Dhabholkar Murder Case : ಬಹುಚರ್ಚಿತ ಡಾ. ದಾಭೋಲ್ಕರ್ ಹತ್ಯೆ ಪ್ರಕರಣದ ತೀರ್ಪು ಮೇ 10ರಂದು ಬರುವ ಸಾಧ್ಯತೆ !

ಪುಣೆ – ಆಗಸ್ಟ್ 20, 2013 ರಂದು, ಇಲ್ಲಿಯ ಮಹರ್ಷಿ ವಿಠ್ಠಲ ರಾಮಜಿ ಶಿಂಧೆ ಸೇತುವೆಯಲ್ಲಿ ‘ಅಂಧಶ್ರದ್ಧಾ ನಿರ್ಮೂಲನಾ ಸಮಿತಿ’ಯ ಅಧ್ಯಕ್ಷ ಡಾ. ನರೇಂದ್ರ ದಾಭೋಲ್ಕರರ ಕೊಲೆ ಆಯಿತು. ಈ ಪ್ರಕರಣವನ್ನು ಆರಂಭದಲ್ಲಿ ಪುಣೆ ಪೊಲೀಸರಿಂದ, ಭಯೋತ್ಪಾದನಾ ನಿಗ್ರಹ ದಳದಿಂದ ತನಿಖೆ ನಡೆಸಲಾಗಿತ್ತು. ಬಳಿಕ ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಸಚಿನ್ ಅಂದುರೆ, ಶರದ್ ಕಳಸ್ಕರ, ಸನಾತನದ ಸಾಧಕ ಡಾ. ವೀರೇಂದ್ರ ತಾವಡೆ, ವಿಕ್ರಮ ಭಾವೆ ಮತ್ತು ವಕೀಲ ಸಂಜೀವ ಪುನಾಳೆಕರ ಇವರನ್ನು ಬಂಧಿಸಲಾಯಿತು. ಇದಾದ ನಂತರ ಇಲ್ಲಿಯವರೆಗೆ ಅಂದರೆ 10 ವರ್ಷಗಳಿಗೂ ಹೆಚ್ಚು ಸಮಯದಿಂದ ಈ ಪ್ರಕರಣ ಬಾಕಿ ಉಳಿದಿತ್ತು. ಪ್ರಕರಣದ ಆಲಿಕೆಯು ವಿಶೇಷ ನ್ಯಾಯಾಧೀಶ ಪಿ.ಪಿ. ಜಾಧವ್ ಅವರ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈಗ, ಇಷ್ಟು ಸುದೀರ್ಘ ಸಮಯದ ನಂತರ, ಈ ಬಹುಚರ್ಚಿತ ಪ್ರಕರಣದ ತೀರ್ಪು ಅಂತಿಮವಾಗಿ ಮೇ 10, 2024 ರಂದು ಬರುವ ಸಾಧ್ಯತೆಯಿದೆ.