ಅಮೇರಿಕಾದಲ್ಲಿನ ಪಾಕಿಸ್ತಾನಿ ಮೂಲದ ಉದ್ಯಮಿ ಸಾಜಿದ್ ತರಾರ್ ಇವರ ಹೇಳಿಕೆ !
ವಾಷಿಂಗ್ಟನ್ (ಅಮೇರಿಕಾ) – ಒಂದು ದಿನ, ಜಗತ್ತಿಗೆ ಭಾರತದ ಪ್ರಜಾಪ್ರಭುತ್ವದಿಂದ ಬಹಳಷ್ಟು ಕಲಿಯಲು ಸಿಗುವ ದಿನ ಬರಲಿದೆ, ಎಂದು ಅಮೇರಿಕಾದಲ್ಲಿನ ಪಾಕಿಸ್ತಾನಿ ಮೂಲದ ಪ್ರಸಿದ್ಧ ಉದ್ಯಮಿ ಸಾಜಿದ್ ತರಾರ ಇವರು ಹೇಳಿಕೆ ನೀಡಿದರು.
ತರಾರ ಮಾತು ಮುಂದುವರಿಸುತ್ತಾ, ಭಾರತವು ಜಗತ್ತಿನಲ್ಲಿನ ಎಲ್ಲಕ್ಕಿಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿದೆ. ಭಾರತದಲ್ಲಿ ೯೭ ಕೋಟಿಗಿಂತಲೂ ಹೆಚ್ಚಿನ ಜನರು ಅವರ ಮತದಾನದ ಹಕ್ಕನ್ನು ಉಪಯೋಗಿಸುತ್ತಾರೆ, ಇದು ಚಮತ್ಕಾರಗಿಂತಲೂ ಕಡಿಮೆ ಏನು ಅಲ್ಲ. ೨೦೨೪ ರ ಭಾರತವು ಮಾಡಿರುವ ವಿಕಾಸ ಆಶ್ಚರ್ಯಕಾರಕವಾಗಿದೆ. ಜಗತ್ತಿನಾದ್ಯಂತ ಇರುವ ದೇಶಗಳಿಗಾಗಿ ಇದು ಒಂದು ಉದಾಹರಣೆಯಾಗಿದೆ.
ಪ್ರಧಾನಮಂತ್ರಿ ಮೋದಿ ಜಗತ್ತಿಗಾಗಿ ಒಳ್ಳೆಯ ನಾಯಕ !
ಸಾಜಿದ ತರಾರ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಬಗ್ಗೆ ಮಾತನಾಡುತ್ತಾ, ಪ್ರಧಾನಮಂತ್ರಿ ಮೋದಿ ಇವರು ಕೇವಲ ಭಾರತಕ್ಕಾಗಿ ಅಷ್ಟೇ ಅಲ್ಲದೆ, ಸಂಪೂರ್ಣ ಜಗತ್ತಿಗಾಗಿ ಒಳ್ಳೆಯ ನಾಯಕರಾಗಿದ್ದಾರೆ. ಮೋದಿ ಇವರು ಓರ್ವ ಅದ್ಭುತ ನಾಯಕರಾಗಿದ್ದಾರೆ. ಅವರು ಬಿಗುವಿನ ಪರಿಸ್ಥಿತಿ ಇದ್ದರೂ ಕೂಡ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಮತ್ತು ತಮ್ಮ ರಾಜಕೀಯ ಪ್ರತಿಷ್ಠೆ ಅಪಾಯಕ್ಕೆ ಸಿಲುಕಿಸಿದ್ದರು. ಒಂದು ದಿನ ಪಾಕಿಸ್ತಾನಕ್ಕೂ ಕೂಡ ಅವರಂತಹ ನಾಯಕ ಸಿಗಲಿದೆ. ನನಗೆ, ಮೋದಿಜಿ ಮತ್ತೆ ಪಾಕಿಸ್ತಾನದ ಜೊತೆಗೆ ಚರ್ಚೆ ನಡೆಸುವರು ಎಂಬ ಇಚ್ಛೆ ಇದೆ. ಎರಡು ದೇಶದಲ್ಲಿನ ವ್ಯಾಪಾರ ಹಾಗೂ ಶಾಂತಿಪೂರ್ಣ ಪಾಕಿಸ್ತಾನ ಭಾರತಕ್ಕಾಗಿ ಕೂಡ ಒಳ್ಳೆಯದೇ ಆಗುವುದು ಎಂದು ಹೇಳಿದರು.
The world will learn a lot from India’s democracy in the future and Prime Minister Modi is a good leader for the world, says Pakistani-American businessman Sajid Tarar.#PMModi #WorldNews #LokSabhaElection2024 #Elections2024 #ModiKaun #Modiisback pic.twitter.com/Lt7xkHRits
— Sanatan Prabhat (@SanatanPrabhat) May 16, 2024