ಭಾರತ ಸೆಮಿಕಂಡಕ್ಟರ್ ತಯಾರಿಸುತ್ತಿದೆ; ಪಾಕ್ ಭಯೋತ್ಪಾದಕರನ್ನು…! – ರಕ್ಷಣಾಸಚಿವ ರಾಜನಾಥ ಸಿಂಗ

ರಕ್ಷಣಾಸಚಿವ ರಾಜನಾಥ ಸಿಂಗ ಅವರಿಂದ ಕಾರ್ಗಿಲ ವಿಜಯ ದಿವಸದ ನಿಮಿತ್ತ ಪಾಕಿಸ್ತಾನದ ವಿರುದ್ಧ ತೀಕ್ಞ್ಣ ಟೀಕೆ

(ಸೆಮಿಕಂಡಕ್ಟರ್ ಎಂದರೆ ಗಣಕಯಂತ್ರ ಅಥವಾ ಇತರ ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಸಲಾಗುವ ಸೂಕ್ಷ್ಮ ಚಿಪ್)

ದ್ರಾಸ (ಲಡಾಖ) – ಭಾರತವು ಹೊಸ ಹೊಸ ಕಲ್ಪನೆಗಳ ಮಾರ್ಗಗಳನ್ನು ಹುಡುಕುತ್ತಿದ್ದರೆ, ಪಾಕಿಸ್ತಾನವು ಒಳನುಸುಳುವಿಕೆಯ ಮಾರ್ಗಗಳನ್ನು ಹುಡುಕುತ್ತಿದೆ. ಭಾರತವು ನೌಕೆಗಳ ರಚನೆ ಮಾಡುತ್ತಿದ್ದರೆ, ಪಾಕಿಸ್ತಾನವು ಭಯೋತ್ಪಾದಕರ ನಿರ್ಮಿತಿಯಲ್ಲಿ ತೊಡಗಿಸಿಕೊಂಡಿದೆ. ಭಾರತವು ‘ಸ್ಟಾರ್ಟ್‌ ಅಪ್ (ಹೊಸ ಪೀಳಿಗೆಯವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವ್ಯವಸಾಯನ್ನು ಪ್ರಾರಂಭಿಸುವುದು) ಇಕೋಸಿಸ್ಟಮ್’ ಅನ್ನು(ಒಂದು ನಿರ್ದಿಷ್ಟ ವಿಚಾರಸರಣಿಯನ್ನು ಯೋಜನಾಬದ್ಧವಾಗಿ ಬೆಳೆಸುವ ವ್ಯವಸ್ಥೆ) ನಿರ್ಮಿಸುತ್ತಿದ್ದರೆ, ಪಾಕಿಸ್ತಾನವು ಭಯೋತ್ಪಾದಕ ಇಕೋಸಿಸ್ಟಮನ್ನು ನಿರ್ಮಿಸುತ್ತಿದೆ. ಭಾರತವು ‘ಸೆಮಿಕಂಡಕ್ಟರ್’ ತಯಾರಿಸುತ್ತಿದ್ದರೆ, ಪಾಕಿಸ್ತಾನವು ಆತ್ಮಘಾತಕ ಭಯೋತ್ಪಾದಕರನ್ನು ಸೃಷ್ಟಿಸುತ್ತಿದೆ ಎಂದು ರಕ್ಷಣಾಸಚಿವ ರಾಜನಾಥ್ ಸಿಂಗ್ ಅವರು 27ನೇ ಕಾರ್ಗಿಲ್ ವಿಜಯ ದಿವಸದ ನಿಮಿತ್ತ ಇಲ್ಲಿಯ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಮೇಲೆ ಕಠೋರ ಟೀಕೆ ಮಾಡಿದ್ದಾರೆ.

