Muslims Reservation : ಮುಸಲ್ಮಾನರಿಗೆ ‘ಪೂರ್ಣ’ ಮೀಸಲಾತಿ ಸಿಗಬೇಕು! – ಲಾಲು ಪ್ರಸಾದ್ ಯಾದವ್

ಧರ್ಮದ ಆಧಾರದ ಮೇಲೆ ಮೀಸಲಾತಿ ಸರಿಯಲ್ಲ ! – ವಿರೋಧ ಹೆಚ್ಚಿದ ಬಳಿಕ ಸ್ಪಷ್ಟೀಕರಣ

ಪಾಟಲೀಪುತ್ರ / ದೆಹಲಿ – ರಾಷ್ಟ್ರೀಯ ಜನತಾ ದಳದ ಹಿರಿಯ ನಾಯಕ ಲಾಲು ಪ್ರಸಾದ್ ಯಾದವ್ ಅವರು ಮೇ 7 ರ ಬೆಳಿಗ್ಗೆ ಮುಸಲ್ಮಾನರ ಮೀಸಲಾತಿ ಕುರಿತು ದೊಡ್ಡ ಹೇಳಿಕೆ ನೀಡಿದರು. ಮುಸಲ್ಮಾನರಿಗೆ ಪೂರ್ಣ ಮೀಸಲಾತಿ ಸಿಗಬೇಕು ಎಂದಿದ್ದಾರೆ. ಪ್ರಧಾನಿ ಮೋದಿಯವರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ನಾಶಮಾಡಲು ಬಯಸುತ್ತಿದ್ದಾರೆ ಎಂಬುದು ಜನರಿಗೆ ಅರ್ಥವಾಗಿದೆ. ಅವರ ಈ ಹೇಳಿಕೆಗೆ ವಿರೋಧ ವ್ಯಕ್ತವಾದ ಮೇಲೆ ಕೆಲವೇ ಗಂಟೆಗಳ ನಂತರ ಹಿಂದೆ ಸರಿದು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದಿಲ್ಲ, ಸಾಮಾಜಿಕ ನೆಲೆಯಲ್ಲಿ ಮೀಸಲಾತಿ ನೀಡುವುದಾಗಿ ಹೇಳಿದ್ದಾರೆ. ಮಂಡಲ್ ಆಯೋಗದ ಶಿಫಾರಸುಗಳನ್ನು ನಾನೇ ಜಾರಿಗೆ ತಂದಿದ್ದೆ ಎಂದಿದ್ದಾರೆ.

ಮುಸಲ್ಮಾನರಿಗೆ ಪೂರ್ಣ ಮೀಸಲಾತಿ ಸಿಗಬೇಕು ಎಂಬ ಯಾದವ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಮಾತನಾಡಿ ‘ಇಂಡಿ’ ಮೈತ್ರಿಕೂಟವು ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸಿ ಮುಸಲ್ಮಾನರಿಗೆ ಮೀಸಲಾತಿ ನೀಡುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಲಾಲು ಪ್ರಸಾದ್ ಯಾದವ್ ಅವರ ‘ಪೂರ್ಣ ಮೀಸಲಾತಿ’ ಹೇಳಿಕೆಯ ಅರ್ಥ ಅನುಸೂಚಿತ ಜಾತಿ- ಉಪಜಾತಿ ಇವುಗಳ ಪಾಲಿಗೆ ಬರುವ ಎಲ್ಲಾ ಮೀಸಲಾತಿಯನ್ನು ಮುಸಲ್ಮಾನರಿಗೆ ನೀಡಲಾಗುವುದು ಎಂದಿದ್ದಾರೆ.

ಸಂಪಾದಕೀಯ ನಿಲುವು

ತಮ್ಮ ಸ್ವಂತ ಹೇಳಿಕೆಗಳಿಗೆ ನಿಷ್ಠರಾಗಿರದ ರಾಜಕೀಯ ನಾಯಕರು ದೇಶ ಮತ್ತು ಜನರಿಗೆ ನಿಷ್ಠರಾಗಿರಬಹುದೇ?

ತಮ್ಮ ಇಡೀ ಜೀವನವನ್ನು ಅಲ್ಪಸಂಖ್ಯಾತರ ಓಲೈಕೆಯಲ್ಲಿ ಕಳೆದಂತೆ, ಈಗ ಇಂತವರು ಮತ್ತೆ ಆಯ್ಕೆಯಾದರೆ, ‘ಹಿಂದೂಗಳಿಗೆ ಕಾನೂನು ಮತ್ತು ಮುಸಲ್ಮಾನರಿಗೆ ಲಾಭ’ ಎಂಬ ಅತ್ಯಂತ ಭಯಾನಕ ಧೋರಣೆಯನ್ನು ಯೋಜಿಸುತ್ತಾರೆ, ಎಂಬುದನ್ನು ತಿಳಿದುಕೊಳ್ಳಿ !