ಸೈಬರ್ ಅಪರಾಧ ಮಾಡಿರುವ 28 ಸಾವಿರದ 200 ಮೊಬೈಲ್ ಗಳನ್ನು ‘ಬ್ಲಾಕ್ ಮಾಡಿದ ಕೇಂದ್ರ ಸರ್ಕಾರ’ !

ಈ ಮೊಬೈಲ್ ಗಳು ಬಳಕೆ ಮಾಡಿರುವ ೨೦ ಲಕ್ಷ ಸಿಮ್ ಕಾರ್ಡ್ ಗಳ ಪರಿಶೀಲನೆ ಆರಂಭ !

ನವ ದೆಹಲಿ – ಸೈಬರ್ ಅಪರಾಧವನ್ನು ಎದುರಿಸುವುದಕ್ಕಾಗಿ ಕೇಂದ್ರ ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಗೃಹ ಸಚಿವಾಲಯದ ಆದೇಶದ ಪ್ರಕಾರ ದೂರಸಂಪರ್ಕ ಇಲಾಖೆಯು ೨೮ ಸಾವಿರ ೨೦೦ ಮೊಬೈಲ್ ಗಳನ್ನು ‘ಬ್ಲಾಕ್’ ಮಾಡಿದೆ. ಜೊತೆಗೆ ಈ ಮೊಬೈಲ್ ಬಳಕೆ ಮಾಡಿರುವ ೨೦ ಲಕ್ಷಕ್ಕಿಂತಲೂ ಹೆಚ್ಚಿನ ಸಿಮ್ ಕಾರ್ಡ್ ಗಳ ಪರಿಶೀಲನೆ ಮಾಡಲು ಹೇಳಲಾಗಿದೆ.

ಅದರ ಮರುಪರಿಶೀಲನೆ ಮಾಡದೆ ಇದ್ದರೆ ಅವುಗಳನ್ನು ಬ್ಲಾಕ್ ಮಾಡುವ ಆದೇಶ ನೀಡಿದ್ದಾರೆ. ದೂರ ಸಂಪರ್ಕ ಇಲಾಖೆ, ಗೃಹ ಸಚಿವಾಲಯ ಮತ್ತು ರಾಜ್ಯ ಪೊಲೀಸ್ ಸೈಬರ್ ಇಲಾಖೆಯವರು ಈ ಆರ್ಥಿಕ ವಂಚನೆಯಲ್ಲಿ ದೂರ ಸಂಪರ್ಕ ಸಂಪನ್ಮೂಲದ ದುರುಪಯೋಗ ತಡೆಯುವುದಕ್ಕಾಗಿ ಒಟ್ಟಾಗಿದ್ದಾರೆ. ಈ ಸಂಘಟಿತ ಪ್ರಯತ್ನದ ಉದ್ದೇಶ ವಂಚಿಸುವವರ ನೆಟ್ವರ್ಕ್ ನ್ನು ನಾಶ ಮಾಡುವುದು ಮತ್ತು ನಾಗರಿಕರನ್ನು ಡಿಜಿಟಲ್ ಅಪಾಯದಿಂದ ರಕ್ಷಿಸುವುದೇ ಆಗಿದೆ.

ಕೇಂದ್ರ ಸರಕಾರವು ಫೆಬ್ರುವರಿ ೬, ೨೦೨೪ ರಂದು ಲೋಕಸಭೆಯಲ್ಲಿ, ೨೦೨೩ ಈ ಒಂದು ವರ್ಷದಲ್ಲೇ ಸೈಬರ್ ವಂಚನೆಯ ಒಟ್ಟು ೧೧.೨೮ ಲಕ್ಷ ಪ್ರಕರಣಗಳು ದಾಖಲಾಗಿವೆ. ಸಂಪೂರ್ಣ ದೇಶದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ನೊಂದಾಯಿಸಲಾಗಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರದ ಇದೆ. ದೇಶದಲ್ಲಿನ ಒಟ್ಟು ೧೧.೨೮ ಲಕ್ಷ ಸೈಬರ್ ಅಪರಾಧಗಳಲ್ಲಿ ೭ ಸಾವಿರದ ೪೮೮.೬ ಕೋಟಿ ರೂಪಾಯಿ ಲೂಟಿ ಆಗಿದೆ. ಮಹಾರಾಷ್ಟ್ರದಲ್ಲಿ ಎಲ್ಲಕ್ಕಿಂತ ಹೆಚ್ಚು ೯೯೦.೭ ಕೋಟಿ ರೂಪಾಯಿ ಲೂಟಿ ಆಗಿದ್ದರೆ ತೆಲಂಗಾಣದಲ್ಲಿ ೭೫೯.೧ ಕೋಟಿ ರೂಪಾಯಿ ಮತ್ತು ಉತ್ತರ ಪ್ರದೇಶದಲ್ಲಿ ೭೨೧.೧ ಕೋಟಿ ರೂಪಾಯಿ ವಂಚನೆ ಆಗಿದೆ ಎಂದು ಅಧಿಕೃತವಾಗಿ ಹೇಳಿತ್ತು.