ವ್ಯಾಟಿಕನ್ ಸಿಟಿಯಿಂದ ಕ್ರೈಸ್ತರ ಪವಾಡಗಳ ಕುರಿತು ಹೊಸ ಮಾರ್ಗಸೂಚಿ
ವ್ಯಾಟಿಕನ್ ಸಿಟಿ – ವ್ಯಾಟಿಕನ್ ಸಿಟಿಯಲ್ಲಿ ದೈವೀ ಪವಾಡಗಳ ಸಂದರ್ಭದಲ್ಲಿ ಒಂದು ಮಾರ್ಗಸೂಚಿಯನ್ನು ಪ್ರಸಾರ ಮಾಡಿ ಈ ಮೂಲಕ ವಂಚನೆ ಮತ್ತು ಸುಳ್ಳು ಹೇಳುವುದನ್ನು ಕಡಿವಾಣಾ ಹಾಕಲಾಗುವುದು. ಈಗ ಪೋಪ್ ಅನುಮೋದಿಸಿದ ದೈವೀ ಘಟನೆಯನ್ನು ಪವಾಡವೆಂದು ಸ್ವೀಕರಿಸಲಾಗುವುದು.
1. ಈ ಮಾರ್ಗಸೂಚಿಯ ಪ್ರಕಾರ, ಚರ್ಚ್‌ನ ಪಾದ್ರಿ ಮೊದಲು ಎಲ್ಲಾ ದಾವೆಗಳ ತನಿಖೆ ಮಾಡುವರು. ಈ ಸಮಯದಲ್ಲಿ ಅವರು ದಾವೆಗಳನ್ನು ತಿರಸ್ಕರಿಸಬಹುದು. ಅಥವಾ ಯಾವುದೇ ಪವಾಡದ ವಸ್ತು ಅಥವಾ ಸ್ಥಳದ ಪೂಜೆ ಮಾಡುವುದನ್ನು ಸಹ ನಿಷೇಧಿಸಬಹುದು.
2. ದೈವೀ ಪ್ರಕಟಿಕರಣದ ದಾವೆಗಳನ್ನು ಹಣ ಸಂಪಾದಿಸಲು ಮಾಡಲಾಗುತ್ತಿದೆಯೇ ? ಇದನ್ನೂ ಪಾದ್ರಿ ತನಿಖೆ ನಡೆಸಲಿದ್ದಾರೆ. ಆ ನಂತರ ತನಿಖೆಯ ಸಾಕ್ಷ್ಯ ಮತ್ತು ವಿವರಗಳನ್ನು ಪೋಪ್‌ಗೆ ಕಳುಹಿಸಲಾಗುತ್ತದೆ. ಬಳಿಕ ಇದು ಪವಾಡವೋ ಅಥವಾ ಇಲ್ಲವೊ ? ಇದನ್ನು ಪೋಪ್ ನಿರ್ಧರಿಸುತ್ತಾರೆ.
3. ಕೃತಕ ಬುದ್ಧಿಮತ್ತೆ (ಎ.ಐ.) ಮತ್ತು ಸಾಮಾಜಿಕ ಮಾಧ್ಯಮಗಳನ್ನು ದೈವೀ ಪವಾಡಗಳ ಬಗ್ಗೆ ಸುಳ್ಳು ಮಾಹಿತಿ ಹರಡಲು ಉಪಯೋಗಿಸಬಹುದು, ಈ ರೀತಿ ಭಯ ವ್ಯಾಟಿಕನ್ ಸಿಟಿಗೆ ಅನ್ನಿಸುತ್ತಿದೆ.