ಸಪ್ತರ್ಷಿಗಳ ಆಜ್ಞೆಯಂತೆ ಸನಾತನದ ಸಾಧಕರು ಶಿವಮೊಗ್ಗದ ಪಂಚಶಿಲ್ಪಕಾರ ಪೂ. ಕಾಶೀನಾಥ ಕವಟೆಕರಗುರುಜಿ (ವಯಸ್ಸು ೮೬ ವರ್ಷಗಳು) ಇವರ ಮಾರ್ಗದರ್ಶನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಿಗಾಗಿ ಮರದ ರಥವನ್ನು ತಯಾರಿಸಿದರು. ಸಾಧಕರಿಗೆ ‘ರಥವನ್ನು ಹೇಗೆ ತಯಾರಿಸಬೇಕು ?, ಎಂಬುದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಪೂ. ಕವಟೆಕರಗುರುಜಿಯವರು ಆಗಾಗ ಮಾಡಿದ ಮಾರ್ಗದರ್ಶನದಿಂದ ಈ ರಥ ಸಾಕಾರವಾಯಿತು. ಆ ಕುರಿತಾದ ಕಿರು ಮಾಹಿತಿ ನೀಡುತ್ತಿದ್ದೇವೆ.
೧. ಪಂಚಶಿಲ್ಪಕಾರ ಪೂ. ಕಾಶಿನಾಥ ಕವಟೆಕರಗುರುಜಿಯವರ ಭೇಟಿ ಮತ್ತು ಅವರು ರಥ ತಯಾರಿಸಲು ಸಾಧಕರಿಗೆ ಮಾಡಿದ ಮಾರ್ಗದರ್ಶನ !
೧ ಅ. ಪೂ. ಕವಟೆಕರಗುರುಜಿ ಇವರನ್ನು ಭೇಟಿಯಾದಾಗ ಅವರು ಸಾಧಕರಿಗೆ ರಥ ತಯಾರಿಸುವ ವಿಷಯದಲ್ಲಿ ಮಾರ್ಗದರ್ಶನ ಮಾಡುವುದು ಮತ್ತು ಅವರ ಮಾರ್ಗದರ್ಶನಕ್ಕನುಸಾರ ಅಧ್ಯಯನ ಮಾಡುವಾಗ ಸಾಧಕರಿಗೆ ರಥ ತಯಾರಿಸುವ ವಿಷಯದಲ್ಲಿ ಆತ್ಮವಿಶ್ವಾಸ ಬರುವುದು : ‘ರಥಕ್ಕೆ ಸಂಬಂಧಿಸಿದಂತೆ ನಮಗೆ ಯಾರು ಸಹಾಯ ಮಾಡಬಹುದು ? ರಥವನ್ನು ಯಾರು ತಯಾರಿಸಿಕೊಡಬಹುದು ಅಥವಾ ಅದಕ್ಕಾಗಿ ಯಾರು ಯೋಗ್ಯ ಮಾರ್ಗದರ್ಶನ ಮಾಡಬಹುದು ?’, ಎಂದು ನಾವು ಹುಡುಕುತ್ತಿದ್ದೆವು. ಈ ಕಾಲಾವಧಿಯಲ್ಲಿ ಪೂ. ರಮಾನಂದಾಣ್ಣ (ಸನಾತನದ ೭೫ ನೇ ಸಂತ ಪೂ. ರಮಾನಂದ ಗೌಡ) ಇವರು ಈ ಸಂದರ್ಭದಲ್ಲಿ ಪ್ರಯತ್ನಿಸಿದರು. ಆಗ ಪೂ. ಅಣ್ಣನವರಿಗೆ ‘ಶಿವಮೊಗ್ಗದ ಪೂ. ಕಾಶಿನಾಥ ಕವಟೆಕರಗುರುಜಿಯವರು ಪಂಚಶಿಲ್ಪಕಾರರಾಗಿದ್ದು ರಥವನ್ನೂ ತಯಾರಿಸುತ್ತಾರೆ’, ಎಂಬುದು ತಿಳಿಯಿತು. ಪೂ. ಅಣ್ಣಾ ಇವರು ಮೊದಲು ಪೂ. ಗುರುಜಿಯವರೊಂದಿಗೆ ಮಾತನಾಡಿದರು ಮತ್ತು ನಂತರ ಅವರು ನಮಗೆ ಪೂ. ಗುರುಜಿಯವರನ್ನು ಭೇಟಿಯಾಗಿ ಬರಲು ಹೇಳಿದರು.
