China Removes Domes Of The Mosque: ಚೀನಾದಲ್ಲಿನ ಮಸೀದಿಯ ಗುಮ್ಮಟ ಮತ್ತು ಮಿನಾರ್ ತೆಗೆದಿದ್ದಕ್ಕೆ ಪಾಕಿಸ್ತಾನಿಗಳ ಹಾಗೂ ಅಲ್ಲಿಯ ಸರಕಾರದ ಮೇಲೆ ಟೀಕೆ

ಭಾರತ ಅಥವಾ ಇತರ ದೇಶದಲ್ಲಿ ಆಗುತ್ತಿದ್ದರೆ, ಆಕಾಶ ಪಾತಾಳ ಒಂದುಗೂಡಿಸುತ್ತಿದ್ದರು !

ಇಸ್ಲಾಮಾಬಾದ್ (ಪಾಕಿಸ್ತಾನ) – ಚೀನಾದಲ್ಲಿ ಈಗ ಅರಬಿ ಶೈಲಿಯಲ್ಲಿ ಕಟ್ಟಿರುವ ಒಂದೇ ಒಂದು ಮಸೀದಿ ಉಳಿದಿಲ್ಲ. ಚೀನಾದ ಕೊನೆಯ ದೊಡ್ಡ ಮಸೀದಿಯ ಕಟ್ಟಡದಲ್ಲಿ ಅನೇಕ ಬದಲಾವಣೆಗಳು ಮಾಡುವಾಗ ಗುಮ್ಮಟ ಮತ್ತು ಮಿನಾರ್ ತೆರವುಗೊಳಿಸಲಾಗಿದೆ. ಮಸೀದಿಯ ಕಟ್ಟಡದ ರೂಪಾಂತರ ಅರಬಿ ಶೈಲಿಯಿಂದ ಚೀನಾದ ವಾಸ್ತು ಕಲೆಯಲ್ಲಿ ಬದಲಾಯಿಸಲಾಗಿದೆ. ದೇಶದಲ್ಲಿನ ಮಸೀದಿಯ ಚೀನಿಕರಣ ಮಾಡುವುದು ಇದು ಸರಕಾರಿ ಅಭಿಯಾನದ ಒಂದು ಭಾಗವೆಂದು ಚೀನಾದಲ್ಲಿ ಈ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮಿನಾರ ಇಲ್ಲದಿರುವ ಮಸೀದಿಯ ಛಾಯಾಚಿತ್ರ ಬೆಳಕಿಗೆ ಬಂದ ನಂತರ ಪಾಕಿಸ್ತಾನಿ ಯೂ ಟ್ಯೂಬರ (ಯೂಟ್ಯೂಬ್ ಚಾನೆಲ್ ನಡೆಸುವವರು) ಸನ ಅಮಜದ ಇವರು ಇಲ್ಲಿಯ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಆ ಸಮಯದಲ್ಲಿ ಪಾಕಿಸ್ತಾನಿ ನಾಗರಿಕರು ಚೀನಾದ ಈ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಭಾರತ ಅಥವಾ ಇತರ ದೇಶದಲ್ಲಿ ಹೀಗೆ ನಡೆದಿದ್ದರೆ, ಆಗ ಆಕಾಶ ಪಾತಾಳ ಒಂದು ಮಾಡಲಾಗುತ್ತಿತ್ತು, ಎಂದು ಅವರು ಟೀಕಿಸಿದರು.

