ಜೀವಂತಿಕೆ ಅರಿವಾಗುವ ಮತ್ತು ಚೈತನ್ಯದ ಅನುಭೂತಿಯನ್ನು ನೀಡುವ ನಾಗೋಠಣೆ (ರಾಯಗಡ ಜಿಲ್ಲೆ)ಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮಸ್ಥಳ !

ನಾಗೋಠಣೆಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮಸ್ಥಾನಕ್ಕೆ ಭಾವಪೂರ್ಣವಾಗಿ ವಂದಿಸುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ರಾಯಗಡ ಜಿಲ್ಲೆಯ ಪನವೇಲನಿಂದ ವಾಹನದಿಂದ ೨ ಗಂಟೆ ಗಳ (ಸುಮಾರು ೧೦೦ ಕಿ.ಮೀ.) ಅಂತರದಲ್ಲಿ ಶಿವಾಜಿ ಮಹಾರಾಜರ ಕಾಲದ ಐತಿಹಾಸಿಕ ಮಹತ್ವ ವಿರುವ ‘ನಾಗೋಠಣೆ’ ಎಂಬ ಊರು ಇದೆ. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ೮೧ ವರ್ಷಗಳ ಹಿಂದೆ ವೈಶಾಖ ಕೃಷ್ಣ ಸಪ್ತಮಿಯಂದು ಇಲ್ಲಿನ ವರ್ತಕ ವಠಾರದಲ್ಲಿ ಜನಿಸಿದರು. ಅವರ ಆಧ್ಯಾತ್ಮಿಕ ಶ್ರೇಷ್ಠತೆಯನ್ನು ಗಮನದಲ್ಲಿಟ್ಟುಕೊಂಡು ನಾಗೋಠಣೆಯ ಗ್ರಾಮ ಪಂಚಾಯತಿಯು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮಸ್ಥಾನದ ಎದುರಿಗಿನ ಮಾರ್ಗಕ್ಕೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮಾರ್ಗ’, ಎಂದು ನಾಮಕರಣ ಮಾಡಿದೆ. ಈ ಸ್ಥಾನದ ಅಲೌಕಿಕ ಮಹತ್ವದ ಬಗ್ಗೆ ಹೇಳುವಾಗ ನನಗೆ ಬಹಳ ಆನಂದವಾಗುತ್ತಿದೆ. !

ಶೃಂಗಾರ ಕೆರೆ

ನಾಗೋಠಉಯಿಂದ ಸ್ವಲ್ಪ ದೂರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ರಾಜಧಾನಿಯಾದ ರಾಯಗಡ ಇದೆ. ಹಿಂದೆ ಇಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಟಂಕಸಾಲೆ (ನಾಣ್ಯಗಳನ್ನು ತಯಾರಿಸುವ ಕಾರಖಾನೆ) ಇತ್ತು. ಈ ಊರಿನಲ್ಲಿ ಅನೇಕ ಕೆರೆಗಳಿವೆ. ಹಾಗಾಗಿ ಇಲ್ಲಿ ಛತ್ರಪತಿಗಳ ಸೈನ್ಯದ ಕುದುರೆಲಾಯಗಳಿದ್ದವು. ಸಚ್ಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮಸ್ಥಾನದ ಹತ್ತಿರ ಐತಿಹಾಸಿಕ ಶೃಂಗಾರ ಕೆರೆ ಇದೆ. ‘ಇಲ್ಲಿ ಆ ಕಾಲದಲ್ಲಿ ಆನೆಗಳನ್ನು ಸಿಂಗರಿಸಲಾಗುತ್ತಿತ್ತು.’ ಜನ್ಮಸ್ಥಾನದ ಪಕ್ಕದಲ್ಲಿ ‘ಆಂಗರ ಆಳಿ’ ಎಂಬ ಹೆಸರಿನ ಬೀದಿ ಇದೆ. ಹಿಂದೆ ‘ಕಾನ್ಹೊಜಿ ಆಂಗ್ರೆ ಇವರು ಇಲ್ಲಿ ಬರುತ್ತಿದ್ದರು.’ ‘ಆಂಗ್ರೆ’ ಹೆಸರಿನ ಅಪಭ್ರಂಶವಾಗಿ ಈ ಬೀದಿಯ ಹೆಸರು ಈಗ ‘ಆಂಗರ ಆಳಿ’ ಎಂದಾಗಿದೆ.

ಸೌ. ರೂಪಾಲಿ ಅಭಯ ವರ್ತಕ

ನಾಗೋಠಣೆಯಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮಸ್ಥಾನದಲ್ಲಿ ನಡೆದ ಬುದ್ಧಿಗೆ ಮೀರಿದ ಪರಿವರ್ತನೆ

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮದ ಕೋಣೆಯ ನೆಲಹಾಸುಗಳ (ಟೈಲ್ಸ್‌) ಹಳದಿ ಬಣ್ಣ ಕಡಿಮೆಯಾಗಿ ಈಗ ಬಿಳಿ ಬಣ್ಣ ತುಂಬಾ ಹೆಚ್ಚಾಗುತ್ತಿದೆ.

೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮಸ್ಥಾನದ ವಾಸ್ತುವಿನಲ್ಲಿ ಮತ್ತು ದೇವರ ಮನೆಯಲ್ಲಿ ದೇವತೆಗಳ ಚಿತ್ರಗಳ ಬಣ್ಣಗಳೂ ತಿಳಿಯಾಗಿವೆ. ‘ಆ ಚಿತ್ರಗಳು ನಿರ್ಗುಣ ಸ್ತರಕ್ಕೆ ಹೋಗಿವೆ’, ಎಂದು ಅರಿವಾಗುತ್ತದೆ.

– ಸೌ. ರೂಪಾಲಿ ಅಭಯ ವರ್ತಕ, ನಾಗೋಠಣೆ, ರಾಯಗಡ ಜಿಲ್ಲೆ. (೧೦.೫.೨೦೨೩)

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಉಚ್ಚ ಭಾವ !

ಶ್ರೀ. ಅಭಯ ವಿಜಯ ವರ್ತಕ

೧. ನಾವೆಲ್ಲ ಸಾಧಕರು ದೇವದ ಆಶ್ರಮದಿಂದ ನಾಗೋಠಣೆಗೆ ಹೊರಟೆವು, ಆಗಿನಿಂದ  ಶ್ರೀಸತ್‌ಶಕ್ತಿ ಬಿಂದಾ ಅಕ್ಕನವರ ಮುಖದ ಮೇಲೆ ಗುರುದೇವರ ಜನ್ಮಸ್ಥಾನಕ್ಕೆ ಹೋಗುವ ವಿಷಯದಲ್ಲಿ ಅತ್ಯುಚ್ಚ ಭಾವ ಅರಿವಾಗುತ್ತಿತ್ತು. ‘ಅವರ ಕಣ್ಣುಗಳು ಹೆಚ್ಚೆಚ್ಚು ಭಾವಾಶ್ರುಗಳಿಂದ ತುಂಬುತ್ತಿವೆ’, ಎಂದು ಅರಿವಾಗುತ್ತಿತ್ತು.

೨. ನಾಗೋಠಣೆಯ ಜನ್ಮಸ್ಥಾನವನ್ನು ತಲುಪಿದಾಗ ಶ್ರೀಸತ್‌ಶಕ್ತಿ ಬಿಂದಾ ಅಕ್ಕನವರು ಆ ವಾಸ್ತುವನ್ನು ‘ಆ ವಾಸ್ತುವೆಂದರೆ ಗುರುದೇವರ ಸಗುಣ ರೂಪವಾಗಿದೆ’ ಎಂಬ ರೀತಿಯಲ್ಲಿ ನಿಧಾನವಾಗಿ ಮತ್ತು ಭಾವಪೂರ್ಣವಾಗಿ ಸ್ಪರ್ಶಿಸುತ್ತಿದ್ದರು,

೩. ನನ್ನ ತಂದೆ ದಿ. ನಾನಾ ವರ್ತಕ ಇವರ ಬಳಿ ಅನೇಕ ಕೆಲಸಗಾರರು ಬರುತ್ತಿದ್ದರು. ಶ್ರೀಸತ್‌ಶಕ್ತಿ (ಸೌ.) ಬಿಂದಾಅಕ್ಕನವರು ಅವರೊಂದಿಗೂ ಮಾತನಾಡಿದರು. ನಾನಾರ ಸಂಪರ್ಕದಲ್ಲಿರುವ ಶ್ರೀ. ರಾಜಾ ಕುಷ್ಟೆ ಇವರು ಸನಾತನದೊಂದಿಗೆ ವಿಶೇಷವಾಗಿ ಜೋಡಿಸಲ್ಪಟ್ಟಿಲ್ಲ. ಆದರೂ ಅವರು ನಿಯಮಿತವಾಗಿ ಈ ವಾಸ್ತುವಿನ ದರ್ಶನಕ್ಕಾಗಿ ಬರುತ್ತಾರೆ. ಅವರಿಗೂ ಶ್ರೀಸತ್‌ಶಕ್ತಿ (ಸೌ.) ಬಿಂದಾ ಅಕ್ಕನವರ ಭೇಟಿಯಾಯಿತು. ‘ಶ್ರೀ. ರಾಜಾ ಕುಷ್ಟೆ ಇವರನ್ನು ನೋಡಿದರೆ ಬಹಳ ಒಳ್ಳೆಯದೆನಿಸುತ್ತದೆ’, ಎಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ಅಕ್ಕನವರು ಹೇಳಿದರು.

‘ಗುರುದೇವರ ಜನ್ಮಸ್ಥಾನದ ವಾಸ್ತು ಕಾಲದ ಪ್ರವಾಹದಲ್ಲಿ ಜೀರ್ಣವಾದುದರಿಂದ ಅದನ್ನು ಒಳ್ಳೆಯ ರೀತಿಯಲ್ಲಿ ಸಂರಕ್ಷಿಸಲು ಏನು ಮಾಡಬೇಕು’, ಎಂಬ ಬಗ್ಗೆಯೂ ಅವರು ಅಧ್ಯಯನ ಮಾಡುತ್ತಿದ್ದರು. ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಅಕ್ಕನವರು ಈ ಭೇಟಿಯ ಮಾಧ್ಯಮದಿಂದ ನಮಗೆ ಬಹಳ ಆನಂದ ನೀಡಿದರು.’ – ಶ್ರೀ. ಅಭಯ ವಿಜಯ ವರ್ತಕ, ಸನಾತನ ಸಂಸ್ಥೆ (೧೦.೫.೨೦೨೩)

ನಾಗೋಠಣೆ ಊರು ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮಸ್ಥಾನದಲ್ಲಿ ಸಾಧಕರು ಮತ್ತು ಸಮಾಜದ ಜನರಿಗೆ ಬಂದ ಅನುಭೂತಿಗಳು

೨೫ ವರ್ಷಗಳ ಹಿಂದೆ ನಾಗೋಠಣೆ ಬಸ್‌ ನಿಲ್ದಾಣದಲ್ಲಿ ಇಳಿದಾಗ ಬಹಳ ಸಾತ್ತ್ವಿಕತೆಯ ಸ್ಪಂದನಗಳು ಅರಿವಾಗುತ್ತಿದ್ದವು. ಈಗ ಜನರ ವಾಸ್ತವ್ಯ ಹೆಚ್ಚಾದುದರಿಂದ ಅಷ್ಟೇನೂ ಅರಿವಾಗುವುದಿಲ್ಲ, ಆದರೂ ಇತರ ಊರುಗಳ ತುಲನೆಯಲ್ಲಿ ನಾಗೋಠಣೆಗೆ ಬಂದಾಗ ಒಳ್ಳೆಯದೆನಿಸುತ್ತದೆ.

೧. ಜನ್ಮಸ್ಥಾನದ ವಾಸ್ತುವಿನಲ್ಲಿ ಸನಾತನದ ೬೧ ನೇ ಸಂತರಾದ ಪೂ. ಅನಂತ ಪಾಟೀಲ (ತಾತ್ಯಾ) ಇವರು ಅನೇಕ ವರ್ಷಗಳ ಕಾಲ ನಿಯಮಿತವಾಗಿ ಬಂದು ನಾಮಜಪವನ್ನು ಮಾಡುತ್ತಿದ್ದರು. ‘ಪೂ. ಪಾಟೀಲತಾತ್ಯಾ ಇವರು ಈ ವಾಸ್ತುವಿನ ಲಾಭ ಪಡೆದರು’, ಎಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪೂ. ತಾತ್ಯಾ ಇವರು ಸಂತರಾದಾಗ ಉದ್ಗರಿಸಿದ್ದರು.

