ಭಾರತ ಚಂದ್ರನ ಮೇಲೆ ಹೆಜ್ಜೆಯಿಟ್ಟಿದೆ, ಆದರೆ ಕರಾಚಿಯಲ್ಲಿ ಮಕ್ಕಳು ತೆರೆದ ಚರಂಡಿಯಲ್ಲಿ ಬಿದ್ದು ಸಾಯುತ್ತಾರೆ ! – ಸೈಯದ್ ಮುಸ್ತಫಾ ಕಮಾಲ

ಪಾಕಿಸ್ತಾನದ ಸಂಸದ ಸೈಯದ್ ಮುಸ್ತಫಾ ಕಮಾಲ ಇವರಿಂದ ಸಂಸತ್ತಿನಲ್ಲಿ ಪಾಕಿಸ್ತಾನದ ವ್ಯವಸ್ಥೆಯ ಬಗ್ಗೆ ಟೀಕೆ !

ಪಾಕಿಸ್ತಾನದ ಸಂಸದ ಸೈಯದ್ ಮುಸ್ತಫಾ ಕಮಾಲ

ಇಸ್ಲಾಮಾಬಾದ (ಪಾಕಿಸ್ತಾನ) – ದೂರದರ್ಶನದಲ್ಲಿ ನಾವು ಸುದ್ದಿಯನ್ನು ನೋಡುತ್ತೇವೆ, ಭಾರತವು ದಕ್ಷಿಣ ಧ್ರುವದ ಕಡೆಗೆ ಹೆಜ್ಜೆ ಹಾಕಿದೆ. ಈ ಸುದ್ದಿಯ ಪ್ರಸಾರವಾದ ಕೆಲವೇ ಸೆಕೆಂಡುಗಳಲ್ಲಿ ಕರಾಚಿಯಲ್ಲಿ ತೆರೆದ ಚರಂಡಿಯಲ್ಲಿ ಚಿಕ್ಕ ಮಗು ಬಿದ್ದು ಸಾವನ್ನಪ್ಪಿದ ಮತ್ತೊಂದು ಸುದ್ದಿ ಕಾಣಿಸುತ್ತದೆ. ಈ ಕೆಟ್ಟ ಸುದ್ದಿಗಳು ಪ್ರತಿ ಮೂರನೇ ದಿನ ಕೇಳುತ್ತೇವೆ ಎನ್ನುವ ಶಬ್ದಗಳಲ್ಲಿ ಪಾಕಿಸ್ತಾನದ `ಮುತ್ತಹಿದಾ ಕೌಮಿ ಮೂವಮೆಂಟ ಪಾಕಿಸ್ತಾನ’ ಪಕ್ಷದ ಸಂಸದ ಸಯ್ಯದ್ ಮುಸ್ತಫಾ ಕಮಾಲ್ ಇವರು ನೇರವಾಗಿ ಪಾಕಿಸ್ತಾನದ ಸಂಸತ್ತಿನಲ್ಲಿ ಪಾಕಿಸ್ತಾನದ ವ್ಯವಸ್ಥೆಯನ್ನು ಟೀಕಿಸಿದರು. ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.

