ಕರಾಚಿ (ಪಾಕಿಸ್ತಾನ) – ಸಿಂಧ್ ಫ್ರೀಡಂ ಮೂವ್ಮೆಂಟ್ ನ ಅಧ್ಯಕ್ಷ ಹಾಗೂ ಸಿಂಧ್ ನ ರಾಷ್ಟ್ರವಾದಿ ನಾಯಕ ಸೋಹೈಲ್ ಆಬ್ರೋ ಇವರು ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯರ ಬಲವಂತದ ಮತಾಂತರವನ್ನು ವಿರೋಧಿಸಿದ್ದಾರೆ. ಎರಡು ವರ್ಷಗಳ ಹಿಂದೆ ಸಿಂಧ್ ನಿಂದ ನಾಪತ್ತೆ ಆಗಿರುವ ಪ್ರಿಯ ಕುಮಾರಿ ಈ ಹಿಂದೂ ಹುಡುಗಿಯ ಸುರಕ್ಷಿತ ಬಿಡುಗಡೆಗಾಗಿ ಹಸ್ತಕ್ಷೇಪ ಮಾಡಲು ಇವರು ವಿಶ್ವ ಸಂಸ್ಥೆಯ ಮಾನವಾಧಿಕಾರ ಸಂಘಟನೆಗೆ ಕರೆ ನೀಡಿದ್ದರು.
🎯Hindu girls of Pakistan forcibly converted to Islam – Sindhi Nationalist leaders demand for an intervention by Human Rights organizations!
✍️ Is this “Love J!h@d” against #Hindus in #Pakistan not visible to International Human Rights Commissions and Leftist Media outlets ?… pic.twitter.com/kOG0lqKmIb
— Sanatan Prabhat (@SanatanPrabhat) May 1, 2024
ಪಾಕಿಸ್ತಾನದಲ್ಲಿನ ಭಯೋತ್ಪಾದಕರ ಪ್ರಭಾವದಿಂದ ಸಿಂಧ್ ನ ಹಿಂದೂ ಹುಡುಗಿಯರನ್ನು ಬಲವಂತವಾಗಿ ಮತಾಂತರಗೊಳಿಸಿ ಅವರನ್ನು ಮುಸಲ್ಮಾನ ಪುರುಷರ ಜೊತೆಗೆ ವಿವಾಹ ಮಾಡಿಕೊಡುತ್ತಾರೆ. ಮಿಯಾ ಮಿಥು ಇವರಂತಹ ಭಯೋತ್ಪಾದಕರು ಹಿಂದೂ ಹುಡುಗಿಯರ ಮೇಲೆ ಬಹಿರಂಗವಾಗಿಯೇ ಅತ್ಯಾಚಾರ ಮಾಡುತ್ತಿದ್ದು ಅವರನ್ನು ಬಲವಂತವಾಗಿ ಮತಾಂತರಗೊಳಿಸುತ್ತಾರೆ ಮತ್ತು ಅವರನ್ನು ಮುಸಲ್ಮಾನ ಪುರುಷರ ಜೊತೆಗೆ ವಿವಾಹ ಮಾಡುತ್ತಿದ್ದಾರೆ, ಎಂದು ಆಬ್ರೋ ಇವರು ಆರೋಪಿಸಿದ್ದಾರೆ. ಇಂತಹ ದೌರ್ಜನ್ಯದ ಕೃತ್ಯದ ಆರೋಪ ಇರುವ ವ್ಯಕ್ತಿಯ ಪರವಾಗಿರುವ ನ್ಯಾಯ ವ್ಯವಸ್ಥೆಯನ್ನು ಕೂಡ ಟೀಕಿಸಿದ್ದಾರೆ ಮತ್ತು ಪ್ರಿಯಾ ಕುಮಾರಿ ಅಂತಹ ಸಂತ್ರಸ್ತ ಹಿಂದೂ ಹುಡುಗಿಯರಿಗೆ ನ್ಯಾಯ ಕೊಡಿಸಲು ಆಗ್ರಹಿಸಿದ್ದಾರೆ .
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿನ ಹಿಂದೂಗಳನ್ನು ನಾಶ ಮಾಡುತ್ತಿರುವ ಲವ್ ಜಿಹಾದ್ ಅಂತರಾಷ್ಟ್ರೀಯ ಮಾನವಾಧಿಕಾರ ಆಯೋಗ ಮತ್ತು ಕಮ್ಯುನಿಸ್ಟ್ ರಿಗೆ ಮತ್ತು ಪ್ರಸಾರ ಮಾಧ್ಯಮಗಳಿಗೆ ಇದು ಕಾಣುವುದಿಲ್ಲವೇ ? |