‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)

ರಾಜಕೀಯ ಪ್ರವೇಶದ ಕುರಿತು ಕಾಕ್ರೋಚ್ ಜನತಾ ಪಕ್ಷದ ನಿಲುವು

ನವದೆಹಲಿ – ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆಯ ನೈತಿಕ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ ಅವರು ತಮ್ಮ ಶಿಕ್ಷಣ ಸಚಿವ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದು ಕಾಕ್ರೋಚ್ ಜನತಾ ಪಕ್ಷದ ಗೆಲುವು ಎಂದು ಹೇಳಲಾಗುತ್ತಿದೆ. 36 ದಿನಗಳ ಸುದೀರ್ಘ ಪ್ರತಿಭಟನೆಯನ್ನು ಹಿಂಪಡೆದ ನಂತರ, ‘ಅವರ ಪಕ್ಷ ರಾಜಕೀಯ ಪ್ರವೇಶಿಸಲಿದೆಯೇ?’ ಎಂದು ಪಕ್ಷದ ವಕ್ತಾರರನ್ನು ಪ್ರಶ್ನಿಸಲಾಯಿತು. ಈ ಕುರಿತು ಮಾತನಾಡಿದ ಪಕ್ಷದ ವಕ್ತಾರರಾದ ಆಶುತೋಷ ರಾಂಕಾ ಮತ್ತು ಸೌರವ ದಾಸ್ ಅವರು ಈ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

ದಾಸ ಅವರು ಮಾತನಾಡುತ್ತಾ, ಯುವಕರ ಚಳವಳಿಗೆ ಶಕ್ತಿ ತುಂಬುವುದೇ ನಮ್ಮ ಮುಖ್ಯ ಆದ್ಯತೆಯಾಗಿದೆ. ಸದ್ಯಕ್ಕೆ ನಮ್ಮ ಧ್ಯೇಯವು ಈ ಚಳವಳಿಯನ್ನು ತಳಮಟ್ಟದವರೆಗೆ ಕೊಂಡೊಯ್ಯುವುದೇ ಆಗಿದೆ. ಭಾರತದಲ್ಲಿ ಈಗಾಗಲೇ 750 ರಿಂದ 800 ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿದ್ದು, ಯಾವುದೇ ಪಕ್ಷವೂ ಯುವಕರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಚಳವಳಿಯನ್ನು ತಳಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅವರು ಯುವಕರ ಬೇಡಿಕೆಗಳನ್ನು ಈಡೇರಿಸಲೇಬೇಕು ಮತ್ತು ಅವರಿಗಾಗಿ ಕೆಲಸ ಮಾಡಲೇಬೇಕು. ಇದೇ ನಮ್ಮ ನೀತಿಯಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ದೆಹಲಿ ಚಳವಳಿಯಲ್ಲಿ ತಮ್ಮ ವೇದಿಕೆಯಲ್ಲಿ ಹಿಂದೂ ದೇವತೆಗಳ ಅಪಹಾಸ್ಯ ಮಾಡಿದ ಕುಣಾಲ್ ಕಾಮರಾ, ಕಲಂ 370 ಅನ್ನು ಮತ್ತೆ ಜಾರಿಗೊಳಿಸುವಂತೆ ರಾಷ್ಟ್ರಘಾತಕ ಬೇಡಿಕೆ ಇಟ್ಟ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಸಂಸದ ಆಗಾ ಸಯ್ಯದ್ ರೂಹುಲ್ಲಾ ಮೆಹದಿ, ಹಿಂದೂದ್ವೇಷಿ ಹೇಳಿಕೆ ನೀಡುವ ನಟ ಪ್ರಕಾಶ ರಾಜ ಅವರಂತಹ ಜನರಿಗೆ ಸ್ಥಾನ ನೀಡುವ ‘ಕಾಕ್ರೋಚ್ ಜನತಾ ಪಕ್ಷ’ದಿಂದ ಯುವಕರಲ್ಲಿ ಎಂತಹ ಜಾಗೃತಿ ಮೂಡಲು ಸಾಧ್ಯ ?