ಶಿಕ್ಷಕರಿಗೆ ಕೇಳಿ, ನೀವು ಭಾರತದಲ್ಲಿ ಶಾಲೆ ನಡೆಸಬೇಕೇ ಅಥವಾ ವೆಸ್ಟ್ ಇಂಡೀಸ್ ನಲ್ಲಿ ? – ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಎಚ್ಚರಿಕೆ

ಇಂದೋರ್ (ಮಧ್ಯ ಪ್ರದೇಶ್) ಹಿಂದೂ ವಿದ್ಯಾರ್ಥಿಗಳಿಗೆ ಕುಂಕುಮ ಇಟ್ಟುಕೊಳ್ಳಲು ನಿಷೇಧ !

ಇಂದೋರ್(ಮಧ್ಯಪ್ರದೇಶ) – ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಕಾರ್ಯಕ್ರಮ ನಡೆಯುತ್ತಿರುವಾಗ ಓರ್ವ ಮಹಿಳೆಯು ಬಂದು ಒಂದು ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಕುಂಕುಮ ಇಟ್ಟುಕೊಳ್ಳಲು ಮತ್ತು ಮಣಿಕಟ್ಟಿಗೆ ದಾರ ಕಟ್ಟಲು ಬಿಡುತ್ತಿಲ್ಲ, ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ಶಾಸ್ತ್ರಿ ಅವರು, ಭಾರತದಲ್ಲಿ ಪ್ರತಿಯೊಬ್ಬರಿಗೂ ಅವರ ಧರ್ಮ ಆಚರಿಸುವ ಅಧಿಕಾರವಿದೆ. ಭಾರತವು ಸಂವಿಧಾನದ ಪ್ರಕಾರ ನಡೆಯುತ್ತದೆ. ಮಾತೃಭೂಮಿ ಶಾಲೆಯವರಿಗೆ ಹೆಚ್ಚಾಗಿ ಇದು ಸಮ್ಮತವಿಲ್ಲ. ಶಾಲೆಯಲ್ಲಿನ ಶಿಕ್ಷಕರಿಗೆ ಕೇಳಿ, ನೀವು ಭಾರತದಲ್ಲಿ ಶಾಲೆಯನ್ನು ನಡೆಸುತ್ತಿರುವಿರೋ ಅಥವಾ ವೆಸ್ಟ್ ಇಂಡೀಸ್ ನಲ್ಲಿ ? ಎಂದು ಹೇಳುತ್ತಾ ಶಾಲೆಯ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳುವಂತೆ ಅವರು ಹಿಂದುಗಳಿಗೆ ಕರೆ ನೀಡಿದರು. ಅದರ ನಂತರ ಹಿಂದೂ ಸಂಘಟನೆಯ ಕೆಲ ಕಾರ್ಯಕರ್ತರು ಶಾಲೆಗೆ ಹೋಗಿ ಹನುಮಾನ ಚಾಲಿಸಾ ಪಠಿಸಿದರು.

ಇಂದೂರಿನ ಸ್ಕ್ರಿಮ ಕ್ರಮಾಂಕ ೭೮ ನಲ್ಲಿರುವ ಮಾತೃಭೂಮಿ ಶಾಲೆಯ ಮಹಿಳಾ ಶಿಕ್ಷಕಿ ಸಂಧ್ಯಾ ಎಂಬವರು ಕುಂಕುಮ ಹಚ್ಚಿಕೊಂಡು ಮತ್ತು ಮಣಿಕಟ್ಟಿಗೆ ದಾರ ಕಟ್ಟಿಕೊಂಡು ಬಂದ ಓರ್ವ ವಿದ್ಯಾರ್ಥಿಯನ್ನು ಕೆಟ್ಟದಾಗಿ ಬೈದಿದ್ದರು. ಶಾಲೆಯಲ್ಲಿನ ಮಕ್ಕಳು ಈ ವಿಷಯವನ್ನು ಆ ವಿದ್ಯಾರ್ಥಿಯ ಕುಟುಂಬದವರಿಗೆ ತಿಳಿಸಿದರು. ಇದರಿಂದ ಅಸಮಾಧಾನಗೊಂಡ ಓರ್ವ ಪೋಷಕರು ನಗರದಲ್ಲಿ ನಡೆಯುತ್ತಿರುವ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಕಾರ್ಯಕ್ರಮಕ್ಕೆ ತೆರಳಿ ಈ ವಿಷಯ ತಿಳಿಸಿದರು.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಇಂತಹ ಘಟನೆ ಘಟಿಸಬಾರದೆಂದು ಹಿಂದುಗಳಿಗೆ ಅನಿಸುತ್ತದೆ !