ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಂದೆ ಮತ್ತೆ ಕೈಚಾಚಿದ ಪಾಕಿಸ್ತಾನ !

೬ ಅಬ್ಜ ಡಾಲರ್(೫೦ ಸಾವಿರ ಕೋಟಿ ರೂಪಾಯಿ) ಸಹಾಯ ಕೇಳಿದೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಆರ್ಥಿಕ ಸ್ಥಿತಿ ಇನ್ನೂ ಹದಗೆಟ್ಟುತ್ತಿದೆ. ಇಂತಹದುರಲ್ಲೇ ಅದು ಮತ್ತೊಮ್ಮೆ ೬ ಅಬ್ಜ ಡಾಲರ್ (೫೦ ಸಾವಿರ ಕೋಟಿ ರೂಪಾಯಿ) ನೆರವು ನೀಡುವಂತೆ ಅಂತರರಾಷ್ಟ್ರೀಯ ಹಣಕಾಸು ನಿಧಿಗೆ ಮನವಿ ಮಾಡಿದೆ. ಪಾಕಿಸ್ತಾನವು ದೊಡ್ಡ ಪ್ರಮಾಣದಲ್ಲಿ ಆರ್ಥಿಕತೆಯ ಕೊರತೆಯಿಂದ ಬಳಲುತ್ತಿದೆ. ಈ ನಗದು ಬಿಕ್ಕಟ್ಟನ್ನು ಎದುರಿಸಲು ಪಾಕಿಸ್ತಾನವು ಹೊಸ ‘ಬೇಲ್ ಔಟ್ ಪ್ಯಾಕೇಜ್‘ಗಾಗಿ ಹಣಕಾಸು ನಿಧಿಯತ್ತ ಕೈಚಾಚಿದೆ. ಬೇಲ್ ಔಟ್ ಪ್ಯಾಕೇಜ್ ಅಂದರೆ ಆರ್ಥಿಕ ಸಂಕಷ್ಟದಲ್ಲಿರುವ ದೇಶಕ್ಕೆ ಹಣಕಾಸಿನ ನೆರವು ನೀಡುವ ಪ್ರಕ್ರಿಯೆಯಾಗಿದೆ.

ಬೇಲ್‌ಔಟ್ ಪ್ಯಾಕೇಜ್ ಕುರಿತು ಚರ್ಚಿಸಲು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಒಂದು ತಂಡ ಪಾಕಿಸ್ತಾನಕ್ಕೆ ಆಗಮಿಸಿದೆ. ಮಾತುಕತೆ ಯಶಸ್ವಿಯಾದರೆ, ಅಂತರರಾಷ್ಟ್ರೀಯ ಹಣಕಾಸು ನಿಧಿಯು ಪಾಕಿಸ್ತಾನಕ್ಕೆ ನೀಡುವ ೨೪ ನೇ ಬೆಲ್‌ಔಟ್ ಪ್ಯಾಕೆಜ್ ಆಗಲಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ ಸಂಪರ್ಕ ವಿಭಾಗದ ನಿರ್ದೇಶಕಿ ಜೂಲಿ ಕೊಝಾಕ್ ಅವರು, ಪಾಕಿಸ್ತಾನಕ್ಕೆ ತೆರಳಿರುವ ತಂಡವು ಈ ವಾರ ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ಬೇಲ್‌ಔಟ್ ಪ್ಯಾಕೇಜ್ ಕುರಿತು ಚರ್ಚಿಸಲಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ತಂಡವು ಮುಂದಿನ ೧೦ ದಿನಗಳಕಾಲ ಪಾಕಿಸ್ತಾನದಲ್ಲಿ ಉಳಿಯಬಹುದು. ಇದಲ್ಲದೆ ೨೦೨೪-೨೫ ರ ಹಣಕಾಸು ವರ್ಷದ ಮುಂಬರುವ ಬಜೆಟ್ ಬಗ್ಗೆಯೂ ಹಣಕಾಸು ಸಚಿವಾಲಯದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದಿದ್ದಾರೆ.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದನೆಯನ್ನು ಹರಡುವ ಪಾಕಿಸ್ತಾನ ತನ್ನ ದೇಶದಲ್ಲೇ ಭಯೋತ್ಪಾದನೆಯನ್ನು ನಾಶಪಡಿಸಿದರೆ ಮಾತ್ರ ಆರ್ಥಿಕ ಸಹಾಯ ನೀಡಬೇಕು, ಅದಕ್ಕಾಗಿ ಭಾರತವು ವಿಶ್ವ ಮಟ್ಟದಲ್ಲಿ ಇತರ ದೇಶಗಳ ಮೇಲೆ ಒತ್ತಡ ನಿರ್ಮಾಣ ಮಾಡಬೇಕು !