|
ಲಂಡನ್ (ಬ್ರಿಟನ್) – ಕೊರೊನಾ ವಿರುದ್ಧ ಬಳಸುವ ಕೋವ್ಹಿಶೀಲ್ಡ್ ಲಸಿಕೆಯಿಂದ ಮನುಷ್ಯನ ದೇಹದ ಮೇಲೆ ದುಷ್ಪರಿಣಾಮ ಬೀರಬಹುದು, ಎಂದು ಈ ಲಸಿಕೆಯನ್ನು ತಯಾರಿಸಿದ ಅಸ್ಟ್ರಾಜೆನೆಕಾ ಕಂಪನಿಯು ಬ್ರಿಟನ್ನಲ್ಲಿನ ಒಂದು ನ್ಯಾಯಾಲಯದಲ್ಲಿ ಸ್ವಿಕೃತಿ ನೀಡಿದೆ.
#Covishield Vaccine Side Effect : ‘कोव्हिशिल्ड’ लसीमुळे हृदयविकाराचा झटका येऊ शकतो !#AstraZeneca आस्थापनाची #Britain मधील न्यायालयात स्वीकृती !
दुर्मिळ प्रकरणातच असे होऊ शकते, त्यामुळे घाबरू नये ! – अॅस्ट्राझेनेकाचा दावा
https://t.co/3mWhbY541G#HeartAttack #Covishield pic.twitter.com/u6c3oUqchv— Sanatan Prabhat (@SanatanPrabhat) April 30, 2024
ಕಂಪನಿ ನ್ಯಾಯಾಲಯದಲ್ಲಿ ಹೇಳಿರುವ ಪ್ರಕಾರ, ಕೋವ್ಹಿಶೀಲ್ಡ್ ಲಸಿಕೆಯಿಂದ ತ್ರೋಂಬೋ ಸೈಟೋಪೆಮಿಯಾ ಸಿಂಡ್ರೋಮ್ ನ ಲಕ್ಷಣಗಳು ಕಂಡುಬರಬಹುದು. ಇದರಿಂದ ರಕ್ತದ ಗಂಟುಗಳ ನಿರ್ಮಾಣವಾಗಿ ಹೃದಯಾಘಾತ ಆಗುವುದು, ಬ್ರೆನ್ ಸ್ಟ್ರೋಕ್ ಆಗುವುದು, ಪ್ಲೇಟಲೇಟ್ಸ (ರಕ್ತದಲ್ಲಿನ ಒಂದು ರೀತಿಯ ಅಂಶ) ಕಡಿಮೆ ಆಗುವುದು ಮುಂತಾದವು ಆಗಬಹುದು; ಆದರೆ ಇದು ಕೇವಲ ಅತ್ಯಂತ ದುರ್ಲಭ ಸ್ಥಿತಿಯಲ್ಲಿ ಆಗಬಹುದು. ಆದ್ದರಿಂದ ಸಾಮಾನ್ಯ ಜನರು ಹೆದರುವ ಅವಶ್ಯಕತೆ ಇಲ್ಲ. ಭಾರತದಲ್ಲಿ ಅಸ್ಟ್ರಾಜೆನೆಕಾ ಆಕ್ಸ್ಫರ್ಡ್ ಕಾಲೇಜ್ (ಬ್ರಿಟನ್) ಮತ್ತು ಸಿರಮ್ ಇನ್ಸ್ಟಿಟ್ಯೂಟ್ (ಪುಣೆ) ಸಂಸ್ಥೆಗಳು ಸೇರಿ ಕೋವ್ಹಿಶೀಲ್ಡ್ ಲಸಿಕೆಯನ್ನು ತಯಾರಿಸಿದ್ದರು. ಅದರ ನಂತರ ಈ ಲಸಿಕೆ. ಭಾರತದ ಜೊತೆಗೆ ಜಗತ್ತಿನಾದ್ಯಂತ ಎಲ್ಲಾ ನಾಗರಿಕರಿಗೆ ನೀಡಲಾಗಿತ್ತು.
ಏನು ಈ ಪ್ರಕರಣ ?೧ . ಬ್ರಿಟನ್ ನಲ್ಲಿ ಜಮೀ ಸ್ಕಾಟ್ ಎಂಬ ವ್ಯಕ್ತಿಯು ಅಸ್ಟ್ರಾಜೆನೆಕಾ ಕಂಪನಿಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ಅಸ್ಟ್ರಾಜೆನೆಕಾ ದ ಲಸಿಕೆ ಪಡೆದ ನಂತರ ಸ್ಕಾಟ್ ಅವರ ಮೆದುಳಿಗೆ ಹಾನಿ ಉಂಟಾಗಿದೆ. ಈ ಲಸಿಕೆಯಿಂದ ಅವರಿಗೆ ಅನೇಕ ಶಾರೀರಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದು ಅವರು ದೂರಿದ್ದರು. ೨. ಜೇಮೀ ಸ್ಕಾಟ್ ರಂತೆಯೇ ಅನೇಕರು ಈ ಲಸಿಕೆಯ ದುಷ್ಪರಿಣಾಮದ ಬಗ್ಗೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು ತಮಗಾಗಿರುವ ಹಾನಿಯ ಪರಿಹಾರ ಕಂಪನಿ ನೀಡಬೇಕೆಂದು ಕೇಳುತ್ತಿದ್ದಾರೆ. ಇನ್ನೊಂದೆಡೆ ಕಂಪನಿಯು ಈ ಬಗ್ಗೆ ಸ್ವೀಕೃತಿ ನೀಡಿದ್ದರೂ ಕೂಡ ಪರಿಹಾರ ನೀಡಲು ನಿರಾಕರಿಸಿದೆ. ಕಂಪನಿಯ ಪ್ರಕಾರ, ಇಷ್ಟು ದೊಡ್ಡ ಪ್ರಮಾಣದ ಲಸಿಕೆಗಳು ನೀಡಿದ ನಂತರ ಇಂತಹ ಸಮಸ್ಯೆಗಳು ಕೆಲವು ಜನರಲ್ಲಿಯೇ ಕಂಡು ಬರುವುದು ಸಹಜ. ೩. ಈಗ ಈ ಲಸಿಕೆ ಸುರಕ್ಷತೆಯ ದೃಷ್ಟಿಯಿಂದ ಬ್ರಿಟನ್ ನಲ್ಲಿ ನೀಡಲಾಗುತ್ತಿಲ್ಲ. ಸದ್ಯ ಈ ಪ್ರಕರವು ನ್ಯಾಯಾಲಯದಲ್ಲಿದ್ದು ನ್ಯಾಯಾಲಯವು ಅರ್ಜಿದಾರರ ದಾವೆಗಳನ್ನು ಒಪ್ಪಿದರೆ ಕಂಪನಿಗೆ ಹೆಚ್ಚಿನ ಹಣ ಪರಿಹಾರ ನೀಡಬೇಕಾಗುತ್ತದೆ. |