SC Denied Bail Extension for Kejriwal: ಅರವಿಂದ್ ಕೇಜ್ರಿವಾಲ್ ಜೂನ್ 2 ರಿಂದ ಮತ್ತೆ ಜೈಲಿಗೆ !

‘ವೈದ್ಯಕೀಯ ಕಾರಣಗಳಿಗಾಗಿ’ ಮಧ್ಯಂತರ ಜಾಮೀನು ವಿಸ್ತರಿಸಲು ಸಲ್ಲಿಸಿದ್ದ ಅರ್ಜಿ ಸರ್ವೋಚ್ಚ ನ್ಯಾಯಾಲಯದಿಂದ ವಜಾ !

ನವ ದೆಹಲಿ – ದೆಹಲಿ ಮುಖ್ಯಮಂತ್ರಿ ಮತ್ತು ಮದ್ಯ ಹಗರಣದ ಆರೋಪಿ ಅರವಿಂದ್ ಕೇಜ್ರಿವಾಲ್ ಅವರು ಲೋಕಸಭೆ ಚುನಾವಣೆಗಾಗಿ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರು ಜಾಮೀನು ಅವಧಿಯನ್ನು 7 ದಿನಗಳವರೆಗೆ ವಿಸ್ತರಿಸುವಂತೆ ಕೋರಿದ್ದರು; ಆದರೆ ಅವರ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ಆದ್ದರಿಂದ ಕೇಜ್ರಿವಾಲ್ ಜೂನ್ 2ರಂದು ದೆಹಲಿಯ ತಿಹಾರ್ ಜೈಲಿಗೆ ಹೋಗಬೇಕಾಗುತ್ತದೆ.

ವೈದ್ಯಕೀಯ ಪರೀಕ್ಷೆಗಾಗಿ ಜಾಮೀನು ಕೋರಿದ್ದರು !

ಅರವಿಂದ್ ಕೇಜ್ರಿವಾಲ್ ಅವರ ತೂಕ ದಿಢೀರ್ ಕಡಿಮೆಯಾಗಲು ಶುರುವಾಗಿದೆ ಎನ್ನಲಾಗಿದೆ. ಮೂತ್ರಪಿಂಡ ವೈಫಲ್ಯ, ಗಂಭೀರ ಹೃದ್ರೋಗ ಮತ್ತು ಕ್ಯಾನ್ಸರ್‌ನ ಕಾಯಿಲೆಯ ಲಕ್ಷಣ ಎಂದು ತೋರಿಸುವ ವೈದ್ಯಕೀಯ ವರದಿಯೊಂದಿಗೆ ಇತರ ವೈದ್ಯಕೀಯ ಪರೀಕ್ಷೆಗಳಿಗಾಗಿ 7 ದಿನಗಳ ಕಾಲ ಮಧ್ಯಂತರ ಜಾಮೀನನ್ನು ವಿಸ್ತರಿಸುವಂತೆ ಕೇಳಲಾಗಿತ್ತು. ಇದಕ್ಕಾಗಿ ಅವರು ಜೂನ್ 2 ರ ಬದಲಿಗೆ ಜೂನ್ 9 ರಂದು ಜೈಲಿಗೆ ಮರಳಲು ಅನುಮತಿ ಕೋರಿದ್ದರು; ಆದರೆ ಈ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ.