಾಲೇಜಿನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.
೧. ಮುಸಲ್ಮಾನ ವಿದ್ಯಾರ್ಥಿಗಳು ‘ಜೈ ಶ್ರೀರಾಮ’ ಘೋಷಣೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದ ನಂತರ ಹಿಂದೂ ವಿದ್ಯಾರ್ಥಿಗಳ ಜೊತೆಗೆ ಅವರ ವಿವಾದ ನಡೆಯಿತು ಮತ್ತು ವಿವಾದವು ಹೊಡೆದಾಟದಲ್ಲಿ ಬದಲಾಯಿತು. ಪೊಲೀಸರಿಗೆ ಈ ಬಗ್ಗೆ ಮಾಹಿತಿ ದೊರೆಯುತ್ತಲೇ ಅವರು ಘಟನಾ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಹಿಡಿತಕ್ಕೆ ತೆಗೆದುಕೊಂಡರು. ಈ ಘಟನೆಯ ವಿಡಿಯೋ ಕೂಡ ಪ್ರಸಾರವಾಗಿದೆ.
೨. ಪೊಲೀಸ್ ಅಧಿಕಾರಿ ಚೆನ್ನಬಸವಣ್ಣ ಎಸ್ .ಎಲ್. ಅವರು ಈ ಬಗ್ಗೆ ಮಾತನಾಡಿ, ನಟರಾಜ ಎಂಬವರ ದೂರಿನ ಆಧಾರದ ಮೇಲೆ ೧೭ ಮುಸಲ್ಮಾನ ವಿದ್ಯಾರ್ಥಿಗಳು ಮತ್ತು ಓರ್ವ ದುಷ್ಕರ್ಮಿಯ ವಿರುದ್ಧ ದೂರು ದಾಖಲಿಸಿಕೊಂಡಿದ್ದೇವೆ. ಮುಸಲ್ಮಾನ ವಿದ್ಯಾರ್ಥಿಗಳಿಂದಲೂ ಕೂಡ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.