ಭಾರತೀಯ ಮೂಲದ ಅಮೆರಿಕದ ಸಂಸದರ ಕಾರ್ಯಾಲಯ ಧ್ವಂಸ !

ವಾಷಿಂಗ್ಟನ್ – ಅಮೆರಿಕದಲ್ಲಿರುವ ಭಾರತೀಯ ಮೂಲದ ಸಂಸದರಾದ ಶ್ರೀ ಠಾಣೆದಾರ್ ಅವರ ಡೆಟ್ರಾಯಿಟ್ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿರುವ ಪೋಸ್ಟ್‌ನಲ್ಲಿ ಠಾಣೆದಾರ್ ಈ ಮಾಹಿತಿ ನೀಡಿದ್ದಾರೆ. ಧ್ವಂಸಗೊಂಡ ಕಚೇರಿಯ ಛಾಯಾಚಿತ್ರಗಳನ್ನು ಅವರು ಪ್ರಸಾರ ಮಾಡಿದ್ದಾರೆ. ಈ ಛಾಯಾಚಿತ್ರಗಳಲ್ಲಿ, ಕಚೇರಿಯ ಗೋಡೆಗಳ ಮೇಲೆ ಪ್ಯಾಲೆಸ್ತೀನ್ ಸ್ವಾತಂತ್ರ್ಯದ ಘೋಷಣೆಗಳನ್ನು ಬರೆದಿರುವುದು ಕಂಡುಬಂದಿದೆ. (ಇದರಿಂದ ಕಚೇರಿಯನ್ನು ಧ್ವಂಸ ಮಾಡಿರುವವರು ಯಾರು, ಎಂಬುದು ಪ್ರಜ್ಞಾವಂತರಿಗೆ ಗೊತ್ತಾಗುತ್ತದೆ !- ಸಂಪಾದಕರು) ಈ ಪ್ರಕರಣದಲ್ಲಿ ಠಾಣೆದಾರರ ಕಚೇರಿಯ ವಕ್ತಾರರು ಪೊಲೀಸರಿಗೆ ದೂರು ನೀಡಿದ್ದಾರೆ.

ಠಾಣೆದಾರ್ ಅವರು ಕೆಲ ದಿನಗಳ ಹಿಂದೆ ಇಸ್ರೇಲ್-ಹಮಾಸ್ ಯುದ್ಧದಲ್ಲಿ ಇಸ್ರೇಲ್ ಅನ್ನು ಬೆಂಬಲಿಸಿದ್ದರು. ಹಾಗೆಯೇ ಹಮಾಸ್ ಅನಾಗರಿಕ ಭಯೋತ್ಪಾದಕ ಸಂಘಟನೆ ಎಂದೂ ಹೇಳಿದ್ದರು. ಆದ್ದರಿಂದ ಠಾಣೆದಾರ್ ಪ್ಯಾಲೆಸ್ತೀನ್ ಬೆಂಬಲಿಗರ ಗುರಿಗೆ ಒಳಗಾಗಿದ್ದಾರೆ. ಅವರ ಕಚೇರಿಯ ಮೇಲಿನ ದಾಳಿಯನ್ನು ಪ್ಯಾಲೆಸ್ತೀನ್ ಬೆಂಬಲಿಗರು ಮಾಡಿದ್ದಾರೆ ಎಂದು ನಂಬಲಾಗಿದೆ.

ಸಂಪಾದಕೀಯ ನಿಲುವು

ಅಮೆರಿಕದಲ್ಲಿ ಅಸುರಕ್ಷಿತ ಭಾರತೀಯರು! ಭಾರತೀಯ ಮೂಲದ ಸಂಸದರೇ ಅಸುರಕ್ಷಿತರಾಗಿರುವಾಗ ಸಾಮಾನ್ಯ ಹಿಂದೂಗಳ ಸ್ಥಿತಿ ಹೇಗಿರಬಹುದು ಎಂಬ ವಿಚಾರ ಮಾಡದಿರುವುದೇ ಉತ್ತಮ !