ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿಕೆ

ಭೋಪಾಲ (ಮಧ್ಯಪ್ರದೇಶ) – ಗಂಗಾ ನದಿಯಲ್ಲಿ ದೋಣಿಯ ಮೇಲೆ ಚಿಕನ್ ಬಿರಿಯಾನಿ ತಿನ್ನುವುದು ಅಪರಾಧವಲ್ಲ, ಅದು ಅಪರಾಧವಾಗಿರಲು ಸಾಧ್ಯವೂ ಇಲ್ಲ; ಆದರೆ ಇಂತಹ ಕೃತ್ಯ ಎಸಗಿದವರನ್ನು ಬಂಧಿಸಲಾಯಿತು ಮತ್ತು 3 ತಿಂಗಳು ಜೈಲಿನಲ್ಲಿ ಕಳೆಯಬೇಕಾಯಿತು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು ಇಲ್ಲಿ ಹೇಳಿದರು. ಅವರು ಇಲ್ಲಿಯ ‘ನ್ಯಾಷನಲ್ ಲಾ ಇನ್ಸ್ಟಿಟ್ಯೂಟ್ ಯುನಿವರ್ಸಿಟಿ’ಯಲ್ಲಿ ನ್ಯಾಯಮೂರ್ತಿ ಜಿ.ಪಿ. ಸಿಂಗ್ ಅವರ 4 ನೇ ಸ್ಮರಣಾರ್ಥ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.
ನ್ಯಾಯಮೂರ್ತಿ ಭುಯಾನ್ ಅವರು ಮಾತು ಮುಂದುವರಿಸಿ,
1. ತಮ್ಮ ವಿಚಾರಗಳನ್ನು ಮಂಡಿಸುವ ಮತ್ತು ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕು ನಾಗರೀಕರ ಮೂಲಭೂತ ಸ್ವಾತಂತ್ರ್ಯದಲ್ಲಿದೆ. ವಾದ-ವಿವಾದಗಳು ಪ್ರಜಾಪ್ರಭುತ್ವದ ಆತ್ಮವಾಗಿದೆ; ಆದರೆ ಇತ್ತೀಚೆಗೆ ಸಾಮಾನ್ಯ ವಿಷಯಗಳನ್ನೂ ಅಪರಾಧೀಕರಣಗೊಳಿಸಲಾಗುತ್ತಿದೆ.
2. ಪರಿಸರ ನಾಶದ ವಿರುದ್ಧ ಪ್ರತಿಭಟಿಸುವವರನ್ನು ಅಪರಾಧಿಗಳಂತೆ ಓಡಿಸಲಾಗುತ್ತದೆ. ಕಾಲೇಜು ಆವರಣದಲ್ಲೇ ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳನ್ನು ಬಂಧಿಸಲಾಗುತ್ತದೆ.
3. ನ್ಯಾಯಾಲಯಗಳು ಸೂಕ್ಷ್ಮವಾಗಿವೆ ಮತ್ತು ಜಾಮೀನು ಮಂಜೂರು ಮಾಡುತ್ತವೆ; ಆದರೆ ಹಲವು ಬಾರಿ ಅದು ವಿಳಂಬವಾಗಿ ಸಿಗುತ್ತದೆ. ಜಾಮೀನು ನೀಡುವಾಗ ವಿಧಿಸಲಾಗುವ ಕಠಿಣ ಶರತ್ತುಗಳು ಕಳವಳಕಾರಿ ವಿಷಯವಾಗಿದೆ. ಇಂತಹ ಆದೇಶಗಳಿಂದ ನ್ಯಾಯಾಲಯಗಳು ನಾಗರಿಕರಿಗೆ ಪ್ರತಿಭಟನೆ ನಡೆಸದಂತೆ ಸಂದೇಶ ನೀಡುತ್ತಿವೆಯೇ ?
4. ಬುಲ್ಡೋಜರ್ ನ್ಯಾಯದ ವಿರುದ್ಧದ 2024 ರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸ್ವಾಗತಾರ್ಹವಾಗಿತ್ತು; ಆದರೆ ಅದು 2 ವರ್ಷ ವಿಳಂಬವಾಗಿ ಬಂತು.
5. ನಿವೃತ್ತಿಯ ನಂತರ ಮಾಜಿ ನ್ಯಾಯಾಧೀಶರು ರಾಜಕೀಯಕ್ಕೆ ಹೋಗುವ ಪ್ರವೃತ್ತಿಯ ಕುರಿತು ಮಾತನಾಡುತ್ತಾ, ಇದರಲ್ಲಿ ವೈಚಾರಿಕ ದೋಷವಿದೆ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದರು.
ತೀರ್ಪಿನ ಮೇಲಿನ ಟೀಕೆ ಎಂದರೆ ನ್ಯಾಯಾಧೀಶರ ಮೇಲಿನ ಟೀಕೆಯಲ್ಲ ! – ನ್ಯಾಯಮೂರ್ತಿ ಭುಯಾನ್
ವಿದ್ಯಾರ್ಥಿಗಳು ನ್ಯಾಯವ್ಯವಸ್ಥೆಯಂತಹ ಸಂಸ್ಥೆಗಳನ್ನು ಪ್ರಶ್ನಿಸಬೇಕು ಎಂದು ನ್ಯಾಯಮೂರ್ತಿ ಭುಯಾನ್ ಕರೆ ನೀಡಿದರು. ನ್ಯಾಯಾಲಯದ ತೀರ್ಪನ್ನು ವಿಶ್ಲೇಷಿಸಬೇಕು ಮತ್ತು ಅಗತ್ಯವಿದ್ದರೆ ಅದರ ಮೇಲೆ ಟೀಕೆಯನ್ನೂ ಮಾಡಬೇಕು. ಯಾವುದೋ ಒಂದು ತೀರ್ಪಿನ ಮೇಲಿನ ಟೀಕೆ ಎಂದರೆ ಅದು ನ್ಯಾಯಾಧೀಶರ ಮೇಲಿನ ಟೀಕೆಯಲ್ಲ ಎಂದೂ ಭುಯಾನ್ ಸ್ಪಷ್ಟಪಡಿಸಿದರು.
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ
ಪೋಷಕರು ಮತ್ತು ಹಿರಿಯರು ಇಂದಿನ ಯುವ ಪೀಳಿಗೆಯೊಂದಿಗೆ ಸಂವಾದ ನಡೆಸಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್