ಯಾವಾಗ ಅಮೇರಿಕ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವುದೋ ಆಗಲೇ ಭಾರತ ತನ್ನ ಪ್ರಜಾಪ್ರಭುತ್ವದಲ್ಲಿನ ಕೊರತೆಗಳನ್ನು ಸುಧಾರಿಸುವುದು !

ಅಮೇರಿಕಾಗೆ ಅದರ ಯೋಗ್ಯತೆ ತೋರಿಸಿದ ಭಾರತೀಯ ಮೂಲದ ಅಮೇರಿಕ ಸಂಸದ ರೋ ಖನ್ನಾ !

ಅಮೇರಿಕ ಸಂಸದ ರೋ ಖನ್ನಾ

ವಾಷಿಂಗ್ಟನ್ (ಅಮೇರಿಕಾ) – ವ್ಯಾಖ್ಯಾನಗಳನ್ನು ಕೇಳುವ ಬದಲು ಯಾವಾಗ ಅಮೇರಿಕ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವುದೋ ಆಗಲೇ ಭಾರತ ತನ್ನ ಪ್ರಜಾಪ್ರಭುತ್ವದಲ್ಲಿನ ಕೊರತೆಗಳನ್ನು ಸುಧಾರಿಸುವುದು. ಭಾರತದ ಜೊತೆಗೆ ಚರ್ಚೆ ನಡೆಸಲು ಇದು ಉತ್ತಮ ಮಾರ್ಗವಾಗಿದೆ ಎಂದು ಅಮೇರಿಕಾದ ಭಾರತೀಯ ಮೂಲದ ಸಂಸದ ರೋ ಖನ್ನಾ ಅವರು ಅಲ್ಲಿನ ದೇಸಿ ಡಿಸೈಡಸ್ ಎಂಬ ಸಭೆಯಲ್ಲಿ ಹೇಳಿಕೆ ನೀಡಿದರು.

ಸಂಸದ ರೋ ಖನ್ನಾ ಮಾತು ಮುಂದುವರೆಸಿ , ಅಮೇರಿಕಾ ಮಾನವಾಧಿಕಾರದ ಸೂತ್ರಗಳ ಬಗ್ಗೆ ಭಾರತದ ನೇತೃತ್ವದ ಜೊತೆಗೆ ಚರ್ಚೆ ನಡೆಸಬೇಕು. ಭಾರತದಲ್ಲಿ ೧೫೦ ವರ್ಷಗಳ ಕಾಲ ವಿದೇಶಿಗರ ಆಡಳಿತವಿತ್ತು. ಹಾಗಾಗಿ ನೀವು ಭಾರತಕ್ಕೆ ಮಾನವಾಧಿಕಾರಗಳ ಬಗ್ಗೆ ವ್ಯಾಖ್ಯಾನ ನೀಡಿದರೆ ಅವರು ನಿಮ್ಮ ಮಾತು ಕೇಳುವುದಿಲ್ಲ ಎಂದರು.

ಸಂಸದ ಬೇರಾ

ಭಾರತೀಯ ಮೂಲದ ಇನ್ನೋರ್ವ ಸಂಸದ ಬೇರಾ ಅವರು ಖನ್ನಾ ಅವರ ಅಭಿಪ್ರಾಯಕ್ಕೆ ಸಹಮತಿ ತೋರಿಸಿದರು. ಬೇರಾ ಅವರು, ನಾನು ಭಾರತದ ವಿದೇಶಾಂಗ ಸಚಿವರ ಜೊತೆಗೆ ಕೂಡ ಮಾನವಾಧಿಕಾರ ಸೂತ್ರಗಳ ಬಗ್ಗೆ ಮಾತನಾಡಿದ್ದೆ. ಭಾರತವು ಅದರ ಜಾತ್ಯಾತೀತ ಪ್ರತಿಮೆಯನ್ನು ಕಳೆದುಕೊಂಡರೆ, ಜಗತ್ತಿನೆದುರು ಭಾರತದ ಅಸ್ತಿತ್ವ ನಾಶವಾಗುವುದು, ಎಂದು ಭಾರತದ ವಿದೇಶಾಂಗ ಸಚಿವರು ನನಗೆ ಹೇಳಿದ್ದರು. ಅಮೇರಿಕಾದ ಬಳಿ ಇನ್ನೂ ಚೈತನ್ಯಶೀಲ ಪ್ರಜಾಪ್ರಭುತ್ವವಿದೆ. ನಮಗೆ ವಿರೋಧ ಪಕ್ಷವಿದೆ. ನಮಗೆ ವಾರ್ತಾಪತ್ರಿಕೆಯ ಸ್ವಾತಂತ್ರ್ಯದ ಮೇಲೆ ವಿಶ್ವಾಸವಿದೆ. ಈ ಎಲ್ಲಾ ವಿಷಯಗಳು ನನಗೆ ಭಾರತದ ಬಗ್ಗೆ ನನ್ನ ಚಿಂತೆಯನ್ನು ಹೆಚ್ಚಿಸುತ್ತವೆ. ಭಾರತದ ಪ್ರಜಾಪ್ರಭುತ್ವವು ಬದುಕುಳಿಯುವುದು ಎಂದು ನಾನು ಭಾವಿಸುತ್ತೇನೆ ಎಂದು ಬೇರಾ ಹೇಳಿದರು. (ಭಾರತದಲ್ಲಿಯೂ ಕೂಡ ಸ್ವಾತಂತ್ರ್ಯವಿದೆ ಅದರ ಬಗ್ಗೆ ಅಮೇರಿಕಾದಲ್ಲಿನ ಸಂಸದರು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಅವರು ಅಮೇರಿಕದ ಕಪ್ಪು ಜನರ ಸ್ವಾತಂತ್ರ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಭಾರತ ಒತ್ತಾಯಿಸಬೇಕು ! – ಸಂಪಾದಕರು )

