US Students And Hindu Curriculum : ಅಮೇರಿಕಾದಲ್ಲಿ ಹಿಂದೂ ಪಠ್ಯಕ್ರಮ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ೪ ಪಟ್ಟು ಹೆಚ್ಚಳ !

೮೦ ನಗರಗಳಲ್ಲಿ ೨ ವಿದ್ಯಾಪೀಠಗಳ ಕೇಂದ್ರಗಳು

ನ್ಯೂಯಾರ್ಕ್ (ಅಮೇರಿಕಾ) – ಅಮೇರಿಕಾದಲ್ಲಿ ಭಾರತೀಯ ಸಂಸ್ಕೃತಿಯ ವಿಶ್ವಾಸಾರ್ಹತೆ ಮತ್ತು ಲೋಕಪ್ರಿಯತೆ ದಿನೇ-ದಿನೇ ಹೆಚ್ಚುತ್ತಿದೆ. ಅಮೇರಿಕಾದ ಹಿಂದೂ ವಿದ್ಯಾಪೀಠಗಳಲ್ಲಿ ಮತ್ತು ಅಂತರಾಷ್ಟ್ರೀಯ ಹಿಂದೂ ವಿದ್ಯಾಪೀಠಗಳಲ್ಲಿ ಕಳೆದ ೧೦ ವರ್ಷದಿಂದ ಹಿಂದೂ ಪಠ್ಯಕ್ರಮದಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ೪ ಪಟ್ಟು ಹೆಚ್ಚಾಗಿದೆ. ೨೦೧೪ ರಲ್ಲಿ ಈ ಎರಡು ವಿದ್ಯಾಪೀಠಗಳಲ್ಲಿ ೩ ಸಾವಿರದ ೬೯೯ ವಿದ್ಯಾರ್ಥಿಗಳು ದಾಖಲಾಗಿದ್ದರು. ೨೦೨೪ ರಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗಿ ೧೪ ಸಾವಿರದ ೨೯೬ ಆಗಿದೆ. ಇದರಲ್ಲಿ ಈ ವರ್ಷ ಶೇಕಡ ೪೦, ಅಂದರೆ ೫ ಸಾವಿರದ ೯೭೦ ವಿದ್ಯಾರ್ಥಿಗಳು ಶ್ವೇತ ವರ್ಣಿಯರಾಗಿದ್ದಾರೆ. ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯರ ಎರಡನೆಯ ಮತ್ತು ಮೂರನೆಯ ಪೀಳಿಗೆಯಲ್ಲಿನ ಮಕ್ಕಳು ಹಿಂದೂ ಪಠ್ಯಕ್ರಮದ ಪ್ರಕಾರ ಶಿಕ್ಷಣ ಪಡೆಯುತ್ತಿದ್ದಾರೆ.

೧. ಹಾರ್ವರ್ಡ್, ಯಾಲ್, ಎಂ.ಐ.ಟಿ., ಬ್ರೌನ್ ಮತ್ತು ಕೊಲಂಬಿಯಾ ಈ ವಿದ್ಯಾಪೀಠಗಳಲ್ಲಿ ಕೂಡ ೨ ವರ್ಷದ ಹಿಂದೆ ಹಿಂದೂ ಪಠ್ಯಕ್ರಮ ಕಲಿಸಲು ಆರಂಭವಾಗಿದೆ. ಇದರಲ್ಲಿ ಸಂಸ್ಕೃತ, ಶ್ರೀಮದ್ ಭಗವದ್ಗೀತೆ , ಹಿಂದೂ ಸಂಸ್ಕೃತಿಯ ಇತಿಹಾಸ ಮತ್ತು ಹಿಂದೂ ಗ್ರಂಥ ಸೇರಿದಂತೆ ೪ ವರ್ಷದ ಪಠ್ಯಕ್ರಮವನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಎರಡು ವಿದ್ಯಾಪೀಠಗಳ ಕೇಂದ್ರಗಳು ಅಮೇರಿಕದ ೫೦ ರಾಜ್ಯದ ೮೦ ನಗರಗಳಲ್ಲಿವೆ. ಇದರಲ್ಲಿ ಸುಮಾರು ೧೫ ಸಾವಿರ ಶಿಕ್ಷಕರು ವರ್ಷವಿಡಿ ಕಾರ್ಯಶಾಲೆಗಳನ್ನು ನಡೆಸುತ್ತಾರೆ. ಧರ್ಮ ನಾಗರೀಕರಣ ಎಂಬ ಫೌಂಡೇಶನ್ ಈ ಕಾರ್ಯಶಾಲೆಗಳಿಗಾಗಿ ದಕ್ಷಿಣ ಕ್ಯಾಲಿಫೋರ್ನಿಯ ಕಾಲೇಜ್ ಮತ್ತು ಕ್ಲಿಯರಿ ಮಾರ್ಟ್ ಲಿಂಕನ್ ಕಾಲೇಜಿನ ಸಹಿತ ೨ ಸಂಶೋಧನಾ ಕೇಂದ್ರಗಳು ಆರಂಭಿಸಿದೆ.

೨. ದಕ್ಷಿಣ ಕೊಲಂಬಿಯಾ ವಿದ್ಯಾಪೀಠದ ಅಧ್ಯಕ್ಷ ಮ್ಯಾಕ್ಸ್ ನಿಕಿಯಾಸ್ ಅವರ ಪ್ರಕಾರ, ಮುಂದಿನ ಶೆಕ್ಷಣಿಕ ವರ್ಷದಲ್ಲಿ ಚೀನಾ ಮತ್ತು ಜಪಾನ್ ದೇಶಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಕೂಡ ಹೆಚ್ಚುವ ಸಾಧ್ಯತೆಯಿದೆ. ಹಿಂದೂ ಪಠ್ಯಕ್ರಮದಲ್ಲಿ ಪದವಿ ಮತ್ತು ಪಿ.ಎಚ್.ಡಿ ಪಡೆದ ಬಳಿಕ ಈ ವಿದ್ಯಾರ್ಥಿಗಳು ಯೂರೋಪ್ ಮತ್ತು ಏಷಿಯಾದಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ನೌಕರಿಗಾಗಿ ಹೋಗುತ್ತಾರೆ.

ಸಂಪಾದಕೀಯ ನಿಲುವು

ಅಮೇರಿಕಾ ಮತ್ತು ಇತರ ವಿದೇಶಿ ವಿದ್ಯಾಪೀಠಗಳಲ್ಲಿ ಹಿಂದೂ ಧರ್ಮದ ಪಠ್ಯಕ್ರಮ ಕಲಿಸಲು ಆರಂಭವಾದ ಬಳಿಕ ಉತ್ತಮ ಸ್ಪಂದನ ದೊರೆತ ಮೇಲಾದರೂ ಭಾರತೀಯ ವಿದ್ಯಾಪೀಠಗಳು ಎಚ್ಚರಗೊಳ್ಳುವವು ಮತ್ತು ಇಂತಹ ಪಠ್ಯಕ್ರಮ ಕಲಿಸಲು ಆರಂಭಿಸುವರು !