ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ ಇವನ ಹತ್ಯೆ ಪ್ರಕರಣ; ೩ ಭಾರತೀಯರ ಬಂಧನ
ಓಟಾವಾ (ಕೆನಡಾ) – ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯ ಪ್ರಕರಣದಲ್ಲಿ ಕೆನಡಾದ ಪೊಲೀಸರು ಮೂರು ಭಾರತೀಯರನ್ನು ಎಡ್ಮಂಟನ್ ನಗರದಿಂದ ಬಂಧಿಸಿದ್ದಾರೆ. ಕರಣ ಬ್ರಾರ್, ಕರಣಪ್ರೀತ ಸಿಂಹ ಮತ್ತು ಕಮಲಪ್ರೀತ ಸಿಂಹ ಎಂದು ಗುರುತಿಸಲಾಗಿದ್ದು ಮೂವರು ವಯಸ್ಸು ಕೂಡ ಸುಮಾರು ೨೦ ರಿಂದ ೩೦ ವರ್ಷ ಇದೆ. ‘ಉಳಿದ ಆರೋಪಿಗಳನ್ನು ಕೂಡ ಶೀಘ್ರದಲ್ಲೇ ಬಂದಿಸಲಾಗುವುದೆಂದು’, ಪೊಲೀಸರು ಹೇಳಿದರು.
೧. ಪೊಲೀಸರ ಪ್ರಕಾರ ಅನೇಕ ತಿಂಗಳಿಂದ ಅವರ ಮೇಲೆ ನಿಗಾವಹಿಸಿದ್ದೇವೆ. ಭಾರತವು ಇವರಿಗೆ ನಿಜ್ಜರ ಹತ್ಯೆಯ ಜವಾಬ್ದಾರಿ ನೀಡಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.
೨. ಈ ಬಂಧಿತ ಆರೋಪಿಯ ನಂಟು ಭಾರತದಲ್ಲಿನ ರೌಡಿ ಲಾರೆನ್ಸ್ ಬಿಶ್ನೋಯಿ ತಂಡದ ಜೊತೆಗೆ ಇರುವುದಾಗಿ ಹೇಳಲಾಗಿದೆ. ೨೦೨೧ ರಲ್ಲಿ ಈ ಮೂವರು ತಾತ್ಕಾಲಿಕ ವೀಸಾ ಪಡೆದು ಕೆನಡಾಗೆ ಬಂದಿದ್ದರು.
೩. ಕೆನಡಾದ ಪೊಲೀಸರ ಆರೋಪದ ಪ್ರಕಾರ ನಿಜ್ಜರ ಹತ್ಯೆಯಲ್ಲಿ ಮೂರು ಆರೋಪಿಗಳು ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದರಲ್ಲಿ ಒಬ್ಬನ ಮೇಲೆ ನಿಜ್ಜರನ ಸ್ಥಳ ಶೋಧಿಸುವ ಹೊಣೆ ಇತ್ತು. ಇನ್ನೊಬ್ಬ ಆರೋಪಿ ವಾಹನ ಚಾಲಕನಾಗಿದ್ದನು ಮತ್ತು ಮೂರನೇಯವನು ನಿಜ್ಜರನ ಮೇಲೆ ಗುಂಡು ಹಾರಿಸಿದನು.
೪. ಶಂಕಿತ ಆರೋಪಿಯ ಬಂಧನದ ನಂತರ ಕೆನಡಾದ ಸಾರ್ವಜನಿಕ ರಕ್ಷಣಾ ಸಚಿವ ಡಾಮಿನಿಕ್ ಲೆಬ್ಲಾಕ್ ಇವರು, ನನಗೆ ಕೆನಡಾದ ರಕ್ಷಣಾ ವ್ಯವಸ್ಥೆ ಮತ್ತು ಪೊಲೀಸರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಪೊಲೀಸರು ನಿಜ್ಜರ ಹತ್ಯೆಯ ಪ್ರಕರಣ ಬಹಳ ಗಂಭೀರವಾಗಿ ಪರಿಗಣಿಸಿದೆ. ಹತ್ಯೆಗೆ ಭಾರತದ ಸಂಬಂಧ ಇದೆ ಅಥವಾ ಇಲ್ಲ ? ಇದರ ಉತ್ತರ ಪೊಲೀಸರೇ ನೀಡಬಹುದು ಎಂದು ಹೇಳಿದ್ದಾರೆ.
೫. ಜೂನ್ ೧೮, ೨೦೨೩ ರಂದು ಸಂಜೆ ಸರೆ ನಗರದಲ್ಲಿನ ಗುರುದ್ವಾರದಿಂದ ಹೊರಗೆ ಬರುವಾಗ ನಿಜ್ಜರಗೆ ಗುಂಡು ಹಾರಿಸಿ ಹತ್ಯೆ ಮಾಡಲಾಯಿತು. ಅದರ ನಂತರ ಸಪ್ಟೆಂಬರ್ ೧೮ ರಂದು ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ ಇವರು ನಿಜ್ಜರ ಹತ್ಯೆಯಲ್ಲಿ ಭಾರತ ಸರಕಾರದ ಕೈವಾಡ ಇರುವುದಾಗಿ ಆರೋಪಿಸಿದ್ದರು, ಅದನ್ನು ಭಾರತವು ತಳ್ಳಿ ಹಾಕಿತ್ತು. ಈ ಹತ್ಯೆಯಲ್ಲಿ ಭಾರತದ ಸಹಭಾಗ ಇರುವುದಕ್ಕೆ ಸಾಕ್ಷಿ ನೀಡುವೆವು ಎಂದು ಕೆನಡಾ ಹೇಳಿತ್ತು ಆದರೆ ಇಲ್ಲಿಯವರೆಗೆ ಅದು ನೀಡಿಲ್ಲ.