ಅಂತರಿಕ್ಷಕ್ಕೆ ಹೋಗುವ ಮೊದಲ ಭಾರತೀಯ ಯಾತ್ರಿಕರಾದ ಗೋಪಿ ಥೋಟಾಕುರ !

ಬ್ಲೂ ಒರಿಜಿನ್ ಕಂಪನಿಯ ರಾಕೆಟ್ ನಿಂದ ಅಂತರಿಕ್ಷ ಪ್ರಯಾಣ !

ಹ್ಯೂಸ್ಟನ್ (ಅಮೇರಿಕಾ) – ಕಳೆದ ಎರಡು ಮೂರು ವರ್ಷದಿಂದ ಅಮೇರಿಕಾದಲ್ಲಿ ಅಂತರಿಕ್ಷ ಪರ್ಯಟನೆಗೆ ಒತ್ತು ನೀಡಲಾಗುತ್ತಿದೆ. ವಿಶೇಷವಾಗಿ ಖಾಸಗಿ ಕಂಪನಿಗಳಲ್ಲಿ ಈ ಬಗ್ಗೆ ಭಾರೀ ಸ್ಪರ್ಧೆ ನಡೆಯುತ್ತಿದೆ. ಜನ ಸಾಮಾನ್ಯರನ್ನು ಅಂತರಿಕ್ಷ ಸ್ಥಾನಕಗಳಿಗೆ ಕರೆದುಕೊಂಡು ಹೋಗುವುದು ಈ ಕಂಪನಿಗಳ ಉದ್ದೇಶವಾಗಿದೆ. ಅಮೆಜಾನ್ ಸಂಸ್ಥಾಪಕ ಜೇಫ್ ಬೆಜೋಸ್ ಅವರ ಕಂಪನಿ ಬ್ಲೂ ಒರಿಜಿನ್ ಮೇ ೧೯ ರಂದು ನ್ಯೂಸ್ ಶೆಪರ್ಡ್ ರಾಕೆಟ್ ನ ಸಹಾಯದಿಂದ ೬ ಜನರಿಗೆ ಅಂತರೀಕ್ಷಕ್ಕೆ ಕಳುಹಿಸಿತು. ಅದರಲ್ಲಿ ಆಂಧ್ರಪ್ರದೇಶದಲ್ಲಿನ ಗೋಪಿ ಥೋಟಾಕುರ ಅವರು ಕೂಡ ಒಬ್ಬರಾಗಿದ್ದರು. ಗಗನ ಯಾತ್ರಿಕನೆಂದು ಅಂತರಿಕ್ಷಕ್ಕೆ ಹೋಗುವವರಲ್ಲಿ ೩೦ ವರ್ಷದ ಗೋಪಿ ಅವರು ಭಾರತದ ಮೊದಲಿಗರಾಗಿದ್ದಾರೆ. ೧೯೮೪ ರಲ್ಲಿ ಭಾರತೀಯ ಸೈನ್ಯದ ವಿಂಗ್ ಕಮಾಂಡರ್ ರಾಕೇಶ ಶರ್ಮ ಅವರ ನಂತರ ಅಂತರಿಕ್ಷಕ್ಕೆ ಹೋದ ಎರಡನೆಯ ಭಾರತೀಯರಾಗಿದ್ದಾರೆ.

೧. ಗೋಪಿ ಥೋಟಾಕುರ ಅವರ ಜೊತೆ ಮೇಸನ್ ಏಂಜಲ್, ಸಿಲ್ವಿನ್ ಚಿರಾನ್, ಕೆನೆಥ್ ಎಲ್ ಹೆಸ್, ಕ್ಯಾರೋಲ್ ಸ್ಕಾಲರ್ ಮತ್ತು ಅಮೇರಿಕಾ ಸೈನ್ಯದ ಮಾಜಿ ಕ್ಯಾಪ್ಟನ್ ಎಡ್ ಡ್ವಾಯಿಟ್ ಅವರು ಕೂಡ ಈ ಪ್ರವಾಸ ಕೈಗೊಂಡರು.

೨. ಇಲಾನ್ ಮಸ್ಕ್ ಅವರ ಕಂಪನಿ ‘ಸ್ಪೇಸ್ ಎಕ್ಸ್’ ಕಂಪನಿ ಜೊತೆ ಸ್ಪರ್ಧಿಸುವ ಬ್ಲೂ ಒರಿಜಿನ್ ಈ ಹಿಂದೆ ಕೂಡ ನ್ಯೂ ಶೆಪರ್ಡ್ ರಾಕೆಟ್ ನಿಂದ ೩೧ ಜನರನ್ನು ಅಂತರೀಕ್ಷಕ್ಕೆ ಕರೆದುಕೊಂಡು ಹೋಗಿತ್ತು. ಅಂತರೀಕ್ಷಕ್ಕೆ ಹೋದ ಮೊದಲ ಅಮೇರಿಕಾ ನಾಗರಿಕರಾದ ಲನ್ ಶೆಪರ್ಡ್ ಅವರ ಹೆಸರನ್ನು ಈ ನ್ಯೂ ಶೇಫರ್ಡ್ ರಾಕೆಟ್ ಗೆ ಇಡಲಾಗಿದೆ.