೧೦.೯.೨೦೨೨ ರಂದು ನಾವು ಪೂ. ಕವಟೆಕರಗುರುಜಿಯವರ ಬಳಿಗೆ ಹೋದೆವು ಮತ್ತು ಅವರನ್ನು ಭೇಟಿಯಾಗಿ ನಮ್ಮ ಸಂಕಲ್ಪನೆಯನ್ನು ಮತ್ತು ರಥದ ಬಿಡಿಸಿದ ನಕಾಶೆಯನ್ನು ತೋರಿಸಿದೆವು. ನಕಾಶೆಯನ್ನು ನೋಡಿ ಅವರು ‘ರಥವು ಗಟ್ಟಿಮುಟ್ಟಾಗುವ ದೃಷ್ಟಿಯಿಂದ ಮತ್ತು ಇನ್ನಷ್ಟು ಚೆನ್ನಾಗಿ ಕಾಣಲು ಏನೇನು ಬದಲಾವಣೆ ಮಾಡಬೇಕು ?’, ಎಂಬುದನ್ನು ನಮಗೆ ಸೂಚಿಸಿದರು. ಅಲ್ಲಿ ೨ ದಿನ ಅವರು ತಾವು ಸ್ವತಃ ತಯಾರಿಸಿದ ರಥವನ್ನು ನಮಗೆ ತೋರಿಸಿದರು ಮತ್ತು ‘ರಥ ಹೇಗಿರಬೇಕು ?’, ಈ ಬಗ್ಗೆ ನಮ್ಮಿಂದ ಅಧ್ಯಯನ ಮಾಡಿಸಿಕೊಂಡರು. ಪೂ. ಗುರುಜಿಯವರು ನಮಗೆ ರಥದ ಎತ್ತರ, ಅಗಲ, ಮತ್ತು ಇತರ ಅಳತೆಗಳ ಬಗ್ಗೆ ಕಲಿಸಿದರು. ‘ರಥದ ಮರದ ಹಲಗೆಗಳನ್ನು ಒಂದಕ್ಕೊಂದು ಹೇಗೆ ಜೋಡಿಸಬೇಕು ?’, ಎಂಬುದರ ಬಗ್ಗೆಯೂ ಅವರು ನಮಗೆ ಹೇಳಿದರು. ಅವರು ನಮಗೆ ರಥದ ವಿನ್ಯಾಸವನ್ನು ಬಿಡಿಸಿ ಕಲಿಸಿದರು.
ಪೂ. ಕವಟೆಕರಗುರುಜಿಯವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುವಾಗ ಸಾಧಕರಿಗೆ ‘ರಥವನ್ನು ನಾವೇ ತಯಾರಿಸಬಹುದು’, ಎಂಬ ಆತ್ಮವಿಶ್ವಾಸ ಮೂಡತೊಡಗಿತು. ಅಲ್ಲಿಯವರೆಗೆ ‘ನಮ್ಮ ಅಧ್ಯಯನ ಪೂರ್ತಿಗೊಂಡ ನಂತರ ಒಬ್ಬ ಒಳ್ಳೆಯ ರಥಶಿಲ್ಪಿಗಳಿಂದ ನಾವು ರಥವನ್ನು ತಯಾರಿಸಿಕೊಳ್ಳೋಣ’, ಎಂಬ ವಿಚಾರ ಹೆಚ್ಚಿತ್ತು. ಆದರೆ ಪೂ. ಕವಟೆಕರಗುರುಜಿ ಯವರೇ ಸಾಧಕರಿಗೆ, ”ಈ ಮಾಧ್ಯಮದಿಂದ ನೀವು ನಿಮ್ಮ ಕಲೆಯನ್ನು ಶ್ರೀ ಗುರುಗಳ ಚರಣಗಳಲ್ಲಿ ಅರ್ಪಿಸಿ !’’ ಎಂದು ಹೇಳಿದರು.
