ತನ್ನದೇ ಸರಕಾರದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ ತಿರಸ್ಕರಿಸಿದ ಅಮೇರಿಕಾ

ಭಾರತದಲ್ಲಿ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಯುತ್ತಿರುವುದ ಕುರಿತು ದಾವೆ !

ನ್ಯೂಯಾರ್ಕ್ (ಅಮೇರಿಕಾ) – ಅಮೇರಿಕಾದ ವಿದೇಶಾಂಗ ಸಚಿವಾಲಯವು ತಮ್ಮ ಸರ್ಕಾರದ ‘ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ’ಯನ್ನು ತಿರಸ್ಕರಿಸಿದೆ. ಈ ವರದಿಯಲ್ಲಿ ಭಾರತದ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಭಾರತವು ಈ ವರದಿಯನ್ನು ಕಟುವಾಗಿ ಟೀಕಿಸಿತ್ತು.

ನ್ಯೂಯಾರ್ಕ್ ಟೈಮ್ಸ್ ನ ಭಾರತ ವಿರೋಧಿ ವಾರ್ತೆ ಕೂಡ ಅಮೇರಿಕದಿಂದ ತಿರಸ್ಕೃತ !

ಅಮೇರಿಕಾದಲ್ಲಿನ ನ್ಯೂಯಾರ್ಕ್ ಟೈಮ್ಸ್ ವಾರ್ತಾಪತ್ರಿಕೆಯಲ್ಲಿ ಮೇ ೧೮ ರಂದು ಒಂದು ವರದಿ ಪ್ರಸಿದ್ಧಗೊಳಿಸಲಾಗಿತ್ತು. ಅದರಲ್ಲಿ, ಭಾರತದಲ್ಲಿ ವಾಸಿಸುವ ಮುಸ್ಲಿಂ ಕುಟುಂಬಗಳನ್ನು ಹೊರಗಿಡಲಾಗಿದೆ, ಅವರ ಪರಿಚಯ ಪರಿಶೀಲಿಸಲಾಗುತ್ತಿದೆ, ಎಂದು ಹೇಳಲಾಗಿತ್ತು. ಈ ವರದಿ ಬಗ್ಗೆ ಅಮೇರಿಕಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮ್ಯಾಥೂ ಮಿಲರ್ ಅವರು ಮಾತನಾಡಿ, ನಾವು ಈ ವಾರ್ತೆಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ ಎಂದು ಹೇಳಿದರು. ಜಗತ್ತಿನಾದ್ಯಂತ ಧಾರ್ಮಿಕ ಸ್ವಾತಂತ್ರ್ಯದ ಅಧಿಕಾರ ರಕ್ಷಣೆ ಮಾಡುವುದಕ್ಕಾಗಿ ಅಮೇರಿಕಾ ಯಾವಾಗಲೂ ತತ್ಪರವಾಗಿದೆ. ಅದಕ್ಕಾಗಿ ನಮಗೆ ಭಾರತ ಸಹಿತ ಇತರ ಅನೇಕ ದೇಶಗಳ ಬೆಂಬಲ ಸಿಕ್ಕಿದೆ ಎಂದರು.

ಅಮೇರಿಕಾದ ಭಾರತದ್ವೇಷಿ ಪ್ರಸಾರ ಮಾಧ್ಯಮಗಳು !

ಭಾರತದಲ್ಲಿ ಲೋಕಸಭೆಯ ಚುನಾವಣೆಯ ಪ್ರಕ್ರಿಯೆ ಆರಂಭವಾದ ನಂತರದಿಂದ ಅಮೇರಿಕಾದಲ್ಲಿನ ಪ್ರಸಾರ ಮಾಧ್ಯಮಗಳಿಂದ ಭಾರತ ವಿರೋಧಿ ವಾರ್ತೆಗಳು ಪ್ರಸಾರ ಮಾಡಲಾಗುತ್ತಿದೆ. ಇದೇ ಸಮಯದಲ್ಲಿ ಅಮೇರಿಕ ಸರಕಾರದಿಂದ ಕೂಡ ಭಾರತದ ವಿರುದ್ಧ ಹೇಳಿಕೆ ನೀಡಲಾಗಿತ್ತು. ಭಾರತದಲ್ಲಿನ ಜಾತ್ಯತೀತ ವ್ಯವಸ್ಥೆಗೆ ಅಪಾಯವಿದೆ. ಪ್ರಧಾನಮಂತ್ರಿ ಮೋದಿ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಮುಸಲ್ಮಾನರ ವಿರುದ್ಧ ಹಿಂಸಾಚಾರ ಹೆಚ್ಚುವುದು, ಹಾಗೂ ಭಾರತ ಸರಕಾರ ಮುಸಲ್ಮಾನರನ್ನು ದೂರ ಮಾಡುವುದು , ಈ ರೀತಿಯ ವಾರ್ತೆಗಳು ಪ್ರಸಾರ ಮಾಡಲಾಗುತ್ತಿದೆ.

ಇನ್ನೊಂದೆಡೆ ಮೇ ೧೭ ರಂದು ಅಮೇರಿಕ ಸರಕಾರ, ಭಾರತದಲ್ಲಿನ ಚುನಾವಣೆಗಳ ಮೇಲೆ ಅಮೇರಿಕ ಸೂಕ್ಷ್ಮವಾಗಿ ಗಮನವಿರಿಸಿದೆ. ಭಾರತಕ್ಕಿಂತ ಜ್ವಲಂತ ಪ್ರಜಾಪ್ರಭುತ್ವ ಜಗತ್ತಿನಲ್ಲಿ ಬೇರೆ ರಾಷ್ಟ್ರವಿಲ್ಲ. ಮತ ನೀಡುವುದು ಮತ್ತು ಸರಕಾರದ ವಿರುದ್ಧ ಧ್ವನಿ ಎತ್ತುವುದಕ್ಕೆ ಭಾರತೀಯರ ಕ್ಷಮತೆ ಪ್ರಶಂಸನೀಯವಾಗಿದೆ ಎಂದು ಹೇಳಿತ್ತು.