ಚೀನಾದಲ್ಲಿ ಮಸೀದಿಯಲ್ಲಿ ಸಂಪೂರ್ಣ ಬದಲಾವಣೆ ನಡೆಯುತ್ತಿರುವುದರ ಬಗ್ಗೆ ಪಾಕಿಸ್ತಾನಿ ನಾಗರಿಕ ಗಜನಫರ್ ಇವರು, ಇದು ಚೀನಾದಲ್ಲಿ ನಡೆದಿದೆ; ಆದರೆ ವಾರ್ತೆಯಲ್ಲಿ ಅದು ಎಲ್ಲಿಯೂ ತೋರಿಸಲಿಲ್ಲ, ಆದ್ದರಿಂದ ನನಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಹೇಳಿದರು. ಇದು ಭಾರತದಲ್ಲಿ ಅಥವಾ ಜಗತ್ತಿನ ಇತರ ಯಾವುದೇ ಭಾಗದಲ್ಲಿ ನಡೆದಿದ್ದರೆ ಆಗ, ಪಾಕಿಸ್ತಾನಿ ಜನರು ಆಕಾಶ ಪಾತಾಳ ಒಂದು ಮಾಡುತ್ತಿದ್ದರು. ವಿಶೇಷವಾಗಿ ಧರ್ಮದ ಗುತ್ತಿಗೆ ಪಡೆದಿರುವ ಮೌಲ್ವಿಗಳು ಕಾಲು ಕೆರೆದು ಜಗಳಕ್ಕೆ ಇಳಿಯುತ್ತಿದ್ದರು. ಆದರೆ ಈ ಘಟನೆ ಚೀನಾಗೆ ಸಂಬಂಧಪಟ್ಟಿರುವುದರಿಂದ ಅದರ ಬಗ್ಗೆ ಮೌನ ವಹಿಸುವ ಒಂದು ಕಾರಣ ಎಂದರೆ ಚೀನಾದೊಂದಿಗಿನ ಪಾಕಿಸ್ತಾದ ಸಂಬಂಧ ವಿಶೇಷವಾಗಿ ಇದೆ. ಬಹುಷಃ ಈಗ ಜಗತ್ತಿನಲ್ಲಿನ ಚೀನಾದ ಬಗ್ಗೆ ಪಾಕಿಸ್ತಾನಕ್ಕೆ ಅಲ್ಪಸ್ವಲ್ಪ ನಂಬಿಕೆ ಇರುವ ಏಕೈಕ ದೇಶವಾಗಿದೆ. ಪಾಕಿಸ್ತಾನಕ್ಕೆ ಚೀನಾದ ಆಧಾರವಿದೆ, ಆದ್ದರಿಂದ ಏನೆಲ್ಲಾ ನಡೆಯುತ್ತಿದೆ ಅದು ನಡೆಯಲಿ ಎಂದು ಪಾಕಿಸ್ತಾನಿಗಳಿಗೆ ಮತ್ತು ಸರಕಾರಕ್ಕೆ ಅನಿಸುತ್ತದೆ ಎಂದು ಹೇಳಿದರು.

ಶಾಡಿಯನ್‌ನ ಗ್ರ್ಯಾಂಡ್ ಮಸೀದಿ, ಚೀನಾದ ಅತಿದೊಡ್ಡ ಮಸೀದಿ.

ಚೀನಾ ಸರಕಾರ ಯಾವುದನ್ನು ಬಹಿರಂಗಪಡಿಸುವುದಿಲ್ಲ !

ಇಂಜಿನಿಯರ್ ಆಗಿರುವ ಒಸಾಮಾ ಇವರು, ಚೀನಾದ ಜನರಿಗೆ ಇದು ಹೊಸದೇನಲ್ಲ, ಅವರು ಅಲ್ಲಿ ಎಲ್ಲರನ್ನು ಸಮಾನವಾಗಿ ಮಾಡುವ ಪ್ರಯತ್ನ ಮಾಡುತ್ತಾರೆ. ಪ್ರತಿಯೊಬ್ಬರೂ ಒಂದೇ ರೀತಿಯ ಯೋಚನೆ ಮಾಡಬೇಕು ಮತ್ತು ಮಸೀದಿ ಇರಲಿ ಅಥವಾ ಇತರ ಏನೇ ಇರಲಿ, ಎಲ್ಲಾ ಕಟ್ಟಡಗಳು ಒಂದೇ ರೀತಿ ಕಾಣಬೇಕು ಹೀಗೆ ಅವರ ಇಚ್ಛೆ ಇರುತ್ತದೆ. ಚೀನಾ ಸರಕಾರದ ನೀತಿ ಹೇಗೆ ಇದೆ, ಅದು ಯಾವುದೇ ಸಮಾಚಾರ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಹೇಳಿದರು.

ಭಾರತದಿಂದ ಅಲ್ಲ, ಚೀನಾದಿಂದ ಪಾಕಿಸ್ತಾನಕ್ಕೆ ಅಪಾಯ !

