ಷರಿಯತ್ ಕಾನೂನನ್ನು ಜಾರಿಗೆ ತರದಿದ್ದರೆ, 7 ಶಾಲೆಗಳನ್ನು ಬಾಂಬ್ ನಿಂದ ಸ್ಪೋಟಿಸುವೆವು !

ಕರ್ಣಾವತಿ (ಅಹಮದಾಬಾದ) ಇಲ್ಲಿನ ಶಾಲೆಗಳಿಗೆ ಬೆದರಿಕೆ ಪತ್ರ !

ಕರ್ಣಾವತಿ (ಗುಜರಾತ) – ಕೆಲವು ದಿನಗಳ ಹಿಂದೆ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ 100 ಕ್ಕೂ ಹೆಚ್ಚು ಶಾಲೆಗಳನ್ನು ಸ್ಫೋಟಿಸುವ ಬೆದರಿಕೆ ಬಂದನಂತರ, ಈಗ ಇಂತಹದೇ ಬೆದರಿಕೆ ಬಂದಿದೆ. ಷರಿಯತ್ ಕಾನೂನು ಜಾರಿಗೊಳಿಸದಿದ್ದರೆ, ನಗರದ 7 ಶಾಲೆಗಳನ್ನು ಬಾಂಬ್ ನಿಂದ ಸ್ಪೋಟಿಸುತ್ತೇವೆ ಎಂದು ಈ 7 ಶಾಲೆಗಳಿಗೆ ಇ-ಮೇಲ್ ಮೂಲಕ ಬೆದರಿಕೆ ಪತ್ರಗಳನ್ನು ಕಳಿಸಿದ್ದಾರೆ.

ಅಹಮದಾಬಾದ ಕ್ರೈಂ ಬ್ರಾಂಚ್ ಪೊಲೀಸ್ ಉಪ ಆಯುಕ್ತರಾಗಿರುವ ಅಜಿತ ರಾಜಿಯಾನ ಇವರು ಈ ಸಂದರ್ಭದಲ್ಲಿ ಮಾತನಾಡಿ, ಹೊರಗಿನ ದೇಶದಿಂದ ಈ ಇ-ಮೇಲ್‌ ಬಂದಿದೆಯೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಇದರ ತನಿಖೆ ನಡೆಸಲಾಗುತ್ತಿದೆ. ಇದನ್ನು ಹೊರತುಪಡಿಸಿ ಭಾರತದಿಂದ ಯಾರಾದರೂ ಈ ರೀತಿ ಇ- ಮೇಲ ಮೂಲಕ ಏನಾದರೂ ಕಳುಹಿಸುತ್ತಿದ್ದರೆ, ಅದರ ಕಡೆಗೂ ನಾವು ನಿಗಾ ವಹಿಸಿದ್ದೇವೆ ಎಂದು ಹೇಳಿದ್ದಾರೆ.