Sri Lanka To Release Pakistani Prisoners : ಶ್ರೀಲಂಕಾದಿಂದ 43 ಪಾಕಿಸ್ತಾನಿ ಕೈದಿಗಳ ಬಿಡುಗಡೆ !

ಉಭಯ ದೇಶಗಳ ನಡುವೆ ಸಾಮರಸ್ಯ ಒಪ್ಪಂದ !

ಪಾಕಿಸ್ತಾನದ ಗೃಹ ಸಚಿವ ಮೊಹಸಿನ್ ನಖ್ವಿ ಮತ್ತು ಶ್ರೀಲಂಕಾದ ಹೈಕಮಿಷನರ್ ಅಡ್ಮಿರಲ್ (ನಿವೃತ್ತ) ರವೀಂದ್ರ ಚಂದ್ರ ಶ್ರೀವಜಯ್ ಗುಣರತ್ನೆ

ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾದ ಜೈಲಿನಲ್ಲಿದ್ದು ಶಿಕ್ಷೆ ಅನುಭವಿಸುತ್ತಿರುವ 43 ಪಾಕಿಸ್ತಾನಿ ಕೈದಿಗಳನ್ನು ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಲಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಈ ಸಂದರ್ಭದಲ್ಲಿ ಸಾಮರಸ್ಯ ಒಪ್ಪಂದ ಆಗಿದೆ. ಇದರ ಪ್ರಕಾರ ಎರಡೂ ದೇಶಗಳು ಪರಸ್ಪರರ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಬಿಡುಗಡೆ ಮಾಡಲಿವೆ. ಈ ಕುರಿತು ಪಾಕಿಸ್ತಾನದ ‘ಡಾನ್’ ವಾರ್ತಾಪತ್ರಿಕೆ ಸುದ್ದಿ ಪ್ರಕಟಿಸಿದೆ.

ಇದರ ಪ್ರಕಾರ ಪಾಕಿಸ್ತಾನದ ಗೃಹ ಸಚಿವ ಮೊಹಸಿನ್ ನಖ್ವಿ ಇತ್ತೀಚೆಗೆ ಶ್ರೀಲಂಕಾದ ಹೈಕಮಿಷನರ್ ಅಡ್ಮಿರಲ್ (ನಿವೃತ್ತ) ರವೀಂದ್ರ ಚಂದ್ರ ಶ್ರೀವಜಯ್ ಗುಣರತ್ನೆ ಅವರೊಂದಿಗೆ ಚರ್ಚೆ ನಡೆಸಿದರುನಡೆಸಿದರು ಎನ್ನಲಾಗಿದೆ.

ಇತ್ತೀಚೆಗಷ್ಟೇ ಶ್ರೀಲಂಕಾದ ನ್ಯಾಯಾಲಯವೊಂದು ಮಾದಕ ವಸ್ತು ಕಳ್ಳಸಾಗಣೆ ಆರೋಪದಲ್ಲಿ 10 ಮಂದಿ ಪಾಕಿಸ್ತಾನಿ ನಾಗರೀಕರಿಗೆ ಶಿಕ್ಷೆ ವಿಧಿಸಿದೆ. ಮಾದಕ ಪದಾರ್ಥ ನಿಗ್ರಹ ದಳವು ಅವರನ್ನು ಹಿಡಿದು ಎಲ್ಲಾ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ.