ಹರಿನಾರಾಯಣನಿಗೆ ಕೊಲೆ ಬೆದರಿಕೆ !

ಇಂದೂರ್(ಮಧ್ಯಪ್ರದೇಶ) – ಇಂದೂರ್ ನಗರದ ಖಜರಾನಾ ಪೊಲೀಸ್ ಠಾಣೆಯ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ೭ ಜನರು ಹಿಂದೂ ಧರ್ಮ ಸ್ವೀಕರಿಸಿದ್ದರು. ಆ ಬಳಿಕ ಅವರಲ್ಲಿ ಒಬ್ಬನಾದ ಹರಿನಾರಾಯಣ(ಹಳೆಯ ಹೆಸರು ಹೈದರ್) ಎಂಬ ತರುಣನ ಮನೆಯ ಮೇಲೆ ಅಪರಿಚಿತರು ಕಲ್ಲು ತೂರಿದ್ದಾರೆ. ಈ ಘಟನೆಯಲ್ಲಿ ಯುವಕನ ಮನೆಯ ಕಿಟಕಿ ಗಾಜುಗಳು ಒಡೆದಿವೆ. ಹರಿನಾರಾಯಣನಿಗೆ ಕೊಲೆಯ ಬೆದರಿಕೆಗಳು ಬರುತ್ತಿವೆ. ಇದರಿಂದ ಭಯಭೀತನಾಗಿರುವ ಹರಿನಾರಾಯಣನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ರಕ್ಷಣೆಯನ್ನು ಕೋರಿದ್ದಾನೆ.
ಈ ದೂರಿನ ಬಗ್ಗೆ ಯಾವುದೇ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಈ ಪ್ರಕರಣದಲ್ಲಿ ವಿಶ್ವಹಿಂದೂ ಪರಿಷತ್‌ನ ಪ್ರಾಂತೀಯ ಸಂಪರ್ಕ ಪ್ರಮುಖ ಅಧಿಕಾರಿ ಸಂತೋಷ ಶರ್ಮಾ ಮಾತನಾಡಿ, ಈ ಬೆದರಿಕೆಯ ಬಗ್ಗೆ ಮಾತನಾಡುವುದಾದರೆ, ಈ ಬೆದರಿಕೆ ಮಹಾರಾಷ್ಟ್ರದ ಇಸ್ಲಾಮಿಕ್ ಸಂಘಟನೆಯಿಂದ ಬಂದಿದೆ. ಅಲ್ಲಿಂದಲೇ ಬೆದರಿಕೆ ಪತ್ರ ಕಳುಹಿಸಲಾಗಿದೆ. ಇದರಲ್ಲಿ ಹರಿನಾರಾಯಣನನ್ನು ’ಕಾಫೀರ’ ಎಂದು ಕರೆಯಲಾಗಿದೆ. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಮತ್ತು ಮಾಡುತ್ತಿರುವೆವು. ಜನರನ್ನು ಹಿಂದೂ ಧರ್ಮಕ್ಕೆ ಪುನಃ ತರುವ ಕಾರ್ಯ ನಡೆಯುತ್ತಿರುವುದು. ಬೆದರಿಕೆ ಹಾಕುವ ಸಂಘಟನೆಗಳ ಮೇಲೆ ನಿಷೇಧ ಹೇರಬೇಕು ಎಂದು ಶರ್ಮಾ ಕರೆ ನೀಡಿದರು.
ಸಂಪಾದಕೀಯ ನಿಲುವುಮಧ್ಯಪ್ರದೇಶದಲ್ಲಿ ಭಾಜಪ ಸರ್ಕಾರ ಇರುವಾಗ ಇಂತಹ ಘಟನೆ ನಡೆಯಬಾರದೆಂದು ಹಿಂದೂಗಳಿಗೆ ಅನಿಸುವುದು ! |
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಶಾಮಲಿ (ಉತ್ತರಪ್ರದೇಶ) ಇಲ್ಲಿನ ಆಯುಷ ಮಲಿಕನಿಂದ ಇಸ್ಲಾಂ ತೊರೆದು ಪುನಃ ಹಿಂದೂ ಧರ್ಮ ಸ್ವೀಕಾರ ! : Shamili Love Jihad
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!