ಮುಸ್ಲಿಮರ ಪವಿತ್ರ ನಗರಗಳಾದ ಮೆಕ್ಕಾ ಮತ್ತು ಮದೀನಾದಲ್ಲಿ ಪ್ರವಾಹ !

100 ವರ್ಷಗಳ ದಾಖಲೆ ಮುರಿದ ಮಳೆ !

ರಿಯಾಧ (ಸೌದಿ ಅರೇಬಿಯಾ) – ಹವಾಮಾನ ಬದಲಾವಣೆಯಿಂದಾಗಿ ಮರುಭೂಮಿ ದೇಶವೆಂದು ಪರಿಗಣಿಸಲಾದ ಸೌದಿ ಅರೇಬಿಯಾದಾದ್ಯಂತ ಪ್ರವಾಹದಿಂದ ಹಾಹಾಕಾರವೆದ್ದಿದೆ. ಸೌದಿ ಅರೇಬಿಯಾದಲ್ಲಿ ಕಳೆದ 7 ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ ಇಲ್ಲಿನ ನದಿಗಳು ಪ್ರವಾಹವಾಗಿವೆ ಎನ್ನಲಾಗಿದೆ. ಇದರಿಂದ ಕಳೆದ 100 ವರ್ಷಗಳ ಮಳೆಯ ದಾಖಲೆ ಮುರಿದಿದೆ ಎಂದೂ ಹೇಳಲಾಗುತ್ತಿದೆ. ಮುಸ್ಲಿಮರ ಪವಿತ್ರವಾದ ಮೆಕ್ಕಾ ಮತ್ತು ಮದೀನಾ ನಗರಗಳೂ ಜಲಾವೃತಗೊಂಡಿವೆ. ವಿವಿಧ ನಗರಗಳಲ್ಲಿನ ರಸ್ತೆಗಳು ನದಿಗಳ ರೂಪವನ್ನು ಪಡೆದುಕೊಂಡವು. ಇದೀಗ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲೂ ಬಿರುಗಾಳಿ ಸಹಿತ ಮಳೆಯಾಗಬಹುದು ಎಂದು ಹೇಳಲಾಗುತ್ತಿದೆ.

ಸೌದಿ ಅರೇಬಿಯಾದ ನಗರಗಳಲ್ಲಿ ಪ್ರವಾಹದಿಂದಾಗಿ ಜನರು ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಪ್ರವಾಹದಲ್ಲಿ ಕುರಿಗಳು ಕೊಚ್ಚಿ ಹೋಗಿರುವ ಚಿತ್ರಣವೂ ಹೊರಬಿದ್ದಿದೆ ಎಂದು ಜನರು ತಿಳಿಸಿದ್ದಾರೆ.