ರಾಜನಾಥ ಸಿಂಗರವರು ತಮ್ಮ ಮಾತು ಮುಂದುವರಿಸಿ, ಭಾರತವು ಬಾಹ್ಯಾಕಾಶ ಯೋಜನೆಗಳಿಗೆ ಗುರುತಿಸಿಕೊಂಡಿದ್ದರೆ, ಪಾಕಿಸ್ತಾನವು ‘ ಪರೋಕ್ಷ ‘ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಭಾರತವು ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಕಳುಹಿಸುತ್ತಿದ್ದರೆ, ಪಾಕಿಸ್ತಾನವು ಇಂದಿಗೂ ಭಯೋತ್ಪಾದಕರನ್ನು ಗಡಿಯಾಚೆಗೆ ಕಳುಹಿಸುವ ಕೆಲಸ ಮಾಡುತ್ತಿದೆ. ಭಾರತವು ಜಗತ್ತಿಗೆ ಸಾಫ್ಟವೇರ್ ನೀಡುತ್ತಿದ್ದರೆ, ಪಾಕಿಸ್ತಾನವು ಜಗತ್ತಿಗೆ ‘ಸ್ಲೀಪರ್ ಸೆಲ್’ಗಳನ್ನು (ಗುಪ್ತವಾಗಿ ಭಯೋತ್ಪಾದಕರಿಗೆ ನೆರವಾಗುವ ಮತಾಂಧ ಮುಸಲ್ಮಾನರ ಸ್ಥಳೀಯ ಗುಂಪುಗಳು) ನೀಡುತ್ತಿದೆ. ಭಾರತವು ‘ಡೇಟಾ ಸೆಂಟರ್’ (ಮಾಹಿತಿ ಕೇಂದ್ರ) ನಿರ್ಮಿಸುತ್ತಿದ್ದರೆ, ಪಾಕಿಸ್ತಾನವು ‘ರೆಡಿಕಲ್ ಸೆಂಟರ್’ (ಹಿಂಸಾತ್ಮಕ ಅಥವಾ ತೀವ್ರಗಾಮಿ ಆಲೋಚನೆಗಳನ್ನು ಒಪ್ಪಿಕೊಂಡು, ಅವುಗಳನ್ನು ಈಡೇರಿಸಲು ಹಿಂಸೆಯೇ ಸರಿಯಾದ ಹಾದಿ ಎಂದು ನಂಬುವವರ ಕೇಂದ್ರ) ನಿರ್ಮಿಸುತ್ತಿದೆ. ಭಾರತವು ‘ಎಐ’ (ಕೃತಕ ಬುದ್ಧಿಮತ್ತೆ) ಮೂಲಕ ಜಗತ್ತನ್ನು ಜೋಡಿಸುತ್ತಿದ್ದರೆ, ಪಾಕಿಸ್ತಾನವು ಹವಾಲಾ ಮೂಲಕ ಭಯೋತ್ಪಾದನೆಯನ್ನು ಜೋಡಿಸುತ್ತಿದೆ. ನಮ್ಮ ಹಾದಿಗಳು ವಿಭಿನ್ನವಾಗಿವೆ ಎಂಬುದು ಸ್ಪಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನವು ತನ್ನ ಕೀಳು ಉದ್ದೇಶಗಳಿಂದ ನಮ್ಮ ಸಮೃದ್ಧಿಯ ಹಾದಿಯಲ್ಲಿ ಅಡೆತಡೆಗಳನ್ನು ಉಂಟುಮಾಡಿದರೆ, ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ನಮ್ಮ ಸಶಸ್ತ್ರ ಪಡೆಗಳು ಸದಾ ಸಜ್ಜಾಗಿವೆ ಎಂದು ಹೇಳಿದರು.

ಪಾಕಿಸ್ತಾನದ ಜೊತೆ ಯಾವುದೇ ಮಾತುಕತೆ ನಡೆಸುವುದಿಲ್ಲ !

ಪಾಕಿಸ್ತಾನದ ಜೊತೆ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದು ರಕ್ಷಣಾಸಚಿವ ರಾಜನಾಥ ಸಿಂಗ ಸ್ಪಷ್ಟಪಡಿಸಿದರು. ಒಂದು ವೇಳೆ ಮಾತುಕತೆ ನಡೆದರೂ, ಅದು ಕೇವಲ ಪಾಕಿಸ್ತಾನದ ವಶದಲ್ಲಿರುವ ಕಾಶ್ಮೀರದ ಕುರಿತು ಮಾತ್ರ ನಡೆಯಲಿದೆ, ಅದು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಅದರ ಮೇಲೆ ಪಾಕಿಸ್ತಾನವು ಕಾನೂನುಬಾಹಿರವಾಗಿ ನಿಯಂತ್ರಣ ಸಾಧಿಸಿದೆ ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

  • ಪಾಕಿಸ್ತಾನ ಏನು ಮಾಡುತ್ತಿದೆ ?ಎಂಬುದು ಜಗತ್ತಿಗೆ ತಿಳಿದಿದೆ; ಆದರೆ ಭಾರತಕ್ಕೆ ಅದನ್ನು ಬೇರುಸಹಿತ ನಾಶಪಡಿಸಲು ಸಾಧ್ಯವಾಗಿಲ್ಲ ಅಥವಾ ಅಲ್ಲಿನ ಭಯೋತ್ಪಾದಕರನ್ನು ಅಂತ್ಯಗೊಳಿಸಲು ಸಾಧ್ಯವಾಗಿಲ್ಲ ಎಂಬುದು ಜಗಜ್ಜಾಹೀರಾಗಿದೆ !
  • ಭಾರತ ಎಷ್ಟೇ ಪ್ರಗತಿ ಸಾಧಿಸಿದರೂ, ಭಾರತದ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನಗಳನ್ನು ಇಂದಿಗೂ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರ ನೆರಳಿನಲ್ಲೇ ಆಚರಿಸಬೇಕಾಗಿದೆ ಎಂಬುದು ಸಹ ಅಷ್ಟೇ ಸತ್ಯ !