Indian Medical Association Warned: ಪತಂಜಲಿ ಪ್ರಕರಣದಲ್ಲಿ ‘ಇಂಡಿಯನ್ ಮೆಡಿಕಲ್ ಅಸೋಸಿಎಶನ್’ನ ಅಧ್ಯಕ್ಷರು ನ್ಯಾಯಾಲಯದ ಕುರಿತು ಟೀಕಿಸಿದ ಬಗ್ಗೆಯೂ ಸುಪ್ರೀಂ ಕೋರ್ಟ್ ಆಲಿಸಲಿದೆ

ನವದೆಹಲಿ – ಪತಂಜಲಿ ಆಯುರ್ವೇದ ವಿರುದ್ಧ ತಪ್ಪುದಾರಿಗೆಳೆಯುವ ಜಾಹೀರಾತಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇದೀಗ ‘ಇಂಡಿಯನ್ ಮೆಡಿಕಲ್ ಅಸೋಸಿಎಶನ್’ (‘ಐಎಂಎ’) ಅನ್ನು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯದ ಬಗ್ಗೆ ಹೇಳಿಕೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಹೇಳಿದೆ. ಈ ಪ್ರಕರಣದ ವಿಚಾರಣೆಯಲ್ಲಿ, ‘ಅರ್ಜಿದಾರರಾದ ಐ.ಎಂ.ಎ. ಕೂಡ ತನ್ನ ಸ್ವಂತ ಮನೆಯನ್ನು ಕ್ರಮವಾಗಿ ಇರಿಸಬೇಕಾಗುತ್ತದೆ. ಅವರ ವೈದ್ಯರು ದುಬಾರಿ ಮತ್ತು ಅನಗತ್ಯ ಔಷಧಗಳನ್ನು ಬರೆದಿದ್ದಾರೆ ಎಂಬ ಆರೋಪವೂ ಇದೆ. ಒಂದು ಬೆರಳು ತೋರಿಸಿದರೆ ಉಳಿದ ಬೆರಳುಗಳು ನಿಮ್ಮ ದಿಕ್ಕಿನತ್ತ ಇರುತ್ತದೆ’ ಎಂದು ನ್ಯಾಯಾಲಯದ ವಿಭಾಗೀಯ ಪೀಠ ಹೇಳಿತ್ತು. ಈ ಸಲಹೆ ಮೇರೆಗೆ ಐ.ಎಂ.ಎ. ಅಧ್ಯಕ್ಷ ಡಾ. ಆರ್.ವಿ. ಅಶೋಕನ್ ಅವರು ಪ್ರತಿಕ್ರಿಯೆ ನೀಡಿ ನ್ಯಾಯಾಲಯದ ಟಿಪ್ಪಣೆಯ ಕುರಿತು ಪ್ರಶ್ನಿಸಿದ್ದರು.

1. ಸಂದರ್ಶನವೊಂದರಲ್ಲಿ ಅಶೋಕನ್ ಅವರು ಸುಪ್ರೀಂ ಕೋರ್ಟ್‌ನ ಟಿಪ್ಪಣೆಯ ಕುರಿತು ‘ಈ ಭಾಷೆ ಸೂಕ್ತವಲ್ಲ’ ಎಂದು ಹೇಳಿದ್ದರು. ಈ ಬಗ್ಗೆ ಪತಂಜಲಿ ಪರ ವಕೀಲ ಮುಕುಲ್ ರೋಹತಗಿ ಇವರು ನ್ಯಾಯಾಲಯದ ಗಮನ ಸೆಳೆದರು. ಅವರು, ಐ.ಎಂ.ಎ. ಅಧ್ಯಕ್ಷರ ಸಂದರ್ಶನವನ್ನು ನಾನು ನೋಡಿದ್ದೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ‘ನ್ಯಾಯಾಲಯವು ನಮ್ಮತ್ತ ಏಕೆ ಬೆರಳು ತೋರಿಸುತ್ತಿದೆ ಎಂದು ಅವರು ಹೇಳಿದರು. “ಇಂತಹ ಟಿಪ್ಪಣೆಗಳು ನ್ಯಾಯಾಂಗ ಪ್ರಕ್ರಿಯೆಯಲ್ಲಿ ನೇರ ಹಸ್ತಕ್ಷೇಪವಾಗಿದೆ. ಸುಪ್ರೀಂ ಕೋರ್ಟ್‌ನ ಹೇಳಿಕೆ ಏಕಪಕ್ಷೀಯವಾಗಿದ್ದು, ಈ ರೀತಿ ವರ್ತಿಸಬಾರದು ಎಂದು ಹೇಳಿದ್ದರು. ಅದಕ್ಕೆ ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸಿದರು. ‘ಅಂಥದ್ದೇನಾದರೂ ಇದ್ದರೆ ಅದನ್ನು ನ್ಯಾಯಾಲಯದಲ್ಲಿ ಮಂಡಿಸಿ. ಇಂತಹದ್ದೇನಾದರೂ ನಡೆದರೆ ಅದರ ಪರಿಣಾಮ ಈಗ ಆಗುತ್ತಿರುವುದಕ್ಕಿಂತ ಗಂಭೀರವಾಗಿರುತ್ತದೆ ಎಂದು ವಿಭಾಗೀಯ ಪೀಠ ಹೇಳಿದೆ.

2. ದಾರಿತಪ್ಪಿಸುವ ಜಾಹೀರಾತುಗಳಿಗಾಗಿ ಯೋಗಿಶಿ ರಾಮದೇವ್ ಬಾಬಾ ಮತ್ತು ಪತಂಜಲಿ ಆಯುರ್ವೇದ ವಿರುದ್ಧ ಐ.ಎಂ.ಎ. ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದಂತೆ ಯೋಗಋಷಿ ರಾಮದೇವ್ ಬಾಬಾ ಮತ್ತು ಪತಂಜಲಿ ಆಯುರ್ವೇದ ಕೂಡ ಕ್ಷಮೆಯಾಚಿಸಬೇಕಾಯಿತು.

ಸಂಪಾದಕೀಯ ನಿಲುವು

ಈ ಅಧ್ಯಕ್ಷರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಸುಪ್ರೀಂ ಕೋರ್ಟ್ ಆದೇಶಿಸಬೇಕು ಎಂದು ಯಾರಾದರೂ ಭಾವಿಸಿದರೆ, ಆಶ್ಚರ್ಯಪಡಬೇಡಿ !