ಪಾಕಿಸ್ತಾನದ ಪಂಜಾಬ ವಿದ್ಯಾಪೀಠದಿಂದ ಶಿಕ್ಷಣ ಪಡೆದಿರುವ ಸರದಾರ ಅಹಮದ್ ಇವರು ಮಾತನಾಡಿ, ಚೀನಾದಿಂದ ಆರ್ಥಿಕ ಸಹಾಯ ಪಡೆಯುತ್ತಿರುವ ಪಾಕಿಸ್ತಾನಿ ಪ್ರಸಾರ ಮಾಧ್ಯಮಗಳು ಈ ಸಮಾಚಾರ ಹೇಗೆ ತೋರಿಸುವರು ! ಅವರು ಮೌನವಾಗಿ ಇರುವರು, ಎಂದು ಹೇಳಿದರು. ಚೀನಾ ಎಂತಹ ದೇಶವಾಗಿದೆ ಎಂದರೆ ಅದನ್ನು ನಾವು ಪಾಕಿಸ್ತಾನದ ನಿಜವಾದ ಶತ್ರು ಎನ್ನಬಹುದು. ಚೀನಾದ ಜನರು ಪಾಕಿಸ್ತಾನದ ಸಂಪನ್ನ ಮೂಲಗಳಿಂದ ಹಣವನ್ನು ಗಳಿಸುತ್ತಾರೆ. ಭಾರತ ಪಾಕಿಸ್ತಾನದ ಶತ್ರುವಲ್ಲ. ಭಾರತದಿಂದ ಪಾಕಿಸ್ತಾನಕ್ಕೆ ಯಾವುದೇ ಅಪಾಯವಿಲ್ಲ. ತದ್ವಿರುದ್ಧ ಪಾಕಿಸ್ತಾನಕ್ಕೆ ನಿಜವಾದ ಅಪಾಯ ಚೀನಾದಿಂದ ಇದೆ ಎಂದು ಹೇಳಿದರು.

ಚೀನಾ ತನ್ನ ದೇಶದ ಮುಸಲ್ಮಾನರಿಗಿಲ್ಲ ಹಾಗಾಗಿ ಇತರ ಮುಸಲ್ಮಾನರದ್ದು ಆಗದು !

ರಶೀದ್ ಇವರು ಮಾತನಾಡಿ, ದೇಶದಲ್ಲಿ ಭಾರತದ ವಿರುದ್ಧ ದ್ವೇಷದ ವಾತಾವರಣ ನಿರ್ಮಾಣ ಮಾಡಲಾಗುತ್ತಿದ್ದು ಅದರಿಂದ ಏನ ಲಾಭ ಆಗುವುದು ? ಭಾರತದ ಜೊತೆಗಿನ ನಮ್ಮ ಸಂಬಂಧದ ಲಾಭ ನಮಗೆ ಆಗುವುದು; ಆದರೆ ನಾವು ಚೀನಾದ ಜೊತೆಗೆ ಆತ್ಮೀಯತೆ ಬೆಳೆಸಿದ್ದೇವೆ. ಚೀನಾದ ಇತಿಹಾಸ, ಅವರ ಮೇಲೆ ವಿಶ್ವಾಸ ಇಡಲು ಸಾಧ್ಯವಿಲ್ಲ, ಅದು ತಮ್ಮ ದೇಶದ ಮುಸಲ್ಮಾನರದಾಗದೆ ಅಥವಾ ನೆರೆಯ ಯಾವುದೇ ದೇಶದ್ದು ಆಗಿಲ್ಲ ಎಂದು ವಿವರಿಸಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನದ ನಾಗರಿಕರಿಗೆ ಹೇಗೆ ಆಕ್ರೋಶ ಉಂಟಾಗುತ್ತದೆ, ಹಾಗೆ ಪಾಕಿಸ್ತಾನದ ಆಡಳಿತಗಾರರಿಗೆ ಏಕೆ ಬರುವುದಿಲ್ಲ ? ಯಾವಾಗಲೂ ಇಸ್ಲಾಂನ ವಿಚಾರವಾಗಿ ಭಾರತವನ್ನು ಟೀಕಿಸುವ ಪಾಕಿಸ್ತಾನದ ಸರಕಾರ ಈಗ ಮೌನ ಏಕೆ ?

ಭಾರತದಲ್ಲಿನ ಮುಸಲ್ಮಾನರು ಚೀನಾದ ಈ ಕೃತ್ಯದ ಬಗ್ಗೆ ಏಕೆ ಮೌನವಾಗಿದೆ ? ಚೀನಾದೊಂದಿಗೆ ಅವರ ಯಾವರೀತಿ ಸಂಬಂಧವಿದೆ ?

ಚೀನಾ ಆರ್ಥಿಕ ಮತ್ತು ಸೈನ್ಯ ಬಲದಲ್ಲಿ ಮುಂದೆ ಇರುವುದರಿಂದ ಜಗತ್ತಿನಲ್ಲಿನ ಒಂದೇ ಒಂದು ಇಸ್ಲಾಮಿ ದೇಶ ಅದರ ಅನ್ಯಾಯದ ವಿರುದ್ಧ ಬಾಯಿ ತೆರೆಯುವುದಿಲ್ಲ; ಆದರೆ ಅದೇ ಸಮಯದಲ್ಲಿ ಭಾರತದ ಬಗ್ಗೆ ಮುಸಲ್ಮಾನರ ಸುರಕ್ಷತೆಯ ಕುರಿತು ಆರೋಪಿಸುತ್ತಾರೆ !