ಉತ್ತರಾಖಂಡ ಸರಕಾರದ ಆದೇಶ !
ಡೆಹರಾಡೂನ್ – ಚಾರಧಾಮ್ ಯಾತ್ರೆಗಾಗಿ ಕೇದಾರನಾಥ, ಬದರೀನಾಥ, ಗಂಗೋತ್ರಿ ಮತ್ತು ಯಮುನೋತ್ರಿಯಲ್ಲಿ ಭಕ್ತರ ಅಪಾರ ಜನಸಂದಣಿಯು ಆಡಳಿತಕ್ಕೆ ಸವಾಲಾಗಿದೆ. ಅಪಾರ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ರಾಧಾ ರತುರಿ ಅವರು ವಿಐಪಿ(ಗಣ್ಯ ವ್ಯಕ್ತಿ) ಗಳ ದರ್ಶನದ ಮೇಲಿನ ನಿಷೇಧವನ್ನು ಮೇ 31 ರವರೆಗೆ ವಿಸ್ತರಿಸಿದ್ದಾರೆ. ಈ ಮೊದಲು ಈ ನಿಷೇಧವು ಮೇ 25 ರವರೆಗೆ ಜಾರಿಯಾಗಿತ್ತು. ಇದಲ್ಲದೇ ಆಡಳಿತವು ದೇವಸ್ಥಾನದ 50 ಮೀಟರ್ ವ್ಯಾಪ್ತಿಯಲ್ಲಿ ಭಕ್ತರು ‘ರೀಲ್ಸ್’ ಹಾಗೂ ‘ವೀಡಿಯೋ’ ಮಾಡುವಂತಿಲ್ಲ ಎಂದು ತಿಳಿಸಿದೆ.
1. ಯಮುನೋತ್ರಿ ಮತ್ತು ಗಂಗೋತ್ರಿ ಈ ಮಾರ್ಗಗಳಲ್ಲಿನ ಜನಸಂದಣಿ ಸಮಸ್ಯೆಗೆ ಯಾವುದೇ ಪರಿಹಾರ ಕಂಡು ಹಿಡಿದಿರುವುದಿಲ್ಲ.
2. ಉತ್ತರಕಾಶಿಯಿಂದ ಗಂಗೋತ್ರಿ ಈ 99 ಕಿ.ಮೀ ಮಾರ್ಗದಲ್ಲಿ ಮತ್ತು ಬರಕೋಟನಿಂದ ಯಮುನೋತ್ರಿ ಈ 46 ಕಿಮೀ ಮಾರ್ಗದಲ್ಲಿ 3,000 ವಾಹನಗಳು 12 ಗಂಟೆಗಳ ಕಾಲ ಸರತಿ ಸಾಲಿನಲ್ಲಿರುವ ಚಿತ್ರ ಕಾಣಿಸುತ್ತಿದೆ.
3. ಆಡಳಿತವು ಗಂಗೋತ್ರಿ ಮತ್ತು ಯಮುನೋತ್ರಿ ಮಾರ್ಗಗಳಲ್ಲಿ ಅನೇಕ ಅಡೆತಡೆಗಳನ್ನು ದೂರಗೊಳಿಸಿದೆ.
4. ಮೇ 16 ರಂದು ಕೇದಾರನಾಥಕ್ಕೆ 28 ಸಾವಿರ, ಬದರೀನಾಥಕ್ಕೆ 12 ಸಾವಿರ, ಯಮುನೋತ್ರಿಗೆ 10 ಸಾವಿರದ 718 ಮತ್ತು ಗಂಗೋತ್ರಿಗೆ 12 ಸಾವಿರದ 236 ಭಕ್ತರು ಭೇಟಿ ನೀಡಿದ್ದಾರೆ. ಇದುವರೆಗೆ ಒಟ್ಟು 3 ಲಕ್ಷ 98 ಸಾವಿರ ಮಂದಿ ನಾಲ್ಕೂ ಧಾಮಗಳಿಗೆ ಭೇಟಿ ನೀಡಿದ್ದಾರೆ. 28 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
5. ಜನಸಂದಣಿಯಿಂದಾಗಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಉತ್ತರಕಾಶಿ ಆಡಳಿತವು ಆಹಾರ ಪೊಟ್ಟಣಗಳು ಮತ್ತು ನೀರಿನ ಬಾಟಲಿಗಳನ್ನು ವಿತರಿಸಿತು. ಕೆಲವು ತಾತ್ಕಾಲಿಕ ಸ್ವಚ್ಛತಾ ಗೃಹಗಳನ್ನು ತೆರೆಯಲಾಗಿದೆ.
6. ಚಾರಧಾಮ್ ಯಾತ್ರೆಯ ಮಾರ್ಗದಲ್ಲಿ ಮೊದಲ ಬಾರಿಗೆ 400ಕ್ಕೂ ಹೆಚ್ಚು ವೈದ್ಯರನ್ನು ನೇಮಿಸಲಾಗಿದೆ.