೧ ಆ. ಪೂ. ಕವಟೆಕರಗುರುಜಿಯವರು ಸಾಧಕರಿಗೆ ರಥದ ರೇಖಾಚಿತ್ರವನ್ನು ಬಿಡಿಸಿಡಲು ಹೇಳುವುದು ಮತ್ತು ಸಾಧಕರು ಬಿಡಿಸಿದ ರೇಖಾಚಿತ್ರವು ಅವರಿಗೆ ಇಷ್ಟವಾಗುವುದು : ಪೂ. ಕವಟೆಕರಗುರುಜಿಯವರು ಭೋಜನದ ನಂತರ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಅವರು ವಿಶ್ರಾಂತಿಗೆ ಹೋಗುವಾಗ ನಮಗೆ, ”ರಥದ ರೇಖಾಚಿತ್ರವನ್ನು ಬಿಡಿಸಿಡಿ’’, ಎಂದು ಹೇಳಿದರು. ನಾವು ಭೋಜನ ಮಾಡಿ ತಕ್ಷಣ ರೇಖಾಚಿತ್ರವನ್ನು ಬಿಡಿಸಲು ಆರಂಭಿಸಿದೆವು. ‘ಅವರು ಏಳುವ ಮೊದಲೇ ನಾವು ರೇಖಾಚಿತ್ರವನ್ನು ಬಿಡಿಸಬೇಕು. ಅವರ ಸಮಯ ವ್ಯರ್ಥವಾಗಬಾರದು’, ಎಂದು ವಿಚಾರ ಮಾಡಿ ನಾವು ರೇಖಾಚಿತ್ರವನ್ನು ಬಿಡಿಸಲು ಪ್ರಯತ್ನಿಸಿದೆವು. ಪೂ. ಗುರುಜಿಯವರು ಎದ್ದ ತಕ್ಷಣ ನಾವು ಅವರಿಗೆ ಅದನ್ನು ತೋರಿಸಿದೆವು. ಆಗ ಅವರು, ”ಈಗ ಸರಿ ಇದೆ. ‘ನೀವೇನು ಮಾಡುತ್ತೀರಿ ?’, ಎಂದು ನಾನು ನೋಡುತ್ತಿದ್ದೆನು’’, ಎಂದು ಹೇಳಿದರು. ಆಗ ‘ಸಂತರು ಹೇಗೆ ಪರೀಕ್ಷೆ ತೆಗೆದುಕೊಳ್ಳುತ್ತಾರೆ ?’, ಎಂಬುದು ನಮ್ಮ ಗಮನಕ್ಕೆ ಬಂದಿತು. ಆ ರೇಖಾಚಿತ್ರವು ಅವರಿಗೆ ಇಷ್ಟವಾಯಿತು.
೧ ಇ. ಪೂ. ಕವಟೆಕರಗುರುಜಿಯವರು ‘ಸೇವೆಯನ್ನು ಮಾಡುವಾಗ ಭಗವಂತನ ಸಹಾಯ ಪಡೆದು ನಾಮಜಪದೊಂದಿಗೆ ಸೇವೆಯನ್ನು ಮಾಡಿದರೆ ಭಗವಂತ ಸಹಾಯ ಮಾಡುತ್ತಾನೆ’, ಇದರ ಬಗ್ಗೆ ಹೇಳಿದ ಅನುಭೂತಿ ! : ಪೂ. ಕವಟೆಕರಗುರುಜಿಯವರು ಈ ರಥಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ಮಾಡುವಾಗ ನಮಗೆ ತಮ್ಮ ಒಂದು ಅನುಭೂತಿಯನ್ನು ಹೇಳಿದರು. ಅವರು, ”ನಾನು ದೇವಸ್ಥಾನದ ಒಂದು ಸೇವೆಯನ್ನು ವಹಿಸಿಕೊಂಡಿದ್ದೆ. ಆಗ ಆ ಸೇವೆಗಾಗಿ ನನ್ನ ಸಹಾಯಕ್ಕೆ ಕೇವಲ ಇಬ್ಬರು ಕೆಲಸಗಾರರಿದ್ದರು ಮತ್ತು ಆ ಸೇವೆಯನ್ನು ನಿಶ್ಚಿತ ಸಮಯದಲ್ಲಿ ಪೂರ್ಣಗೊಳಿಸಬೇಕಿತ್ತು. ಇದ್ದಕ್ಕಿದ್ದಂತೆಯೇ ಇಬ್ಬರೂ ಕೆಲಸಗಾರರು ಕೆಲಸ ಬಿಟ್ಟು ಹೋದರು. ಆಗ ನಾನು ‘ಈಗ ಏನು ಮಾಡಬೇಕು ?’, ಎಂದು ವಿಚಾರ ಮಾಡುತ್ತಾ ದೇವರಲ್ಲಿ ಪ್ರಾರ್ಥಿಸಿ ಸೇವೆಯನ್ನು ಆರಂಭಿಸಿದೆನು. ಸೇವೆಯನ್ನು ಮಾಡುವಾಗ ಪ್ರತಿ ಬಾರಿ ನಾನು ‘ಶಿವಾಯ ಶಿವಾಯ ಶಿವಾಯ |’, ಎಂದು ನಾಮ ಜಪವನ್ನು ಮಾಡುತ್ತಿದ್ದೆ. ನನ್ನ ಸೇವೆ ೨೦ ಅಡಿ ಎತ್ತರದ ಮೇಲೆ ನಡೆದಿತ್ತು, ಆದರೂ ನಾನು ಹೆದರಲಿಲ್ಲ. ನಾನೊಬ್ಬನೇ ಉಪಕರಣ ಗಳನ್ನು ಕೆಳಗಿನಿಂದ ಮೇಲೆ ತೆಗೆದುಕೊಂಡು ಹೋಗಿ ಸೇವೆಯನ್ನು ಮಾಡುತ್ತಿದ್ದೆನು. (ಪೂ. ಗುರುಜಿಯವರಿಗೆ ೮೫ ವರ್ಷಗಳಾಗಿವೆ) ಈ ಸೇವೆಯಲ್ಲಿ ದೇವರು ನನಗೆ ಸಹಾಯ ಮಾಡಿದುದರಿಂದ ೧೫ ದಿನಗಳ ಸೇವೆ ೮ ದಿನಗಳಲ್ಲಿ ಪೂರ್ಣವಾಯಿತು’’, ಎಂದು ಹೇಳಿದರು. ಅದನ್ನು ಕೇಳಿ ನಮಗೆ ‘ಪ್ರತಿಯೊಂದು ಸೇವೆಯನ್ನು ನಾಮಜಪ ಸಹಿತ ಮಾಡಿದರೆ, ದೇವರು ಖಂಡಿತವಾಗಿಯೂ ಸಹಾಯ ಮಾಡುತ್ತಾನೆ’, ಎಂದು ಕಲಿಯಲು ಸಿಕ್ಕಿತು. ಆದುದರಿಂದ ನಾವು ಆ ರೀತಿ ಪ್ರಯತ್ನಿಸಲು ಆರಂಭಿಸಿದೆವು.
೧ ಈ. ಪೂ. ಗುರುಜಿಯವರ ಬಳಿ ಮಾಡಿದ ಅಧ್ಯಯನದ ಆಧಾರದಲ್ಲಿ ಸೌ. ಜಾಹ್ನವಿ ಶಿಂದೆ ಇವರು ಪ.ಪೂ. ಗುರುದೇವರ ಮಾರ್ಗದರ್ಶನದಲ್ಲಿ ಸೂಕ್ಷ್ಮ ಸ್ಪಂದನಗಳ ಅಧ್ಯಯನ ಮಾಡಿ ಶ್ರೀವಿಷ್ಣುತತ್ತ್ವವನ್ನು ಆಕರ್ಷಿಸುವ ರಥದ ಪ್ರಾಥಮಿಕ ರಚನೆಯನ್ನು (ನಕಾಶೆಯನ್ನು) ತಯಾರಿಸುವುದು : ‘ರಥವನ್ನು ಯಾರಿಂದ ತಯಾರಿಸಿಕೊಳ್ಳಬೇಕು ?’, ಎಂಬುದರ ಅಧ್ಯಯನ ನಡೆದಾಗ ಕೊನೆಗೆ ‘ಸಾಧಕರೇ ರಥವನ್ನು ತಯಾರಿಸುವುದು’, ಎಂದು ನಿರ್ಧರಿಸಲಾಯಿತು. ನಾವು ರಾಮನಾಥಿ ಆಶ್ರಮಕ್ಕೆ ಹಿಂದಿರುಗಿದ ನಂತರ ಪೂ. ಕವಟೆಕರಗುರುಜಿಯವರ ಬಳಿಗೆ ಮಾಡಿದ ಅಧ್ಯಯನ ಆಧಾರದಲ್ಲಿ ಸೌ. ಜಾಹ್ನವಿ ರಮೇಶ ಶಿಂದೆ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸೂಕ್ಷ್ಮ ಸ್ಪಂದನಗಳ ಅಧ್ಯಯನ ಮಾಡಿ ಶ್ರೀವಿಷ್ಣುತತ್ತ್ವವನ್ನು ಆಕರ್ಷಿಸುವ ರಥದ ಪ್ರಾಥಮಿಕ ರಚನೆಯನ್ನು (ನಕಾಶೆಯನ್ನು) ಸಿದ್ಧ ಮಾಡಿದರು.
