ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ

ಮಸೀದಿಗೆ ಹೋಗದಂತೆ ತಡೆದಿದ್ದಕ್ಕಾಗಿ 5 ಜನರ ವಿರುದ್ಧ ಪ್ರಕರಣ ದಾಖಲು

ಸಂಭಲ (ಉತ್ತರ ಪ್ರದೇಶ) – ಜಿಲ್ಲೆಯ ಗ್ರಾಮವೊಂದರಲ್ಲಿ 120 ವರ್ಷ ಹಳೆಯ ಮಸೀದಿಯಲ್ಲಿ ನಮಾಜ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ವಿವಾದವೊಂದು ಬೆಳಕಿಗೆ ಬಂದಿದೆ. ಧುನ್ನಾ ಸಮುದಾಯದ ಮುಸ್ಲಿಂ ಕುಟುಂಬವೊಂದು ತಮ್ಮನ್ನು ಟರ್ಕಿ ಸಮುದಾಯದ ಕೆಲವು ಮುಸ್ಲಿಮರು ಶುಕ್ರವಾರದ ನಮಾಜ ಮಾಡುವುದರಿಂದ ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ದೂರಿನ ನಂತರ ಪೊಲೀಸರು 5 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರುದಾರರು, ತಮ್ಮನ್ನು ಕೇವಲ ಮಸೀದಿಗೆ ಪ್ರವೇಶಿಸದಂತೆ ತಡೆಯುವುದು ಮಾತ್ರವಲ್ಲದೆ, ಸಾಮಾಜಿಕ ಬಹಿಷ್ಕಾರ, ಕೊಲೆ ಬೆದರಿಕೆ ಮತ್ತು ಗ್ರಾಮ ತೊರೆಯುವಂತೆ ಒತ್ತಡವನ್ನೂ ಹೇರಲಾಗುತ್ತಿದೆ, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳಲ್ಲಿನ ಜಾತಿ, ಸಮುದಾಯಗಳ ಕುರಿತು ಟೀಕೆ ಮಾಡುವವರು ಮುಸ್ಲಿಮರಲ್ಲಿನ ಜಾತಿ-ಪದ್ಧತಿಗಳ ಕುರಿತು ಮೌನ ವಹಿಸುತ್ತಾರೆ !