೨. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮಸ್ಥಾನಕ್ಕೆ ಬರುವಾಗ ನಾಗೋಠಣೆ ಊರಿನ ಸಮೀಪ ಬಂದಾಗ ನನ್ನ ನಾಮಜಪ ಆರಂಭವಾಯಿತು’, ಎಂದು ಶೇ. ೬೮ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸಾಧಕ ಶ್ರೀ ತುಕಾರಾಮ (ಬಾಪು) ಲೊಂಢೆ ಇವರು ಹೇಳಿದರು.

೩. ಫೋಂಡಾ, ಗೋವಾದ ಸಾಧಕಿ ಕು. ವೈದೇಹಿ ಶಿಂದೆ ತನ್ನ ಸಂಬಂಧಿಕರೊಂದಿಗೆ ನಾಗೋಠಣೆಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮಸ್ಥಾನಕ್ಕೆ ಬಂದಾಗ ತನಗೆ ಬಹಳ ಭಾವ ಜಾಗೃತಿಯಾಗಿತ್ತು ಎಂದು ಹೇಳಿದ್ದಾಳೆ.

೪. ‘ನನಗೆ ಎಷ್ಟೇ ತೊಂದರೆಗಳು ಆದರೂ, ಇಲ್ಲಿಗೆ ಬಂದಾಗ ನನ್ನ ಎಲ್ಲ ತೊಂದರೆಗಳು ದೂರವಾಗುತ್ತವೆ ಮತ್ತು ನನಗೆ ಬಹಳ ಒಳ್ಳೆಯದೆನಿಸುತ್ತದೆ. ಇಲ್ಲಿ ನನಗೆ ಬಹಳ ಕಷ್ಟದ ಕೆಲಸವಿದೆ ಆದರೂ, ನನ್ನ ಎಲ್ಲ ದಣಿವು ದೂರಾಗುತ್ತದೆ’, ಎಂದು ನಮ್ಮ ಮನೆಯಲ್ಲಿ ಕಸ ಗುಡಿಸುವ, ನೆಲ ಒರೆಸುವ ಮುಂತಾದ ಸೇವೆಗಳನ್ನು ಮಾಡುವ ಶ್ರೀಮತಿ ಶೋಭಾತಾಯಿ ಯಾವಾಗಲೂ ಹೇಳುತ್ತಾಳೆ.

ಜನ್ಮಸ್ಥಳದ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ವ್ಯಕ್ತಪಡಿಸಿದ ಭಾವ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮಸ್ಥಾನಕ್ಕೆ ೨.೨.೨೦೨೩ ಈ ದಿನದಂದು ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಚರಣಕಮಲಗಳ ಸ್ಪರ್ಶವಾಯಿತು ಮತ್ತು ಆ ವಾಸ್ತುವಿನ ಚೈತನ್ಯ ಇನ್ನಷ್ಟು ಹೆಚ್ಚಾಯಿತು.

ಜನ್ಮಸ್ಥಾನದ ವಾಸ್ತುವಿಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಅತ್ಯಂತ ಭಾವಪೂರ್ಣವಾಗಿ ವಂದಿಸಿದರು. ಇಡೀ ವಾಸ್ತು ಮತ್ತು ವಾಸ್ತುವಿನ ಅಕ್ಕಪಕ್ಕದ ಪರಿಸರವನ್ನು ನೋಡುವಾಗ ಅವರು ಆ ಬಗ್ಗೆ ಅತ್ಯಂತ ಜಿಜ್ಞಾಸೆಯಿಂದ ಮತ್ತು ಸೂಕ್ಷ್ಮದಿಂದ ಅರಿತುಕೊಳ್ಳುತ್ತಿದ್ದರು. ವಾಸ್ತುವಿನ ದರ್ಶನ ಪಡೆಯುವಾಗ ಅವರು, ”ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಅಸ್ತಿತ್ವವು ಇಲ್ಲಿ ಎಲ್ಲೆಡೆ ಅರಿವಾಗುತ್ತದೆ. ಎಲ್ಲ ಕಡೆಗೆ ಅವರ ಸ್ಪಂದನಗಳಿವೆ. ಇಲ್ಲಿನ ಮಣ್ಣು, ನೀರು, ಗಾಳಿ ಎಲ್ಲವೂ ಭಿನ್ನವಾಗಿವೆ. ಅವು ಬಹಳ ಸಾತ್ತ್ವಿಕವಾಗಿವೆ. ಇವೆಲ್ಲದ್ದಕ್ಕೆ ಒಂದು ಬೇರೆಯೇ ಆದ ಗಂಧವಿದೆ. ಇವೆಲ್ಲವುಗಳ ಸೂಕ್ಷ್ಮ ಪರೀಕ್ಷಣೆಯನ್ನು ಮಾಡೋಣ. ಇನ್ನು ಮುಂದೆ ಈ ವಾಸ್ತುವಿನ ರೂಪದಲ್ಲಿ ಇಡೀ ಜಗತ್ತಿಗೆ ‘ಅವತಾರದ ಜನ್ಮಸ್ಥಾನ’ ಎಂಬ ಅಮೂಲ್ಯ ಆಸ್ತಿ ದೊರಕಲಿದೆ’’, ಎಂದರು.