೧ ಉ. ಪೂ. ಗುರುಜಿಯವರು ರಾಮನಾಥಿ ಆಶ್ರಮಕ್ಕೆ ಬಂದು ಸಾಧಕರಿಗೆ ರಥದ ಬಗ್ಗೆ ಮಾರ್ಗದರ್ಶನ ಮಾಡುವುದು : ಪೂ. ಕವಟೆಕರಗುರುಜಿಯವರ ವಯಸ್ಸು ೮೫ ವರ್ಷಗಳು, ಆದರೂ ಅವರು ನಮಗೆ, ”ನೀವು ರಾಮನಾಥಿ ಆಶ್ರಮದಲ್ಲಿಯೇ ರಥವನ್ನು ತಯಾರಿಸಿ. ನಾನು ನಡುನಡುವೆ ಬಂದು ನಿಮಗೆ ಮಾರ್ಗದರ್ಶನ ಮಾಡುತ್ತೇನೆ’’, ಎಂದು ಹೇಳಿದರು. ನಾವು ಕರೆದಾಗಲೆಲ್ಲಾ, ಅವರು ಆಶ್ರಮಕ್ಕೆ ಬಂದು ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಗುರುದೇವರ ಕೃಪೆಯಿಂದ ಪೂ. ಗುರುಜಿಯವರು ನಮಗೆ ಸರಿಯಾಗಿ ತಿಳಿಯುವವರೆಗೆ ಪುನಃ ಪುನಃ ಮಾರ್ಗದರ್ಶನ ಮಾಡಿದರು.’ – ಶ್ರೀ. ಪ್ರಕಾಶ ಸುತಾರ, ಸನಾತನ ಆಶ್ರಮ, ರಾಮನಾಥಿ, ಗೋವಾ.
೧ ಊ. ಶ್ರೀವಿಷ್ಣುತತ್ತ್ವದ ಆಕಾರದ ರಥದಲ್ಲಿ ಪೂ. ಕವಟೆಕರ ಗುರುಜಿಯವರು ಹೇಳಿದ ಎಲ್ಲ ಪ್ರಾಯೋಗಿಕ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಬದಲಾವಣೆ ಮಾಡುವುದು : ‘ರಥದ ಚಿತ್ರವನ್ನು ನಾವು ಪೂ. ಕವಟೆಕರಗುರುಜಿಯವರಿಗೆ ತೋರಿಸಿದೆವು. ಪೂ. ಕವಟೆಕರಗುರುಜಿಯವರು ಹೇಳಿದ ಸುಧಾರಣೆಗಳು ತೀರಾ ಪ್ರಾಯೋಗಿಕ ತತ್ತ್ವಕ್ಕನುಸಾರ ಇದ್ದವು. ರಥಶಾಸ್ತ್ರದ ಬಗ್ಗೆ ಅವರ ಆಳವಾದ ಅಭ್ಯಾಸವಿತ್ತು. ‘ಕೇವಲ ಚಿತ್ರವನ್ನು ನೋಡಿಯೇ ಅವರು ನಿಜವಾದ ರಥವನ್ನು ತಯಾರಿಸಿದಾಗ ಏನು ಅಡಚಣೆಗಳು ಬರಬಹುದು ?’, ಎಂದು ಹೇಳುತ್ತಿದ್ದರು.
ಶ್ರೀವಿಷ್ಣುತತ್ತ್ವದ ಆಕಾರದ ರಥದಲ್ಲಿ ಪೂ. ಕವಟೆಕರಗುರುಜಿ ಯವರು ಹೇಳಿದ ಅಂಶಗಳನ್ನು ಗಮನದಲ್ಲಿಟ್ಟು ಬದಲಾವಣೆ ಮಾಡಿದೆವು. ಪರಾತ್ಪರ ಗುರು ಡಾಕ್ಟರರು ನಮಗೆ ಈ ಎರಡೂ ಚಿತ್ರಗಳನ್ನು ಪೂ. ಗುರುಜಿಯವರಿಗೆ ನೋಡಲು ಇಡಬೇಕೆಂದು ಹೇಳಿದರು. ಗುರುಜಿಯವರು ‘ಅದು ನಗರದ ಇಕ್ಕಟ್ಟಾದ ರಸ್ತೆಯ ಮೇಲೆ ಹೋಗುವುದಿರುವುದರಿಂದ ಅದರ ಅಗಲ ಎಷ್ಟಿರಬೇಕು ?
