Pakistan Students Killed in Kyrgyzstan: ಕಿರ್ಗಿಸ್ತಾನ್‌ದಲ್ಲಿ ಸ್ಥಳೀಯರಿಂದ ಪಾಕಿಸ್ತಾನದ 3 ವಿದ್ಯಾರ್ಥಿಗಳ ಹತ್ಯೆ

ಭಾರತೀಯ ವಿದ್ಯಾರ್ಥಿಗಳನ್ನೂ ಗುರಿ ಮಾಡಲಾಗುತ್ತಿದೆ !

ಬಿಶ್ಕೆಕ (ಕಿರ್ಗಿಸ್ತಾನ್) – ಕಿರ್ಗಿಸ್ತಾನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಭಾರತ ಮತ್ತು ಪಾಕಿಸ್ತಾನಿ ವಿದ್ಯಾರ್ಥಿಗಳ ವಿರೋಧ ಸ್ಥಳೀಯ ಜನರು ಹಲ್ಲೆ ಮಾಡುತ್ತಿದ್ದಾರೆ. ಇಲ್ಲಿ ನಡೆದ ದಾಳಿಯಲ್ಲಿ ಪಾಕಿಸ್ತಾನದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಹೊರಗೆ ಹೋಗದಂತೆ ಭಾರತೀಯ ವಿದೇಶಾಂಗ ಸಚಿವಾಲಯ ಸೂಚಿಸಿದೆ. ಇದುವರೆಗೆ ಯಾವುದೇ ಭಾರತೀಯ ವಿದ್ಯಾರ್ಥಿ ಮೇಲೆ ದಾಳಿ ನಡೆದಿರುವ ಬಗ್ಗೆ ವರದಿಯಾಗಿಲ್ಲ.