೩. ೧೨ ಸಪ್ಟೆಂಬರ್ ೨೦೨೨ ರಂದು ಅಂತರಿಕ್ಷ ಪರ್ಯಟನೆಯ ಮೊದಲ ಅಭಿಯಾನ ಕೈಗೆತ್ತಿಕೊಳ್ಳಲಾಗಿತ್ತು. ಆಗ ಕೆಲವು ಸೆಕೆಂಡ್ ನಂತರ ರಾಕೇಟಿಗೆ ಬೆಂಕಿ ಹತ್ತಿತು. ಅದರ ನಂತರ ಡಿಸೆಂಬರ್ ೨೦೨೩ ರಲ್ಲಿ ಅದರ ಮತ್ತೆ ಪರೀಕ್ಷೆ ನಡೆಸಲಾಯಿತು. ಆ ಬಳಿಕ ಮೇ ೧೯ ರ ಸಂಜೆ ಅಮೇರಿಕಾದಲ್ಲಿನ ಟೆಕ್ಸಸ್ ನಗರದಿಂದ ಈ ರಾಕೆಟ್ ಅಂತರಿಕ್ಷಕ್ಕೆ ಹಾರಿತು.

ಗೋಪಿ ಥೋಟಾಕುರ ಯಾರು ?

ಗೋಪಿ ಓರ್ವ ಪೈಲೆಟ್ ಮತ್ತು ಉದ್ಯೋಗಪತಿಯಾಗಿದ್ದಾರೆ. ಅವರು ಫ್ಲೋರಿಡಾದಲ್ಲಿ ಎಂಬ್ರಿ ರೀಡಲ್ ಏರೋ ನೋಟಿಕಲ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ ಮತ್ತು ದುಬೈಯಲ್ಲಿನ ಎಮಿರೇಟ್ಸ್ ಎವಿಯೇಷನ್ ವಿದ್ಯಾಪೀಠದಲ್ಲಿ ಎವಿಯೇಷನ್ ಮ್ಯಾನೇಜ್ಮೆಂಟ್ ನ ಅಧ್ಯಯನ ನಡೆಸಿದ್ದಾರೆ. ವಿಶೇಷವೆಂದರೆ ಗೋಪಿ ಅವರು ಕಾರು ಚಾಲನೆಯ ಮೊದಲೇ ವಿಮಾನ ಚಾಲನೆ ಮಾಡುವುದನ್ನು ಕಲಿತಿದ್ದಾರೆ !

ಹೀಗೆ ಇರುತ್ತದೆ ಅಂತರಿಕ್ಷ ಪ್ರಯಾಣ !

ಪೃಥ್ವಿಯಿಂದ ೧೦೦ ಕಿಲೋಮೀಟರ್ ಎತ್ತರ ರಾಕೆಟ್ ಕೊಂಡೊಯುತ್ತದೆ. ಆ ಅಂತರದಿಂದ ಯಾತ್ರಿಕರು ತಮ್ಮ ಸೀಟ್ ಬೆಲ್ಟ್ ತೆಗೆದು ಭೂಮಿಯ ಕಡೆಗೆ ನೋಡಬಹುದು. ಅಷ್ಟು ಅಂತರದ ಮೇಲೆ ಪೃಥ್ವಿಯ ಗುರುತ್ವಾಕರ್ಷಣೆ ಅತ್ಯಂತ ಕಡಿಮೆ ಇರುವುದರಿಂದ ಯಾತ್ರಿಕರು ತೂಕ ಶೂನ್ಯವಾಗಿರುವ (ವೇಟ್ ಲೇಸ್) ಅನುಭವ ಪಡೆಯಬಹುದು. ಈ ಪ್ರವಾಸದ ಕಾಲಾವಧಿಯು ಸುಮಾರು ೧೧ ನಿಮಿಷದ್ದಾಗಿರುತ್ತದೆ. ಇದು ಒಂದು ಅವಿಸ್ಮರಣೀಯ ಅನುಭವವಾಗಿರುತ್ತದೆ ಬ್ಲೂ ಒರಿಜಿನ್ ಹೇಳಿದೆ.