ಆ ಅಗಲಕ್ಕೆ ಅನುಸರಿಸಿ ಉದ್ದ ಎಷ್ಟು ಇದ್ದರೆ ಚೆನ್ನಾಗಿ ಕಾಣಿಸುತ್ತದೆ ? ಉದ್ದ ಮತ್ತು ಅಗಲ ಇವುಗಳ ತುಲನೆಯಲ್ಲಿ ಎತ್ತರ ಎಷ್ಟಿರಬೇಕು ? ರಥವನ್ನು ಹೊರಳಿಸುವಾಗ ಸಹಜವಾಗಿ ಮತ್ತು ಸುರಕ್ಷಿತವಾಗಿ ಹೊರಳುವುದು ಮತ್ತು ಸಾಧಕರಿಗೆ ಸಹಜವಾಗಿ ಎಳೆಯಲು ಸಾಧ್ಯವಾಗುವುದು’, ಅಂತಹ ಆಕಾರದ ಬಗ್ಗೆ ಹೇಳಿದರು. ಅವರ ಅನುಭವದಿಂದ ತಯಾರಾದ ರಥದ ಅನೇಕ ಸೂಕ್ಷ್ಮಗಳನ್ನು ಅವರು ನಮಗೆ ಕಲಿಸಿದರು.’
– ಸೌ. ಜಾಹ್ನವಿ ರಮೇಶ ಶಿಂದೆ, ಫೋಂಡಾ, ಗೋವಾ. (ಎಲ್ಲ ಅಂಶಗಳ ದಿನಾಂಕ : ೨೪.೫.೨೦೨೩)
‘ರಥನಿರ್ಮಿತಿಯ ನಿಮಿತ್ತ ಪೂ. ಕವಟೆಕರಗುರುಜಿ ಇವರನ್ನು ಭೇಟಿಯಾಗುವುದು’, ಇದು ಈಶ್ವರನ ಇಚ್ಛೆ ಆಗಿತ್ತು !‘ಸಾಧಕರು ಪೂ. ಕವಟೆಕರಗುರುಜಿ ಇವರನ್ನು ಭೇಟಿಯಾಗುವುದು ಮತ್ತು ಅವರು ಸಾಧಕರಿಂದ ಸೇವೆಯನ್ನು ಮಾಡಿಸಿಕೊಳ್ಳುವುದು’, ಇದೆಲ್ಲ ಈಶ್ವರನ ಇಚ್ಛೆಯಾಗಿತ್ತು’, ಎಂಬುದು ನನ್ನ ಗಮನಕ್ಕೆ ಬಂದಿತು. ಅವರು ಸಾಧಕರಿಗೆ ಯಾವುದನ್ನೂ ‘ರೆಡಿಮೆಡ್ (ತಯಾರು) ಕೊಡಲಿಲ್ಲ. ಗುರುಗಳು ಹೇಗಿರಬೇಕೋ, ಅವರು ಹಾಗೆಯೇ ಇದ್ದಾರೆ. ಸಾಧಕರು ಕಾಗದದ ಮೇಲೆ ರಥದ ಪ್ರತಿಕೃತಿಯನ್ನು ಬಿಡಿಸುತ್ತಿದ್ದರು. ಆಗ ಅವರು ಸಾಧಕರಿಗೆ, ”ನೀವು ಹೀಗೆ ಮಾಡಿದರೆ ಹೇಗೆ ಸಾಧ್ಯವಾಗುವುದು ? ದೊಡ್ಡ ಕೋಣೆಯ ದೊಡ್ಡ ಗೋಡೆಯ ಮೇಲೆ ರಥದ ನಿರ್ದಿಷ್ಟ ಅಳತೆಗಳಿಗನುಸಾರ ಚಿತ್ರವನ್ನು ಬಿಡಿಸಿರಿ, ಆಗ ನಿಮಗೆ ಅದು ಹೆಚ್ಚು ಸ್ಪಷ್ಟವಾಗುವುದು’’, ಎಂದು ಹೇಳಿದರು. ‘ಮುಂದೆ ಭಗವಂತನು ಸಾಧಕರಿಗೆ ಒಂದೊಂದು ಕಲೆಯನ್ನು ಹೇಗೆ ಕಲಿಸುವನು !’, ಎಂಬುದು ಈ ಉದಾಹರಣೆಯಿಂದ ನನ್ನ ಗಮನಕ್ಕೆ ಬಂದಿತು.’ – ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೨೪.೫.೨೦೨೩) |
ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಪೂ. ಗುರುಜಿಯವರ ಭಾವ !ಪೂ. ಕವಟೆಕರಗುರುಜಿಯವರು ಸಂತರಾಗಿರುವುದರಿಂದ ಅವರು ಹೇಳಿದ ಆಕಾರದಲ್ಲಿ ಸಾತ್ತ್ವಿಕತೆ ಇತ್ತೇ ಇತ್ತು; ಆದರೆ ‘ಅದರಲ್ಲಿ ಶ್ರೀವಿಷ್ಣುತತ್ತ್ವವನ್ನು ಹೇಗೆ ತರಬೇಕು ?’, ಎಂಬುದರ ಪ್ರಯೋಗ ಮಾಡಿ ಚಿತ್ರವನ್ನು ಪೂರ್ಣಗೊಳಿಸಿದೆವು. ಗುರುಜಿಯವರಿಂದ ಪ್ರಾಯೋಗಿಕ ಭಾಗವನ್ನು ಕಲಿಯುವಾಗ ನನಗೆ ಅವರ ಪರಾತ್ಪರ ಗುರು ಡಾ. ಆಠವಲೆಯವರ ಬಗೆಗಿನ ಭಾವವೂ ಕಲಿಯಲು ಸಿಕ್ಕಿತು. ಪೂ. ಗುರುಜಿಯವರು, ”ಗುರುಗಳು (ಪರಾತ್ಪರ ಗುರು ಡಾ. ಆಠವಲೆ) ರಥದಲ್ಲಿ ಕುಳಿತಾಗ ಅವರ ಚರಣಗಳು ನಮ್ಮ ಕಣ್ಣುಗಳ ಎದುರೇ ಬರಬೇಕು. ಪ್ರತಿಯೊಬ್ಬ ಭಕ್ತನಿಗೆ ಗುರುಗಳ ಚರಣಗಳು ಕಾಣಿಸಬೇಕು’’, ಎಂದು ಹೇಳಿದರು. ‘ಪರಾತ್ಪರ ಗುರು ಡಾ. ಆಠವಲೆಯವರು ರಥದಲ್ಲಿ ಹತ್ತುವುದು ಮತ್ತು ಕುಳಿತುಕೊಳ್ಳುವುದು’, ಈ ಬಗ್ಗೆ ಪೂ. ಕವಟೆಕರ ಗುರುಜಿಯವರು ಹೇಳಿದ ಅಂಶಗಳನ್ನು ಕೇಳಿ ಅವರ ಗುರುದೇವರ ಬಗೆಗಿನ ಭಾವವು ಸ್ಪಷ್ಟವಾಗುತ್ತಿತ್ತು. ರಥದ ಶಾಸ್ತ್ರವನ್ನು ಕಲಿಸುವಾಗ ಅವರು ಅನೇಕ ಬಾರಿ ನಮಗೆ, ”ನೀವು ಇದನ್ನು ಪ.ಪೂ. ಗುರುದೇವರನ್ನು ಕೇಳಿರಿ. ಅವರು ಹೇಗೆ ಹೇಳುತ್ತಾರೆಯೋ ನಾವು ಹಾಗೆಯೇ ಮಾಡೋಣ’’, ಎಂದು ಹೇಳುತ್ತಿದ್ದರು. ಅವರಿಗೆ ಇಷ್ಟು ಜ್ಞಾನವಿದ್ದರೂ ಪರಾತ್ಪರ ಗುರು ಡಾ. ಆಠವಲೆಯವರಿಗೆ ಅಪೇಕ್ಷಿತ ತತ್ತ್ವವು ರಥದಲ್ಲಿ ಬರಲು ರಥದ ಚಿತ್ರದಲ್ಲಿ ಬದಲಾವಣೆ ಮಾಡಿದರೆ ಅವರು ಸ್ವೀಕರಿಸುತ್ತಿದ್ದರು.’ – ಸೌ. ಜಾಹ್ನವಿ ರಮೇಶ ಶಿಂದೆ, ಫೋಂಡಾ, ಗೋವಾ. |