|
ಕಾನ್ಪುರ (ಉತ್ತರ ಪ್ರದೇಶ) – ಕಾನ್ಪುರ ನಗರವು ಹಿಂದೂಗಳ ಮತಾಂತರದ ಕೇಂದ್ರವಾಗಿದೆ. ಇಲ್ಲಿ ಕೆಲವು ಜಿಹಾದಿ ಗುಂಪುಗಳು ಅಮಾಯಕ ಮತ್ತು ಬಡ ಹಿಂದೂ ಮಹಿಳೆಯರನ್ನು ಲೈಂಗಿಕ ಕಿರುಕುಳ ನೀಡಿ ಅವರನ್ನು ಮತಾಂತರಗೊಳಿಸುತ್ತಿರುವುದು ಬೆಳಕಿಗೆ ಬಂದಿದೆ. ಇಲ್ಲಿನ ಕಾಕಡೆದೇವ ಪೊಲೀಸ ಠಾಣೆಯಲ್ಲಿ ಅಪರಾಧ ದಾಖಲಿಸಿ ಫೈಜನನ್ನು ಬಂಧಿಸಲಾಗಿದೆ. ನಗರದ 6ಕ್ಕಿಂತ ಅಧಿಕ ಜಿಹಾದಿ ಮುಸಲ್ಮಾನರು ಈ ಸಂಚಿನಲ್ಲಿ ತೊಡಗಿದ್ದು, ಇದರಲ್ಲಿ 2-3 ಮಹಿಳೆಯರೂ ಸೇರಿದ್ದಾರೆ. ಶಾನೂ, ಲಫ್ಫಾಜ ಮತ್ತು ಶಾನೂ ಪಿಸ್ಟಲ ಸೇರಿದಂತೆ ಅನೇಕರು ಇದರಲ್ಲಿ ತೊಡಗಿದ್ದು, ಫೈಜನ ಬಂಧನದ ಮೊದಲು ಪೊಲೀಸರು ಶಾನೂ ಪಿಸ್ಟಲನನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡುವಾಗ ಉಪ ಪೊಲೀಸ್ ಆಯುಕ್ತ ರಾಮ ಸೇವಕ ಗೌತಮ ಇವರು,
1. ಪೊಲೀಸರ ಕೆಲವು ದಳ ಕಾನ್ಪುರದ ಪೂರ್ವ ವಿಭಾಗದ ಕೆಲವು ಹೋಟೆಲಗಳ ಮೇಲೆ ದಾಳಿ ನಡೆಸಿತು; ಆದರೆ ಅವರಿಗೆ ಜಯ ಸಿಗಲಿಲ್ಲ. ಮತಾಂತರದ ಸಂದರ್ಭದಲ್ಲಿ ಓರ್ವ ಸಂತ್ರಸ್ಥೆಯ ವೈದ್ಯಕೀಯ ಪರೀಕ್ಷಣೆಯನ್ನು ನಡೆಸಲಾಗಿದೆ.
2. ಸದ್ಯ ಫೈಜನೊಂದಿಗೆ ‘ಲಿವ್ ಇನ್ ರಿಲೇಶನ್ ಶಿಪ್’ (ಮದುವೆಯಾಗದೆ ಒಟ್ಟಿಗೆ ಇರುವುದು) ಇರುವ ಮತ್ತೊಬ್ಬ ಯುವತಿ ತಲೆಮರೆಸಿಕೊಂಡಿದ್ದಾಳೆ. ಈ ಪ್ರಕರಣದಲ್ಲಿ ಮಾನವ ಕಳ್ಳಸಾಗಣೆ ನಡೆದಿರುವ ಸಾಧ್ಯತೆಯೂ ಇರಬಹುದೆಂದು ಹೇಳಲಾಗುತ್ತಿದೆ. ಆ ಪ್ರದೇಶದಲ್ಲಿ ಸಕ್ರಿಯವಾಗಿರುವ ಒಂದು ಗುಂಪು ಆರ್ಥಿಕವಾಗಿ ದುರ್ಬಲರಾಗಿರುವ ಹುಡುಗಿಯರನ್ನು ಬಲವಂತವಾಗಿ ವಿದೇಶಕ್ಕೆ ಕಳುಹಿಸಿತ್ತಿತ್ತು.