ಸೈಯದ್ ಮುಸ್ತಫಾ ಕಮಾಲ್ ತಮ್ಮ ಮಾತನ್ನು ಮುಂದುವರಿಸಿ,

1. ಪಾಕಿಸ್ತಾನದ ಎರಡು ದೊಡ್ಡ ಬಂದರುಗಳು ಕರಾಚಿಯಲ್ಲಿವೆ. ಮಧ್ಯ ಏಷ್ಯಾ ಮತ್ತು ಅಫ್ಘಾನಿಸ್ತಾನಕ್ಕೆ ಪ್ರವಾಸ ಮಾಡಲು ಕರಾಚಿ ಉತ್ತಮ ಸ್ಥಾನವಾಗಿದೆ. ಕರಾಚಿಯಿಂದ ಪಾಕಿಸ್ತಾನಕ್ಕೆ ಶೇ. 68 ರಷ್ಟು ತೆರಿಗೆ ಸಿಗುತ್ತದೆ; ಆದರೆ ಕಳೆದ 15 ವರ್ಷಗಳಲ್ಲಿ ಕರಾಚಿಗೆ ಶುದ್ಧ ನೀರನ್ನು ಕೂಡ ನೀಡಲು ಸಾಧ್ಯವಾಗಿಲ್ಲ. ಕರಾಚಿ ನಗರಕ್ಕೆ ಪೂರೈಸುವ ನೀರನ್ನು ಮಾಫಿಯಾದವರು ಕಳ್ಳತನ ಮಾಡುತ್ತಾರೆ. ಮತ್ತು ಕಳ್ಳತನ ಮಾಡಿದ ನೀರಿನ್ನು ಪುನಃ ಹೆಚ್ಚಿನ ದರದಲ್ಲಿ ಕರಾಚಿಯ ಜನರಿಗೆ ಮಾರಾಟ ಮಾಡಲಾಗುತ್ತದೆ.

2. ಪಾಕಿಸ್ತಾನದ 2 ಕೋಟಿ 62 ಲಕ್ಷ ಮಕ್ಕಳು ಶಾಲೆಗೆ ಹೋಗುವುದಿಲ್ಲ. ಈ ಸಂಖ್ಯೆಯು ವಿಶ್ವದ 70 ದೇಶಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿರುವ ಅನಕ್ಷರಸ್ಥ ಮಕ್ಕಳಿಂದಾಗಿ ಪಾಕಿಸ್ತಾನದ ಆರ್ಥಿಕ ಪ್ರಗತಿ ನಾಶವಾಗುವ ಅಪಾಯವಿದೆ. ಕೇವಲ ಸಿಂಧ್ ಪ್ರಾಂತ್ಯದಲ್ಲಿಯೇ ಕಾಗದದ ಮೇಲೆ 48 ಸಾವಿರ ಶಾಲೆಗಳಿವೆ. ಆದರೆ ಇದರಲ್ಲಿ 11 ಸಾವಿರ ಶಾಲೆಗಳು ಅಸ್ತಿತ್ವದಲ್ಲಿಯೇ ಇಲ್ಲ. ಸಿಂಧ್ ಪ್ರಾಂತ್ಯದಲ್ಲಿ 70 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.

ಪಾಕಿಸ್ತಾನದಲ್ಲಿ 2 ಕೋಟಿ 28 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ !

ವಿಶ್ವಸಂಸ್ಥೆಯ ಮಾಹಿತಿಯ ಪ್ರಕಾರ, ಪಾಕಿಸ್ತಾನವು ಜಗತ್ತಿನ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನದಲ್ಲಿ, 5 ರಿಂದ 16 ವರ್ಷ ವಯಸ್ಸಿನ 2 ಕೋಟಿ 28 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಪ್ರಮಾಣವು ಪಾಕಿಸ್ತಾನದ ಜನಸಂಖ್ಯೆಯ ಶೇ. 44 ರಷ್ಟಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ಥಾನದ ಈ ಸ್ಥಿತಿಯನ್ನು ಅವರದೇ ಸಂಸದರು ಗಮನಕ್ಕೆ ತಂದ ಬಳಿಕವೂ ಪಾಕಿಸ್ತಾನದಲ್ಲಿ ಏನಾದರೂ ಸುಧಾರಣೆಯಾಗುವ ಸಾಧ್ಯತೆಯಿಲ್ಲ. ಪಾಕಿಸ್ತಾನಕ್ಕೆ ಯಾವುದೇ ಭವಿಷ್ಯವಿಲ್ಲ, ಇದು ಮುಂಬರುವ ಕೆಲವು ವರ್ಷದಲ್ಲಿ ಜಗತ್ತಿಗೆ ಕಂಡು ಬರಲಿದೆ.