ರಾಷ್ಟ್ರಪತಿಗಳು ಶ್ರೀರಾಮಲಲ್ಲಾನ ಪೂಜೆ ಮಾಡಿದ್ದರಿಂದ ಕಾಂಗ್ರೆಸ್‌ನ ನಾನಾ ಪಟೋಲೆ ಅಸಂಬದ್ಧ ಆಕ್ಷೇಪ ವ್ಯಕ್ತಪಡಿಸಿದ ಪ್ರಕರಣ
ಮುಂಬಯಿ – ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಶ್ರೀರಾಮಲಲ್ಲಾನ ಪೂಜೆ ಮಾಡಿದ್ದರು. ಇದರಿಂದ ಮಹಾರಾಷ್ಟ್ರ ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ನಾನಾ ಪಟೋಲೆ ಇವರು, ‘ಇಂಡಿ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ನಾವು ಅಯೋಧ್ಯೆಯಲ್ಲಿ ರಾಮಮಂದಿರದ ಶುದ್ಧೀಕರಣ ಮಾಡುವೆವು. ಶಂಕರಾಚಾರ್ಯರು ಇದಕ್ಕೆ ವಿರೋಧ ಮಾಡುತ್ತಿದ್ದರು (ದೇವಾಲಯದಲ್ಲಿನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ). ನಾವು ಅಧಿಕಾರಕ್ಕೆ ಬಂದ ನಂತರ ನಾಲ್ಕೂ ಶಂಕರಾಚಾರ್ಯರು ರಾಮಮಂದಿರವನ್ನು ಶುದ್ಧೀಕರಣ ಮಾಡುವರು. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣದಲ್ಲಿ ಶಿಷ್ಟಾಚಾರದ (ರಾಜ ಶಿಷ್ಟಾಚಾರ) ವಿರುದ್ಧವಾಗಿ ನಡೆದುಕೊಂಡಿದ್ದಾರೆ’. ಎಂದುದು ಹೇಳಿಕೆ ನೀಡಿದ್ದರು. ಇದನ್ನು ಅನೇಕ ಸಂತರು ಮತ್ತು ಮಹಂತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜುನಾ ಅಖಾಡದ ವಕ್ತಾರ ಮಹಂತ್ ನಾರಾಯಣ ಗಿರಿ ಮಾತನಾಡಿ, ನಾನಾ ಪಟೋಲೆ ಅತ್ಯಂತ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಇದು ದೇಶದ ಎಲ್ಲ ಸಾಧುಗಳಿಗೆ ಮಾಡಿದ ಅವಮಾನವಾಗಿದೆ. ರಾಷ್ಟ್ರಪತಿಗಳು ರಾಮಮಂದಿರದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಾನಾ ಪಟೋಲೆ ಹೇಳಿಕೆ ನೀಡಿರುವುದು ಹಿಂದುಳಿದ ಸಮುದಾಯಕ್ಕೆ ಮಾಡಿದ ಅವಮಾನ. ಹಿಂದೂಗಳಿಗೂ ಅವಮಾನ ಮಾಡುತ್ತಿದ್ದಾರೆ. ಅವರಂತಹವರಿಗೆ ಶಿಕ್ಷೆಯಾಗಬೇಕು. ನಾನಾ ಪಟೋಲೆ ಅವರ ಹೇಳಿಕೆ ಅತ್ಯಂತ ಕೆಟ್ಟದ್ದಾಗಿದ್ದು, ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ” ಎಂದು ಹೇಳಿದರು.
1. ಅಧ್ಯಾತ್ಮಿಕ ಮುಖಂಡ ಸ್ವಾಮಿ ದೀಪಂಕರ್ ಮಾತನಾಡಿ, “ನಾನಾ ಪಟೋಲೆ ಅವರ ಯಾವ ಮನಸ್ಥಿತಿ ಇದೆ ಎಂಬುದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಸಮಾಜವನ್ನು ಜಾತಿಯ ಆಧಾರದ ಮೇಲೆ ವಿಭಜಿಸುವ ಮನಸ್ಥಿತಿ ಇದು. ಇಂತಹ ವಿಚಾರ ಸರಣಿಯನ್ನು ಬಹಿಷ್ಕರಿಸುವ ಸಮಯ ಬಂದಿದೆ.” ಎಂದು ಹೇಳಿದರು.
2. ಅಯೋಧ್ಯೆಯ ರಾಷ್ಟ್ರೀಯ ಕಥೆಗಾರ ಮತ್ತು ಆಚಾರ್ಯ ಡಾ. ಚಂದ್ರಾಂಶು ಅವರು ಮಾತನಾಡಿ, ನಾನಾ ಪಟೋಲೆ ಅವರ ಹೇಳಿಕೆ 140 ಕೋಟಿ ಭಾರತೀಯರಿಗೆ ಮಾಡಿದ ಅವಮಾನವಾಗಿದೆ. ರಾಮಮಂದಿರವನ್ನು ಎಲ್ಲಾ ಜಾತಿಯ ಜನರು ನಿರ್ಮಿಸಿದ್ದಾರೆ. ಕಾಂಗ್ರೆಸ್ಸಿಗೂ ಆಹ್ವಾನ ನೀಡಲಾಗಿತ್ತು; ಆದರೆ ಕಾಂಗ್ರೆಸ್ಸಿಗರಿಗೆ ಇದು ಇಷ್ಟವಾಗಲಿಲ್ಲ” ಎಂದಿದ್ದಾರೆ.