Dabholkar Murder Case : ಡಾ. ವೀರೇಂದ್ರಸಿಂಹ ತಾವಡೆ, ನ್ಯಾಯವಾದಿ ಸಂಜೀವ ಪುನಾಲೇಕರ ಮತ್ತು ವಿಕ್ರಮ ಭಾವೆ ನಿರಪರಾಧಿ !

ದಾಭೋಲ್ಕರ್ ಹತ್ಯೆ ಪ್ರಕರಣದ ತೀರ್ಪು !

ಪುಣೆ – ಈಗಷ್ಟೆ ಪುಣೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮನೆಮಾತಾಗಿದ್ದ ಡಾ. ನರೇಂದ್ರ ದಾಭೋಲ್ಕರ ಪ್ರಕರಣದಲ್ಲಿ ತೀರ್ಪು ನೀಡಿದೆ. ನ್ಯಾಯಾಲಯವು 3 ಮಂದಿಯನ್ನು ನಿರಪರಾಧಿ ಎಂದು ಬಿಡುಗಡೆಗೊಳಿಸಿರುವುದು ಮಹತ್ವದ ಸಂಗತಿಯಾಗಿದೆ.

ಡಾ. ವೀರೇಂದ್ರಸಿಂಹ ತಾವಡೆ, ನ್ಯಾಯವಾದಿ ಸಂಜೀವ ಪುನಾಲೇಕರ ಮತ್ತು ವಿಕ್ರಮ ಭಾವೆ ಅವರನ್ನು ನ್ಯಾಯಾಲಯವು ನಿರಪರಾಧಿ ಎಂದು ಬಿಡುಗಡೆ ಮಾಡಿದೆ. ಆದರೆ ನ್ಯಾಯಾಲಯವು ಉಳಿದ ಇಬ್ಬರು ಆರೋಪಿಗಳಾದ ಸಚಿನ ಅಂದುರೆ ಮತ್ತು ಶರದ ಕಳಸಕರ ರವರು ತಪ್ಪಿತಸ್ಥರೆಂದು ತೀರ್ಪು ನೀಡಿದ್ದು, ಆವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಪರ ಪಕ್ಷದ ನ್ಯಾಯವಾದಿಗಳಾದ ಪ್ರಕಾಶ ಸಾಳಸಿಂಗಿಕರರವರು ಈ ತೀರ್ಪನ್ನು ಗೌರವಿಸುತ್ತಾ, `ಅಂದುರೆ ಮತ್ತು ಕಳಸಕರ ರವರ ಬಿಡುಗಡೆಗಾಗಿ ನಾವು ಉಚ್ಚ ನ್ಯಾಯಾಲಯಕ್ಕೆ ಹೋಗುತ್ತೇವೆ’, ಎಂದು ಹೇಳಿದರು.