ವಾಜಪೇಯಿ ಕಾಲದಿಂದ ಮೋದಿ ಕಾಲದವರೆಗೆ ಉಳಿದಿರುವ ಏಕೈಕ ಅಂತರಾಷ್ಟ್ರೀಯ ರಾಷ್ಟ್ರ ಪ್ರಮುಖ !
ಮಾಸ್ಕೋ (ರಷ್ಯಾ) – ವ್ಲಾದಿಮಿರ್ ಪುಟಿನ್ ಇವರು ಐದನೆಯ ಬಾರಿ ರಷ್ಯಾದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಮಾಸ್ಕೋದಲ್ಲಿನ ‘ಗ್ರಾಂಡ್ ಕ್ರೇಮಲಿನ್ ಪ್ಯಾಲೇಸ್’ ನಲ್ಲಿ ಮೇ ೭ ರಂದು ಭಾರತೀಯ ಸಮಯದ ಪ್ರಕಾರ ಮಧ್ಯಾಹ್ನ 2:30 ಗಂಟೆಗೆ ಅವರ ಪ್ರಮಾಣವಚನ ಸಮಾರಂಭ ನಡೆಯಿತು. ಈ ಸಮಾರಂಭ ಸುಮಾರು ೧ ಗಂಟೆ ನಡೆಯಿತು. ಇದರಿಂದ ಈಗ ಮುಂದಿನ ೬ ವರ್ಷಗಳ ಕಾಲ ಅವರು ಈ ಸ್ಥಾನದಲ್ಲಿ ಇರುವರು. ರಷ್ಯಾದಲ್ಲಿ ಮಾರ್ಚ್ ತಿಂಗಳಿಗೆ ನಡೆದಿರುವ ಮತದಾನದಲ್ಲಿ ಪುಟಿನ್ ಇವರಿಗೆ ಶೇಕಡ ೮೮ ರಷ್ಟು ಮತಗಳ ದೊರೆತಿತ್ತು. ಯುಕ್ರೇನ್ ನೊಂದಿಗೆ ಸಾರಿರುವ ಯುದ್ಧದಿಂದ ಪುಟಿನ್ ಇವರ ಪ್ರಮಾಣವಚನ ಪಶ್ಚಿಮ ದೇಶಗಳು ಬಹಿಷ್ಕರಿಸಿದ್ದವು.
ಪುಟಿನ್ ಇವರು ೨೦೦೦ ರಲ್ಲಿ ಮೊದಲ ಬಾರಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಅದರ ನಂತರ ೨೦೦೪, ೨೦೧೨, ೨೦೧೮ ರಲ್ಲಿ ಕೂಡ ರಾಷ್ಟ್ರಪತಿಯಾದರು. ಈ ಹಿಂದಿನ ಚುನಾವಣೆಯಲ್ಲಿ ಅವರಿಗೆ ಶೇಕಡ ೭೭ ರಷ್ಟು ಮತಗಳು ದೊರೆತಿದ್ದವು. ಇದರ ಅರ್ಥ ಈಗ ರಷ್ಯಾದಲ್ಲಿ ಅವರ ಜನಪ್ರಿಯತೆ ಇನ್ನೂ ಹೆಚ್ಚಾಗಿದೆ. ೨೦೧೯ ರಲ್ಲಿ ಪ್ರಮಾಣವಚನ ಸಮಾರಂಭದಲ್ಲಿ ಜರ್ಮನಿಯ ಮಾಜಿ ಚಾನ್ಸಲರ್ ಗೆರಹಾರ್ಡ್ ಶ್ರಾಡರ್ ಉಪಸ್ಥಿತರಿದ್ದರು. ಪುಟಿನ್ ಇವರ ಈ ಸುಧೀರ್ಘ ಕಾರ್ಯಕಾಲದಿಂದ ಅವರು ವಾಜಪೇಯಿ ಯುಗದಿಂದ ಮೋದಿ ಯುಗದವರೆಗೆ ಉಳಿದಿರುವ ಬಹುಷಃ ಏಕೈಕ ಅಂತರಾಷ್ಟ್ರೀಯ ರಾಷ್ಟ್ರ ಪ್ರಮುಖರಾಗಿರುವರು.