10 ನೇ ತರಗತಿಯ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಸನಾತನದ ಸಾಧಕರು

ಶಿವಮೊಗ್ಗ ಜಿಲ್ಲೆಯ ಕು. ಹಿಂದುಶ್ರೀ RL ಇವರು 10 ನೇ ತರಗತಿಯ ಪರೀಕ್ಷೆಯಲ್ಲಿ  ಶೇ. 80 ಅಂಕ ಪಡೆದು ಉತ್ತೀರ್ಣ

ಮೊದಲು ನನಗೆ ಎಲ್ಲಿ ಓದಿರುಹುದೆಲ್ಲ ಮರೆತು ಹೋಗುತ್ತದೆಯೋ ಎಂಬ ಭಯ ಇರುತಿತ್ತು. ಈ ಬಗ್ಗೆ ಸಾಧಕರಿಗೆ ಹೇಳಿದಾಗ ಸಾಧಕರು ಗಣಪತಿ ಮತ್ತು ಸರಸ್ವತಿ ಹತ್ತಿರ ಪ್ರಾರ್ಥನೆ ಮಾಡು ಮತ್ತು ಜಪ ಮಾಡು ಎಂದು ಹೇಳಿದರು. ನಾನು ಗಣಪತಿ ಹತ್ತಿರ ಪ್ರಾರ್ಥನೆ ಮಾಡಿದೆ ಮತ್ತು ನೀವೇ ನನ್ನಿಂದ ಬರೆಸಿಕೊಳ್ಳಿ ಎಂದು ಪ್ರಾರ್ಥನೆ ಮಾಡಿದೆ. ಇದರಿಂದ ನನ್ನ  ಫಲಿತಾಂಶ 80% ಅಂಕಗಳು ದೊರಕಿತು. ಇದಕ್ಕಾಗಿ ಶ್ರೀ ಗುರುಗಳ ಅನಂತ ಕೋಟಿ ಕೋಟಿ ಕೃತಜ್ಞತೆಗಳು.

ಶಿವಮೊಗ್ಗ ಜಿಲ್ಲೆಯ ಕು. VS ಸಾಧನಾ ಇವರು 10 ನೇ ತರಗತಿಯ ಪರೀಕ್ಷೆಯಲ್ಲಿ  ಶೇ. 75 ಅಂಕ ಪಡೆದು ಉತ್ತೀರ್ಣ

ಓದುವಾಗ ತುಂಬಾ ಭಯ ಆಗುತ್ತಿತ್ತು, ರಾತ್ರಿಯೆಲ್ಲಾ ಓದಿದರೂ ಬೆಳಗ್ಗೆ ಮರೆತು ಹೋಗುತ್ತಿತ್ತು ಇದರಿಂದ ಹೊರಬರಲು  ಸತತವಾಗಿ ಗುರುದೇವರಲ್ಲಿ ಪ್ರಾರ್ಥನೆ ಮತ್ತು ಆತ್ಮನಿವೇದನೆ ಹೆಚ್ಚು ಹೆಚ್ಚು ಮಾಡಿದೆ. ಇದರಿಂದ ನನಗೆ ಪರೀಕ್ಷೆ ಬರೆಯಲು ಸಾಧ್ಯವಾಯಿತು. ಶ್ರೀ ಗುರುಗಳ ಕೃಪೆಯಿಂದ ಶೇಕಡಾ ೭೫ರಷ್ಟು ಅಂಕಗಳು ದೊರೆತವು. ಅದಕ್ಕಾಗಿ ಶ್ರೀ ಗುರು ಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳು.