C-63 Bill in Canada: ವಿಷಯುಕ್ತ ಭಾಷಣ ಮಾಡುವವರನ್ನು ಶಿಕ್ಷಿಸುವ ‘C-63’ ಮಸೂದೆ ಕೆನಡಾದ ಸಂಸತ್ತಿನಲ್ಲಿ ಮಂಡನೆ !

ಒಟಾವಾ – ಕೆನಡಾ ಸರ್ಕಾರವು ದ್ವೇಷ ಭಾಷಣ ಮಾಡುವ ವ್ಯಕ್ತಿಗಳನ್ನು ಶಿಕ್ಷಿಸುವ ‘ಆನ್‌ಲೈನ್ ಹಾರ್ಮ್ಸ ಬಿಲ್’ ಎಂದು ಗುರುತಿಸಲ್ಪಡುವ ‘ C-63’ ಮಸೂದೆಯನ್ನು ಸಂಸತ್ತಿನಲ್ಲಿ ಪ್ರಸ್ತುತ ಪಡಿಸಿದೆ. ಚಿಕ್ಕಮಕ್ಕಳ ರಕ್ಷಣೆಗಾಗಿ ಈ ಮಸೂದೆ ಮಂಡಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೂ ಈ ಮಸೂದೆಯು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅಭೂತಪೂರ್ವ ನಿಯಂತ್ರಣವನ್ನು ತರಬಹುದು, ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಮಸೂದೆಯು ದ್ವೇಷದಿಂದ ಕೂಡಿದ ಅಪರಾಧದ ಸಮಸ್ಯೆಯನ್ನು ಕಠಿಣ ರೀತಿಯಲ್ಲಿ ಪರಿಹರಿಸುವುದಕ್ಕಾಗಿ ಕೆನೆಡಿಯನ್ ಮಸೂದೆಯಲ್ಲಿ ಸುಧಾರಣೆ ಮಾಡಲಿದೆ. ‘ಸಿ-63’ ಮಸೂದೆಯಲ್ಲಿ ನಮೂದಿಸಿರುವಂತೆ, ಯಾರಾದರೂ ಸಂಸತ್ತಿನ ಯಾವುದೇ ಕಾನೂನಿನ ಮೂಲಕ ಜನಾಂಗ, ಭಾಷೆ, ಬಣ್ಣ, ಧರ್ಮ, ಲಿಂಗ, ವಯಸ್ಸು, ಮಾನಸಿಕ ಅಥವಾ ಅಂಗವಿಕಲತೆ, ಲೈಂಗಿಕ ಪ್ರವೃತ್ತಿ ಅಥವಾ ಅಭಿವ್ಯಕ್ತಿಯ ಅಡಿಯಲ್ಲಿ ದೋಷಾರೋಪಣೆ ಮಾಡುವುದು, ಆಗ ಅದನ್ನು ದಾಖಲಾರ್ಹ ವಲ್ಲದ ಅಪರಾಧವೆಂದು ಪರಿಗಣಿಸಲಾಗುತ್ತದೆ. ಅಂತಹ ಅಪರಾಧಕ್ಕೆ ಶಿಕ್ಷೆಯು ಜೀವಾವಧಿ ಶಿಕ್ಷೆಯಷ್ಟು ಕಠಿಣವಾಗಿರುತ್ತದೆ.