Another Indian Student Missing in US: ಈಗ ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ನಾಪತ್ತೆ !

ರೂಪೇಶ ಚಂದ್ರ ಮೇ 2 ರಿಂದ ಚಿಕಾಗೊದಿಂದ ನಾಪತ್ತೆ !

ವಾಷಿಂಗ್ಟನ್ (ಅಮೆರಿಕಾ) – ಅಮೇರಿಕಾದಲ್ಲಿ ಕಳೆದ 6 ತಿಂಗಳಿಂದ ಶಿಕ್ಷಣಕ್ಕಾಗಿ ಹೋಗಿದ್ದ ಅಥವಾ ಅಲ್ಲಿ ನೆಲೆಸಿರುವ ಭಾರತೀಯ ಮೂಲದ ವಿದ್ಯಾರ್ಥಿಗಳ ಮೇಲೆ ಹಲವು ದಾಳಿಗಳು ನಡೆದಿವೆ. ಈ ಕಾಲಾವಧಿಯಲ್ಲಿ ಕನಿಷ್ಠ 11 ಭಾರತೀಯ ವಿದ್ಯಾರ್ಥಿಗಳು ಅಮೇರಿಕಾದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದೀಗ ಚಿಕಾಗೋದಲ್ಲಿ ಇಂತಹ ಒಂದು ಘಟನೆ ನಡೆದಿದ್ದು, ಎನ್ ಶೆರಿಡನ್ ರಸ್ತೆಯ 4300 ಬ್ಲಾಕ್‌ನ ಭಾರತೀಯ ವಿದ್ಯಾರ್ಥಿ ರೂಪೇಶ ಚಂದ್ರ ಮೇ 2 ರಿಂದ ನಾಪತ್ತೆಯಾಗಿದ್ದಾರೆ.

ಚಿಕಾಗೋದಲ್ಲಿರುವ ಭಾರತೀಯ ವಾಣಿಜ್ಯ ರಾಯಭಾರಿಯು, ಭಾರತೀಯ ವಿದ್ಯಾರ್ಥಿ ರೂಪೇಶ್ ಚಂದ್ರ ಅವರ ನಾಪತ್ತೆಯ ವಾರ್ತೆಯನ್ನು ಕೇಳಿ ಮಹಾ ವಾಣಿಜ್ಯ ಅಧಿಕಾರಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ರಾಯಭಾರಿ ಕಚೇರಿಯು ಭಾರತೀಯ ಸಮುದಾಯ ಮತ್ತು ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ರೂಪೇಶ್‌ನನ್ನು ಹುಡುಕುವ ಭರವಸೆ ಇದೆ ಎಂದಿದ್ದಾರೆ. ಸಾರ್ವಜನಿಕರು ರೂಪೇಶ್ ಬಗ್ಗೆ ಏನಾದರೂ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸುವಂತೆ ಚಿಕಾಗೋ ಪೊಲೀಸರು ಮನವಿ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಕಳೆದ 6 ತಿಂಗಳುಗಳಿಂದ ಭಾರತೀಯ ವಿದ್ಯಾರ್ಥಿಗಳ ಹತ್ಯೆಯ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ. ಇದು ಭಾರತದ ವಿರುದ್ಧ ಅಂತರಾಷ್ಟ್ರೀಯ ಷಡ್ಯಂತ್ರವಾಗಿದ್ದು, ಭಾರತವೇ ಇದನ್ನು ಅಮೆರಿಕಕ್ಕೆ ವಿಚಾರಿಸಬೇಕಾಗಿದೆ !

ಭಾರತೀಯ ವಿದ್ಯಾರ್ಥಿಗಳ ವಿರುದ್ಧದ ಆಗುತ್ತಿರುವ ಇಂತಹ ಕೃತ್ಯಗಳ ಹಿಂದೆ ಖಲಿಸ್ತಾನಿಗಳ ಕೈವಾಡವಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇದೆಲ್ಲದರಿಂದ ‘ಭಾರತೀಯರಿಗೆ ಅಮೆರಿಕ ಅಪಾಯಕಾರಿ ರಾಷ್ಟ್ರವಾಗುತ್ತಿದೆ’, ಎಂದು ವಿದೇಶಾಂಗ ಸಚಿವಾಲಯವು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೇಳಿಕೆ ನೀಡಿ ಅಮೆರಿಕದ ಮೇಲೆ ಒತ್ತಡ ತರಬೇಕಾಗಿದೆ !