ICJ Orders Israel to Stop Attacks: ಅಂತರಾಷ್ಟ್ರೀಯ ನ್ಯಾಯಾಲಯದಿಂದ ಇಸ್ರೇಲ್‌ಗೆ ರಾಫಾ ಪ್ರದೇಶದಲ್ಲಿನ ದಾಳಿಯನ್ನು ನಿಲ್ಲಿಸುವಂತೆ ಆದೇಶ !

ಆದೇಶ ಪಾಲಿಸಲು ನಿರಾಕರಿಸಿದ ಇಸ್ರೇಲ್ !

ಹೇಗ್ (ನೆದರ್ಲ್ಯಾಂಡ್ಸ್) – ಅಂತರಾಷ್ಟ್ರೀಯ ನ್ಯಾಯಾಲಯವು ಗಾಜಾ ಪಟ್ಟಿಯ ರಾಫಾ ಪ್ರದೇಶದಲ್ಲಿ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸುವಂತೆ ಇಸ್ರೇಲ್‌ಗೆ ಆದೇಶಿಸಿದೆ. ದಕ್ಷಿಣ ಆಫ್ರಿಕಾವು ಇಸ್ರೇಲ್ ಮೇಲೆ ನರಸಂಹಾರದ ಆರೋಪ ಮಾಡಿತ್ತು ಮತ್ತು ಯುದ್ಧವನ್ನು ನಿಲ್ಲಿಸಲು ಆದೇಶಿಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ವಿನಂತಿಸಿತ್ತು.

ಅರ್ಜಿಯನ್ನು 15 ನ್ಯಾಯಾಧೀಶರ ಸಮಿತಿಯು ವಿಚಾರಣೆ ನಡೆಸಿತು ಮತ್ತು ಅವರಲ್ಲಿ 13 ನ್ಯಾಯಾಧೀಶರು ಯುದ್ಧವನ್ನು ನಿಲ್ಲಿಸುವ ಪರವಾಗಿ ತೀರ್ಪು ನೀಡಿದರು; ಆದರೆ ಈ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ವ್ಯಕ್ತಮಾಡುವಾಗ ಇಸ್ರೇಲ್, ನ್ಯಾಯಾಲಯದ ಆದೇಶವನ್ನು ಪಾಲಿಸುವುದಿಲ್ಲ ಎಂದು ಹೇಳಿದೆ. ಇಸ್ರೇಲಿನ ಸಚಿವ ಬೆನ್ನಿ ಗ್ಯಾಂಟ್ ಝಾ ಅವರು ‘ರಾಫಾ ಮೇಲಿನ ದಾಳಿಗಳು ಮುಂದುವರಿಯಲಿವೆ’, ಎಂದು ಹೇಳಿದ್ದಾರೆ.