ಶ್ರೀರಾಮ ಮಂದಿರಕ್ಕೆ ದರ್ಶನಕ್ಕೆ ಬಂದಿದ್ದ 22 ಕೊಲೆ ಮಾಡಿದ ಆರೋಪಿಯ ಬಂಧನ

22 ಕೊಲೆಯಾಗುವವರೆಗೂ ಆರೋಪಿಯನ್ನು ಬಂಧಿಸಿ ಶಿಕ್ಷಿಸಲಾಗದ ನಿಷ್ಕ್ರೀಯ ಪೊಲೀಸರು

ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಶ್ರೀರಾಮ ಮಂದಿರಕ್ಕೆ ದರ್ಶನಕ್ಕಾಗಿ ಬಂದಿದ್ದ ಕಿಶೋರ್ ತಿವಾರಿ ಅಲಿಯಾಸ್ ಕಿಸ್ಸು ತಿವಾರಿಯನ್ನು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆತನ ಮೇಲೆ 22 ಕೊಲೆ ಮಾಡಿದ ಆರೋಪ ಇದೆ. ಆತ ಮಧ್ಯಪ್ರದೇಶದ ಕಟನಿಯಿಂದ ಪರಾರಿಯಾಗಿದ್ದನು. ಆತನ ಬಗ್ಗೆ ಮಾಹಿತಿ ನೀಡಿದವರಿಗೆ 55 ಸಾವಿರ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು. ಅವನು ಸಾಧುವಿನ ವೇಷ ಧರಿಸಿ ಶ್ರೀರಾಮ ಮಂದಿರಕ್ಕೆ ದರ್ಶನಕ್ಕಾಗಿ ಬಂದಿದ್ದನು. ತಿವಾರಿ ಶ್ರೀರಾಮ ಮಂದಿರಕ್ಕೆ ದರ್ಶನಕ್ಕಾಗಿ ಬರಲಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಮೂಲಗಳಿಂದ ಸಿಕ್ಕಿತ್ತು.