PIL on Kareena: ತಮ್ಮ ‘ಕರೀನಾ ಕಪೂರ ಪ್ರೆಗ್ನನ್ಸಿ ಬೈಬಲ್’ ಪುಸ್ತಕದ ಹೆಸರಿನಿಂದ ಕ್ರೈಸ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ

ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಿಂದ ನಟಿ ಕರಿನಾ ಕಪೂರ್ ಖಾನ್ ಗೆ ನೋಟಿಸ್

ಜಬಲಪುರ (ಮಧ್ಯಪ್ರದೇಶ) – ನಟಿ ಕರೀನಾ ಕಪೂರ್ ಖಾನ್ ಇವರ ವಿರುದ್ಧ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಖಾನ್ ಇವರ ‘ಕರೀನಾ ಕಪೂರ್ ಪ್ರಗ್ನೆನ್ಸಿ ಬೈಬಲ್’ ಹೆಸರಿನ ಪುಸ್ತಕದಿಂದ ಕ್ರೈಸ್ತ ಧರ್ಮಿಯರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದರಿಂದ ಜಬಲಪುರದ ನಿವಾಸಿ ನ್ಯಾಯವಾದಿ ಕ್ರಿಸ್ಟಾಫರ್ ಆಂಟನಿ ಇವರು ಅರ್ಜಿ ದಾಖಲಿಸಿದ್ದರು. ಈ ಅರ್ಜಿಯ ಮೂಲಕ ಕರೀನಾ ಇವರ ಮೇಲೆ ದೂರ ದಾಖಲಿಸಲು ಆಗ್ರಹಿಸಿದ್ದಾರೆ. ಉಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಖಾನ್ ಸಹಿತ ಅದಿತಿ ಶಾಹ, ಭೀಮಜಿಯಾನಿ, ಅಮೇಝಾನ್ ಇಂಡಿಯಾ, ಜೂಗರನಾಟ್ ಬುಕ್ಸ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿ ಉತ್ತರ ಕೇಳಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 1ರಂದು ನಡೆಯುವುದು.

ಅರ್ಜಿಯಲ್ಲಿ, ಖಾನ್ ಅವರ ಗರ್ಭಿಣಿಯ ಅನುಭವ ಹೇಳುವುದಕ್ಕಾಗಿ ಈ ಪುಸ್ತಕ ಪ್ರಕಾಶಿಸಿದ್ದಾರೆ. ಪುಸ್ತಕದ ಹೆಸರಿನಲ್ಲಿ ಬೈಬಲ್ ಜೋಡಿಸಿರುವುದರಿಂದ ಕ್ರೈಸ್ತರಿಗೆ ನೋವು ಉಂಟಾಗಿದೆ ಮತ್ತು ಅವರ ಭಾವನೆಗೆ ಧಕ್ಕೆ ಬಂದಿದೆ. ಪುಸ್ತಕದ ಶೀರ್ಷಿಕೆಯಲ್ಲಿ ಬೈಬಲ್ಲಿನ ಉಲ್ಲೇಖವಿದೆ. ಕ್ರೈಸ್ತ ಧರ್ಮದ ಅನುಯಾಯಿಗಳಿಗೆ ಬೈಬಲ್ ಪವಿತ್ರ ಧಾರ್ಮಿಕ ಗ್ರಂಥವಾಗಿದೆ. ಆದ್ದರಿಂದ ಕ್ರೈಸ್ತ ಜನಾಂಗದ ವತಿಯಿಂದ ನಿಷೇಧಿಸಲಾಗಿದೆ. ಬೈಬಲ್ ಈ ಪವಿತ್ರ ಗ್ರಂಥದಲ್ಲಿ ಭಗವಂತನ ಕಲಿಕೆ ಮತ್ತು ನೀತಿ ಕಥೆಗಳು ಕಂಡು ಬರುತ್ತವೆ.

ಸಂಪಾದಕೀಯ ನಿಲುವು

ಹಿಂದುಗಳ ಧಾರ್ಮಿಕ ಭಾವನೆಗೆ ಯಾರಾದರೂ ನೋಯಿಸಿದರೆ ಅವರ ವಿರುದ್ಧ ನ್ಯಾಯಾಲಯಕ್ಕೆ ಹೋಗಿ ಹಿಂದೂ ನ್ಯಾಯವಾದಿ ವಿರೋಧ ವ್ಯಕ್ತಪಡಿಸುವ ಘಟನೆಗಳು ದುರ್ಲಭವೇ ಇರುತ್ತವೆ, ಇದನ್ನು ತಿಳಿದುಕೊಳ್ಳಿ !