ತಾನು ‘ಸನಾತನಿ’ ಎಂದು ತೋರಿಸಿಕೊಳ್ಳುವ ಬೆಲೆಬಾಳುವ ವಾಹನಗಳೊಂದಿ ಛಾಯಾಚಿತ್ರಗಳನ್ನು ಪ್ರಸಾರ ಮಾಡಿ ಹಿಂದೂ ಯುವತಿಯರನ್ನು ಬಲೆಯಲ್ಲಿ ಸೆಳೆಯುವ ಪ್ರಯತ್ನ !
ಪೊಲೀಸ್ ಉಪ ಆಯುಕ್ತ ರಾಮ ಸೇವಕ ಗೌತಮ ಮಾತನಾಡಿ, ಈ ಗುಂಪು ಎಲ್ಲ ಸಾಮಾಜಿಕ ಮಾಧ್ಯಮಗಳನ್ನು ತನ್ನ ಶಸ್ತ್ರವನ್ನಾಗಿ ಮಾಡಿಕೊಂಡಿದೆ. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ, ಈ ಜನರು ದುಬಾರಿ ವಾಹನಗಳು ಮತ್ತು ಬಂಗಾರದ ಆಭರಣಗಳನ್ನು ಹಾಕಿಕೊಂಡಿರುವ ಛಾಯಾಚಿತ್ರಗಳನ್ನು ಪ್ರಸಾರ ಮಾಡಿ, ತಮ್ಮನ್ನು ‘ಸನಾತನಿ’ ಎಂದು ಕರೆದುಕೊಳ್ಳುತ್ತಾರೆ. ಇದಾದ ನಂತರ, ಕೆಲಸ ಮತ್ತು ಸಹಾಯ ಮಾಡುವ ನೆಪದಲ್ಲಿ ಅವರು ಯುವತಿಯರಿಗೆ ಆಮಿಷ ತೋರಿಸಿ ಅವರನ್ನು ದೈಹಿಕವಾಗಿ ಶೋಷಣೆ ಮಾಡಿ ವೀಡಿಯೊ ಮಾಡುತ್ತಿದ್ದರು. ಅವರು ಕೆಲವು ದಿನ ಒಟ್ಟಿಗೆ ಕಳೆಯುತ್ತಾರೆ ಮತ್ತು ಮದುವೆಯಾದವರಂತೆ ನಟಿಸುತ್ತಾರೆ. ಇದಾದ ನಂತರ ಅವರನ್ನು ಬಲವಂತವಾಗಿ ಮತಾಂತರಗೊಳ್ಳಲು ಅನಿವಾರ್ಯಗೊಳಿಸಲಾಗುತ್ತದೆ. ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಪೊಲೀಸ ಉಪ ಆಯುಕ್ತ ರಾಮ ಸೇವಕ ಗೌತಮ ಇವರನ್ನು `ಸನಾತನ ಪ್ರಭಾತ’ದ ಪ್ರತಿನಿಧಿಯು ಸಂಪರ್ಕಿಸಿದಾಗ, ಅವರು ಸಮಸ್ಯೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದನ್ನು ತಪ್ಪಿಸಿಕೊಂಡರು.
ಸಂಪಾದಕೀಯ ನಿಲುವುಕಾನ್ಪುರ ನಗರವು ಧಾರ್ಮಿಕ ಮತಾಂತರದ ಕೇಂದ್ರವಾಗಿದೆ ! ಅಲ್ಪಸಂಖ್ಯಾತರೆಂದು ಹೇಳುವ ಕ್ರೈಸ್ತರು ಮತ್ತು ಮುಸ್ಲಿಮರು ಅಸಹಾಯಕ ಹಿಂದೂಗಳನ್ನು ವಿವಿಧ ಆಮಿಷಗಳನ್ನು ತೋರಿಸಿ ಅವರನ್ನು ಮತಾಂತರಗೊಳಿಸುತ್ತಿದ್ದಾರೆ. ಇದಕ್ಕಾಗಿ ಉತ್ತರ ಪ್ರದೇಶ ಪೊಲೀಸರು ಮತಾಂತರ ತಡೆ ಕಾನೂನು ಬಳಸಿ ಕಠಿಣ ಕ್ರಮ ಕೈಗೊಳ್ಳಬೇಕು ! |