  • ಭಾರತೀಯ ಮೂಲದ ಅಮೇರಿಕ ಸಂಸದ ಜಯಪಾಲ ಅವರ ಭಾರತ ದ್ವೇಷ ಮತ್ತು ಮುಸಲ್ಮಾನ ಪ್ರೇಮ !

  • ಉಘೂರ ಮುಸಲ್ಮಾನರ ಬಗ್ಗೆ ಚೀನಾ ಟೀಕೆಗೆ ಗುರಿಯಾಗುತಿದ್ದರೆ ಭಾರತದಲ್ಲಿ ಏನು ನಡೆಯುತ್ತಿದೆ? ಅದನ್ನೂ ಕೂಡ ನೋಡಬೇಕಂತೆ !

ಭಾರತೀಯ ಮೂಲದ ಸಂಸದ ಜಯಪಾಲ ಅವರು, ಒಬ್ಬ ಸಂಸತ್ ಸದಸ್ಯನಾಗಿ, ತನ್ನನ್ನು ಮತ್ತು ಇತರ ದೇಶಗಳನ್ನು ಟೀಕಿಸುವ ಧೈರ್ಯವನ್ನು ಹೊಂದಿರಬೇಕು. ಭಾರತವು ಅಮೇರಿಕಕ್ಕೆ ಮಹತ್ವದ ಆರ್ಥಿಕ ಪಾಲುದಾರನಾಗಿದ್ದರೂ ಅಮೇರಿಕ ಸ್ವಂತ ಮೌಲ್ಯದ ವಿಚಾರ ಮಾಡಬೇಕು. ಅಮೇರಿಕ ಚೀನಾದಲ್ಲಿನ ಉಘೂರ ಮುಸಲ್ಮಾನರ ಸ್ಥಿತಿ ಬಗ್ಗೆ ಟೀಕಿಸುತ್ತಿದ್ದರೆ ಭಾರತದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಕೂಡ ನೋಡಬೇಕು. ನಾನು ಇದೆಲ್ಲವನ್ನೂ ಹೇಳಿದರೆ, ನನ್ನನ್ನು ಕೆಟ್ಟವ ಎಂದು ಕರೆಯಲಾಗುವುದು ಎಂದು ನನಗೆ ತಿಳಿದಿದೆ. ಆದಾಗ್ಯೂ, ನಾನು ತಪ್ಪನ್ನು ತಪ್ಪು ಎಂದು ಟೀಕಿಸದಿದ್ದರೆ ಅದು ಅಮೇರಿಕದ ಮೌಲ್ಯಗಳಿಗೆ ವಿರುದ್ಧವಾಗುತ್ತದೆ ಎಂದು ಜಯಪಾಲ ನುಡಿದರು. ( ಅಮೇರಿಕದಲ್ಲಿ ಕಪ್ಪು ಜನರ ವಿರುದ್ಧ ಏನು ನಡೆಯುತ್ತಿದೆ ಎಂಬ ಬಗ್ಗೆ ಜಯಪಾಲ ಮಾತನಾಡುವುದಿಲ್ಲ ಏಕೆ? – ಸಂಪಾದಕ )

ಸಂಪಾದಕೀಯ ನಿಲುವು

  • ಭಾರತದ ಪ್ರಜಾಪ್ರಭುತ್ವದಲ್ಲಿ ಏನು ಕೊರತೆಗಳಿವೆ ? ಎಂಬುದನ್ನು ಅಮೇರಿಕ ಸತತವಾಗಿ ಹೇಳುತ್ತಿರುತ್ತದೆ. ಅದರ ಬದಲು ಅಮೇರಿಕ ಸ್ವಂತ ಕೊರತೆಗಳನ್ನು ದೂರಗೊಳಿಸುವುದರ ಕಡೆಗೆ ಗಮನ ನೀಡಬೇಕು !
  • ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದುಗಳು ಅಸುರಕ್ಷಿತವಾಗಿದ್ದಾರೆ. ಇದು ಸತ್ಯವಾಗಿದ್ದರೂ ಕೂಡ ಅದನ್ನು ನಿರ್ಲಕ್ಷಿಸಿ ಹಿಂದುಗಳನ್ನು ಕೀಳಾಗಿ ನೋಡುವ ದ್ವೇಷಿ ಮಾನಸಿಕತೆ ಭಾರತದಲ್ಲಿನ ಮತ್ತು ವಿದೇಶದಲ್ಲಿನ ಭಾರತೀಯರಿಗೆ ಅಂಟಿಕೊಂಡಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ .