ಭಾರತೀಯ ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನಿ ದಾಳಿ ಪ್ರಕರಣ; ಒಂದು ವರ್ಷದ ನಂತರ ಕ್ರಮ ಕೈಗೊಳ್ಳುತ್ತಿರುವ ಅಮೇರಿಕಾ !

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದಲ್ಲಿನ ಸ್ಯನ್ ಫ್ರಾನ್ಸಿಸ್ಕೋ ದಲ್ಲಿ ಮಾರ್ಚ್ ೧೮.೨೦೨೩ ರಂದು ಭಾರತೀಯ ವಾಣಿಜ್ಯ ರಾಯಭಾರಿ ಕಚೇರಿಯ ಮೇಲೆ ನಡೆದಿರುವ ಖಲಿಸ್ಥಾನಗಳ ದಾಳಿಯ ಪ್ರಕರಣದಲ್ಲಿ ಅಲ್ಲಿನ ಸರಕಾರವು ೧೦ ಆರೋಪಿಗಳ ವಿರುದ್ಧ ಲುಕ್ ಔಟ್ ನೋಟಿಸ್ (ಪರಾರಿ ಆರೋಪಿಗಳನ್ನು ಹುಡುಕುವ ಒಂದು ಪ್ರಕ್ರಿಯೆ) ಪ್ರಸಾರ ಮಾಡಿರುವ ಪ್ರಕ್ರಿಯೆ ಆರಂಭಿಸಿದೆ. ಈ ದಾಳಿಯಲ್ಲಿ ಸಹಭಾಗಿ ಆಗಿರುವ ಖಲಿಸ್ತಾನಿ ಸಂಘಟನೆಗಳಿಗೆ ಇನ್ನು ಮುಂದೆ ಆಂದೋಲನಕಾರರೆಂದು ಪರಿಗಣಿಸದೆ ಅವರ ಮೇಲೆ ಅಪರಾಧ ಕ್ರಮ ಕೈಗೊಳ್ಳಲಾಗುವುದು, ಎಂದು ಅಮೇರಿಕಾದ ಅಪರಾಧ ತನಿಖೆ ವ್ಯವಸ್ಥೆ ಎಫ್ ಬಿ ಐ ಹೇಳಿದೆ. ಎಫ್ ಬಿ ಐ ಇಂತಹ ಸಂಘಟನೆಗಳ ಮೇಲೆ ಕ್ರಿಮಿನಲ್ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವ ಯೋಜನೆ ರೂಪಿಸುತ್ತಿದೆ ಮತ್ತು ಅನೇಕರ ಹೆಸರುಗಳನ್ನು ಕೂಡ ದೃಢಪಡಿಸಿದೆ. ವಿಚಿತ್ರವೆಂದರೆ ಈ ಹಿಂದೆ ಇಂತಹ ಖಲಿಸ್ತಾನಿ ಸಮರ್ಥಕ ಸಂಘಟನೆಗಳ ಚಟುವಟಿಕೆಗಳನ್ನು ಅಮೇರಿಕಾ ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಪರಿಗಣಿಸುತ್ತಿತ್ತು.

೧. ದಾಳಿಯ ಸಮಯದಲ್ಲಿ ವಾಣಿಜ್ಯ ರಾಯಭಾರಿ ಕಚೇರಿಯಲ್ಲಿ ನುಗ್ಗಿ ಖಲಿಸ್ತಾನಿಗಳು ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದರು. ಈ ದಾಳಿಯಲ್ಲಿ ರಾಯಭಾರಿ ಕಚೇರಿಗೆ ಹಾನಿ ಉಂಟಾಗಿ ಕೆಲವು ಅಧಿಕಾರಿಗಳು ಕೂಡ ಗಾಯಗೊಂಡಿದ್ದರು. ಅದಾದ ಬಳಿಕ ಜುಲೈ ೧.೨೦೨೩ ರ ಮಧ್ಯರಾತ್ರಿ ಖಲಿಸ್ತಾನಿಗಳು ಮತ್ತೊಮ್ಮೆ ರಾಯಭಾರಿ ಕಚೇರಿಗೆ ನುಗ್ಗಿ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದರು.

೨. ಎಫ್ ಬಿ ಐ ನ ಅಧಿಕಾರಿಗಳ ಪ್ರಕಾರ, ಖಲಿಸ್ತಾನಿ ಅಪರಾಧಿಗಳ ಹೆಸರು ಮತ್ತು ಪಾಸ್ಪೋರ್ಟ್ ಇದಲ್ಲದೆ ಬಯೋಮೆಟ್ರಿಕ್ಸ್ (ಕೈ ಗುರುತು ಮುಂತಾದ ಮಾಹಿತಿ) ನೀಡಬೇಕು. ಈ ಮಾಹಿತಿಯಿಂದ ಅಪರಾಧಿಗಳ ಹುಡುಕಾಟ ನಡೆಸುವುದು ಸುಲಭವಾಗುವುದು.

೩. ಎಫ್ ಬಿ ಐ ಖಲಿಸ್ತಾನಿ ಸಂಘಟನೆಗಳಿಗೆ ಸಿಗುವ ಆರ್ಥಿಕ ಹರಿವಿನ ವಿಚಾರಣೆ ಕೂಡ ನಡೆಸುತ್ತಿದೆ. ಖಲಿಸ್ತಾನಿ ಸಂಘಟನೆಯ ಸಮರ್ಥಕರು ಕಳ್ಳ ಸಾಗಾಣಿಕೆಯಂತಹ ಅಪರಾಧಗಳಲ್ಲಿ ಸಹಭಾಗಿ ಇರುವುದು, ಇದು ಕೂಡ ಈ ಹಿಂದೆಯೇ ಬೆಳಕಿಗೆ ಬಂದಿತ್ತು.

ಸಂಪಾದಕೀಯ ನಿಲುವು

ಒಂದು ವರ್ಷದ ನಂತರ ಅಮೇರಿಕಾ ಈ ಬಗ್ಗೆ ಕ್ರಮ ಕೈಗೊಳ್ಳುತ್ತದೆ, ಎಂದರೆ ಇದನ್ನು ನಂಬುವುದು ಹೇಗೆ? ಜಗತ್ತಿಗೆ ಮತ್ತು ಭಾರತಕ್ಕೆ ತೋರಿಸುವದಕ್ಕಾಗಿ ಅಮೇರಿಕಾ ಕ್ರಮ ಕೈಗೊಳ್ಳುವ ನಾಟಕವಾಡುತ್ತಿದೆಯೇ? ಇದನ್ನು ಗಮನಿಸಬೇಕು. ಅಮೇರಿಕಾ ಭಾರತದ ಸ್ನೇಹಿತನಲ್ಲ ಎಂಬುದನ್ನು ಶಾಶ್ವತವಾಗಿ ಗಮನದಲ್ಲಿಡಬೇಕು.