ದಿ. ವಿಜಯ (ನಾನಾ) ವರ್ತಕ

ಜನ್ಮಸ್ಥಾನದ ವಾಸ್ತುವಿನಲ್ಲಿ ಹಿಂದೆ ಬಂದು ಹೋದ ಸಂತರನ್ನು, ಹಾಗೆಯೇ ಈ ವಾಸ್ತುವನ್ನು ನೋಡಿಕೊಳ್ಳುತ್ತಿದ್ದ ದಿ. ವಿಜಯ (ನಾನಾ) ವರ್ತಕ (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಸೋದರಮಾವನ ಮಗ. ಮೃತ್ಯುವಿನ ಸಮಯದಲ್ಲಿ ಅವರ ಆಧ್ಯಾತ್ಮಿಕ ಮಟ್ಟ ಶೇ. ೬೫ ರಷ್ಟಿತ್ತು.) ಅವರ ಬಗ್ಗೆ ಕೇಳುವಾಗ ಅವರ ಮುಖಭಾವವು ಅತ್ಯಂತ ಕೃತಜ್ಞತೆಯ ಭಾವದಲ್ಲಿತ್ತು. ಈ ವಾಸ್ತುವಿನ ನಿರ್ವಹಣೆ ಮಹತ್ವದ್ದಾಗಿತ್ತು. ಈ ವಾಸ್ತು ಮತ್ತು ಆ ಸುತ್ತಲಿನ ವಾತಾವರಣ ದೊಡ್ಡದಾಗಿರುವುದರಿಂದ ಅದನ್ನು ನೋಡಿಕೊಳ್ಳುವುದು ಸುಲಭವಿರಲಿಲ್ಲ. ಈ ಸಂದರ್ಭದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು, ”ನಾನಾ ಇವರು ಇದ್ದುದರಿಂದ ಈ ವಾಸ್ತುವಿನ ಬಗ್ಗೆ ನಮಗೆ ಇಲ್ಲಿಯವರೆಗೆ ವಿಶೇಷವಾಗಿ ಏನೂ ಮಾಡಬೇಕಾಗಲಿಲ್ಲ. ನಿಮಗೆ (ಮಗ ಶ್ರೀ. ಅಭಯ ಮತ್ತು ಸೊಸೆ ಸೌ. ರೂಪಾಲಿ ವರ್ತಕ ಇವರಿಗೆ) ಅಥವಾ ಸನಾತನ ಸಂಸ್ಥೆಗೂ ಏನೂ ಮಾಡಬೇಕಾಗಲಿಲ್ಲ ! ಅವರು ಎಲ್ಲವನ್ನು ಒಬ್ಬರೇ ನೋಡಿಕೊಂಡರು. ಆ ಮೂಲಕ ಅವರ ಸಾಧನೆಯಾಯಿತು”, ಎಂದರು. – ಸೌ. ರೂಪಾಲಿ ಅಭಯ ವರ್ತಕ, ನಾಗೋಠಣೆ, ರಾಯಗಡ ಜಿಲ್ಲೆ. (೧೦.೫.೨೦೨೩)